ಬೆಂಗಳೂರು ನಗರ ಜಿಲ್ಲೆ ಏ.24 ( ಕರ್ನಾಟಕ ವಾರ್ತೆ) : 2025ನೇ ಏಪ್ರಿಲ್ 24 ರಂದು ಸಂಜೆ ಸುಮಾರು 6.50 ಗಂಟೆಯಲ್ಲಿ ನಾಗರಭಾವಿ ಹತ್ತಿರುವ ಇರುವ ನಮ್ಮೂರ ತಿಂಡಿ ಹೊಟೇಲ್ ಹತ್ತಿರ ಆರೋಪಿ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್. ಅವರು ಖಾಸಗಿ ವ್ಯಕ್ತಿಯಾದ ಮನೋಜ್ ಎಂ ಎಂಬುವವರ ಕಡೆಯಿಂದ 20 ಲಕ್ಷ ರೂ. ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಸರಕು ಸಾಗಾಣಿಕೆ ಕಂಪನಿಗಳ ಮಾಲೀಕರ ಕಡೆಯಿಂದ ಪ್ರತಿ ತಿಂಗಳು ಲಂಚದ ಹಣವನ್ನು ಪಡೆದುಕೊಂಡು, ದೆಹಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ಪಾನ್ ಮಸಾಲವನ್ನು ಸಾಗಾಣಿಕೆ ಮಾಡುತ್ತಿರುವ ಪಾನ್ ಮಸಾಲ ಸರಕು ಸಾಗಾಣಿಕೆದಾರರಿಗೆ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಲು ಅನುವು ಮಾಡಿಕೊಡುತ್ತಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕರಾದ ಪವನ್ ನೆಟ್ಟೂರ್ ರವರ ಮಾರ್ಗದರ್ಶನದಲ್ಲಿ ವೆಂಕಟೇಶ ಟಿ.ಸಿ ಡಿವೈಎಸ್ಪಿ, ಗಿರೀಶ ಪಾಂಡು ರೋಡಕರ್, ಡಿವೈಎಸ್ಪಿ ಮತ್ತು ಹಾಲಪ್ಪ ವೈ ಬಾಲದಂಡಿ, ಪೊಲೀಸ್ ಇನ್ಸೆ÷್ಪಕ್ಟರ್, ಚಂದ್ರಕಾAತ ಎಲ್.ಟಿ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ ಹಣದ ಮಾಲು ಸಮೇತ ಅರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಇಂತಹ ಘಟನೆಗಳಿಂದಾಗಿ ಕರ್ನಾಟಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದರು. ಪದೀಯ ಕಾರ್ಯಕ್ಕೆ ಸಂಬAಧಿಸಿದAತೆ ಪಾಲಿಸಬೇಕಾದ ಕಾನೂನನ್ನು ಪಾಲಿಸದೆ ಖಾಸಗಿ ಕಂಪನಿ ಹಾಗೂ ಖಾಸಗಿ ಜನರಿಗೆ ಕಾನೂನು ಬಾಹಿರ ಲಾಭ ಮಾಡಿಕೊಡುವ ಸಲುವಾಗಿ ಲಂಚದ ಹಣವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆಯನ್ನು ಮಾಡಿ ಸಾಗಾಣಿಕೆದಾರರ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಲು ಅನುಕೂಲವನ್ನು ಮಾಡಿಕೊಟ್ಟು ಅಪರಾಧಿಕ ನಂಬಿಕೆ ದ್ರೋಹವನ್ನು ಎಸಗಿ ಸರ್ಕಾರಕ್ಕೆ ಮೋಸಮಾಡಿ ಅಕ್ರಮ ನಷ್ಟವನ್ನುಂಟು ಮಾಡುತ್ತಿರುವ ಬಗ್ಗೆ ಇದ್ದಂತಹ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಮೊ. ಸಂ 06/2025 ಕಲಂ 7(ಚಿ),7(b),8,9,10 ಪಿ.ಸಿ ಆಕ್ಟ್ 1988 (ತಿದ್ದುಪಡಿ 2018) ಜೊತೆಗೆ 318(2)(3), 336(2), ಭಾರತೀಯ ನ್ಯಾಯ ಸಂಹಿತೆ-2023 ರೀತ್ಯ ದಿನಾಂಕ: 23-04-2025 ರಂದು ಪ್ರಕರಣ ದಾಖಲು ಮಾಡಲಾಗಿರುತ್ತೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.