*ಶ್ರೀರಾಜೇಂದ್ರತೀರ್ಥ ವಾಕ್ಯಾರ್ಥಸಭಾ* *ಪರೀಕ್ಷಾಸತ್ರ*

VK NEWS
By -
0

ಬೆಂಗಳೂರು:*ಶ್ರೀವ್ಯಾಸರಾಜಮಠ,ಶ್ರೀವ್ಯಾಸತೀರ್ಥವಿದ್ಯಾಪೀಠದ ಸಹಯೋಗದೊಂದಿಗೆ ಶ್ರೀರಾಜೇಂದ್ರತೀರ್ಥ ವಾಕ್ಯಾರ್ಥಸಭಾ ಪರೀಕ್ಷಾಸತ್ರವು ಯಶಸ್ವಿಯಾಗಿ ನಡೆಯಿತು








ಸೋಸಲೆ ಶ್ರೀವ್ಯಾಸರಾಜಮಠದ ಪೀಠಾಧಿಪತಿಗಳಾದ *ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು* ಸ್ಥಾಪಿಸಿದ *ಮೈಸೂರಿನ ಶ್ರೀವ್ಯಾಸತೀರ್ಥ ವಿದ್ಯಾಪೀಠದ* ವತಿಯಿಂದ ಬೆಂಗಳೂರಿನ ಗಾಂಧಿಬಜ಼ಾರಿನ ಶ್ರೀವ್ಯಾಸರಾಜಮಠದಲ್ಲಿ ಎರಡು ದಿನಗಳ ಪರೀಕ್ಷಾಸತ್ರವನ್ನು ಏರ್ಪಡಿಸಲಾಗಿತ್ತು. 

ಮುಂದೆ ಬರಲಿರುವ ಶ್ರೀವ್ಯಾಸರಾಜರ ಆರಾಧನೆಯ ಅಂಗವಾಗಿ ಈ ಪರೀಕ್ಷೆಗಳನ್ನು ನಡೆಸಲಾಯಿತು. 

ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥರು ನೂತನವಾಗಿ ಸಂಸ್ಥಾಪಿಸಿದ *ಶ್ರೀರಾಜೇಂದ್ರತೀರ್ಥಸಭಾ* ” ಅಡಿಯಲ್ಲಿ ನಡೆದ ಈ ಪರೀಕ್ಷಾ ಸತ್ರದಲ್ಲಿ ಅನೇಕ ವಿದ್ಯಾಪೀಠಗಳಿಂದ ಬಂದ ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿದ ಉದ್ಗ್ರಂಥಗಳ ಪರೀಕ್ಷೆಯನ್ನು ನೀಡಿದರು. ಎರಡೂ ದಿನಗಳು ನುರಿತ ಅನೇಕ ವಿದ್ವಾಂಸರು ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಿದರು. *ಶ್ರೀ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು* ಸ್ವತಃ ವಿದ್ಯಾರ್ಥಿಯ ಪರೀಕ್ಷೆಯನ್ನು ಮಾಡಿದರು.

*ಶ್ರೀವ್ಯಾಸರಾಜರ ಗ್ರಂಥಗಳ ಪರೀಕ್ಷೆ* 

ಪರಮಪೂಜ್ಯ ಶ್ರೀಪಾದರು ಶಾಸ್ತ್ರಸಂರಕ್ಷಣೆಯ ಉದ್ದೇಶದಿಂದ ಈ ಪರೀಕ್ಷೆಯನ್ನು ಸಂಕಲ್ಪಿಸಿದ್ದಾರೆ. ಈ ಪರೀಕ್ಷಾಸತ್ರದಲ್ಲಿ ನ್ಯಾಯಾಮೃತ, ತಾತ್ಪಚಂದ್ರಿಕಾ, ಮಂದಾರಮಂಜರೀ, ಭೇದೋಜ್ಜೀವನ ಗ್ರಂಥಗಳ ಪರೀಕ್ಷೆಯು ನಡೆಯಿತು. 

*ಸಮಾರೋಪ*

ಪರೀಕ್ಷಾರ್ಥಿಗಳಿಗೆ ಎರಡನೇ ದಿನದ ಕೊನೆಯಲ್ಲಿ ನಡೆದ ಶ್ರೀವ್ಯಾಸರಾಜರಿಗೆ  ವೈಭವದ ದರ್ಬಾರ್ ಮತ್ತು ರತ್ನಾಭಿಷೇಕ ಕಾರ್ಯಕ್ರಮದಲ್ಲಿ ಉತ್ತಮ ಸಂಭಾವನೆಯ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಬಹುಲಕ್ಷವೆಚ್ಚದ ಈ ಪರೀಕ್ಷಾಸತ್ರದ ಯೋಜನೆಯನ್ನು ಶ್ರೀಪಾದರು ಪ್ರತಿವರ್ಷವೂ ನಡೆಸುವಂತೆ ಸಂಕಲ್ಪಿಸಿದ್ದಾರೆ 

ಶ್ರೀವ್ಯಾಸರಾಜರು ವಿಜಯನಗರದ ಆರು ಮಂದಿ ರಾಜರಿಗೆ ಗುರುವಾಗಿದ್ದವರು. ಶ್ರೀಕೃಷ್ಣದೇವರಾಯನ ಗುರುವಾಗಿ ಅವನಿಗೆ ಮಾರ್ಗದರ್ಶನವನ್ನು ಮಾಡಿದವರು. ಅನೇಕ ಸಮಾಜಸುಧಾರಣಾ ಕಾರ್ಯವನ್ನು ನಡೆಸಿದವರು. ಅವರ ಅಪೂರ್ವಕೃತಿಗಳು ವಿದ್ವತ್ ಪ್ರಪಂಚದಲ್ಲಿ ಅಗ್ರಮಾನ್ಯವಾಗಿದ್ದು ಅವುಗಳ ಪರೀಕ್ಷೆಯನ್ನು ನಡೆಸಲಾಯಿತು ಎಂದು ಗೌರವ  ಕಾರ್ಯದರ್ಶಿ          ಡಾ,ಡಿ.ಪಿ. ಶ್ರೀ ಮಧುಸೂಧನಾಚಾರ್ಯ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ವಿದ್ವಾನ್. ಶ್ರೀ ಸುಘೋಶಾಚಾರ್ಯ ಶ್ರೀವ್ಯಾಸತೀರ್ಥ ವಿದ್ಯಾಪೀಠ ಮೈಸೂರು ಹಾಗು ವಿವಿಧ ವಿದ್ಯಾಪೀಠಗಳ ವಿದ್ವಾಂಸರು ಉಪಸ್ಥಿತರಿದ್ದರು.

Post a Comment

0Comments

Post a Comment (0)