ಬೆಂಗಳೂರು, ಮಾರ್ಚ್ 01 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾದಿಕಾರ, ಭಾರತ ಸರ್ಕಾರ, ನವದೆಹಲಿ ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಹಭಾಗಿತ್ವದಲ್ಲಿ ಯುವ ಆಪದ್ ಮಿತ್ರ ಯೋಜನೆ ಅಡಿಯಲ್ಲಿ ಮಾರ್ಚ್ 03 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ.ಮುಂಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕಚೇರಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ಈ ತರಬೇತಿಯು ಮಾರ್ಚ್ 03 ರಿಂದ 13 ರವರೆಗೆ ನಡೆಯಲಿದ್ದು, ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ರಾಜ್ಯದಿಂದ 40 ಜನ, ತಮಿಳುನಾಡು ರಾಜ್ಯದಿಂದ 60 ಜನ, ತೆಲಂಗಾಣ, ಪಾಂಡಿಚೇರಿ ಮತ್ತು ಅಂಡಮಾನ್ ನಿಕೋಬಾರ್ ರಾಜ್ಯಗಳಿಂದ ತಲಾ 20 ಜನರು ಮತ್ತು ಕೇರಳ ರಾಜ್ಯದಿಂದ 40 ಜನ, ಒಟ್ಟು 200 ಪ್ರಶಿಕ್ಷಣಾರ್ಥಿಗಳಿಗೆ ಯುವ ಆಪದ್ ಮಿತ್ರ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.