ಪಹಲ್ಗಾಮ್ ನಲ್ಲಿ ಹಿಂದುಗಳ ಹತ್ಯೆ: ಆರ್.ಬಿ.ಐ ಲೇಔಟ್ ವಿಶ್ವೇಶ್ವರಯ್ಯ ಕಟ್ಟೆಯಿಂದ ಸೋಮೇಶ್ವರ ಭವನದವರೆಗೆ ಕ್ಯಾಂಡಲ್ ದೀಪ ಹಿಡಿದು ಪ್ರತಿಭಟನೆ

VK NEWS
By -
0

 23-04-2025 ರ ಸಂಜೆ 7 ಘಂಟೆಗೆ ಜೆ.ಪಿ. ನಗರ 7ನೇ ಮತ್ತು 8ನೇ ಹಂತದ ನಿವಾಸಿ ನಾಗರೀಕರ ಬಳಗದವರು ಆಯೋಜಿಸಿದ್ದ ಮೌನ ಮೆರವಣಿಗೆಯ ವರದಿ. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪಾಕೀಸ್ತಾನ ಪ್ರಾಯೋಜಿತ ಉಗ್ರಗಾಮಿ ಭಯೋತ್ಪಾದಕ ಗುಂಪುಗಳಿಗೆ ಸೇರಿದ ದುಷ್ಕರ್ಮಿಗಳು ಹಿಂದುಗಳನ್ನು ಹತ್ಯೆ ಮಾಡಿದ ದುಷ್ಕೃತ್ಯವನ್ನು ಖಂಡಿಸಿ ಹಾಗೂ ಧರ್ಮವನ್ನು ಆಧಾರವಾಗಿಟ್ಟುಕೊಂಡು ಹಿಂದು ಪುರುಷರನ್ನು ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು. 



ಈ ಭಾಗದ ಬಿಜೆಪಿಯ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗು ಸಾರ್ವಜನಿಕರು, ಮಹಿಳೆಯರು ಎಲ್ಲರೂ ಸೇರಿ ಸರಿಸುಮಾರು 250 ಜನ ಭಾಗವಹಿಸಿದ್ದರು. ಆರ್.ಬಿ.ಐ ಲೇಔಟ್ ಬಳಿ ಇರುವ ವಿಶ್ವೇಶ್ವರಯ್ಯ ಕಟ್ಟೆಯಿಂದ ಹಿಡಿದು ಸೋಮೇಶ್ವರ ಭವನದವರೆಗೆ ಕ್ಯಾಂಡಲ್ ದೀಪದ ಹಿಡಿದು ಮತ್ತು ಘೋಷಣೆಗಳನ್ನು ಹಾಕುತ್ತಾ ಮೆರವಣಿಗೆ ಸಾಗಿತು. 

ನಂತರ ಹತ್ಯಾಕಾಂಡದಲ್ಲಿ ಮೃತಪಟ್ಟ ಹಿಂದು ಬಾಂಧವರಿಗೆ ಎರಡು ನಿಮಿಷದ ಮೌನಾಚರಣೆ ಮಾಡಿವ ಮೂಲಕ ಅವರಿಗೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. 

ವರದಿ : ರಂಗನಾಥ ನಂಜನಗೂಡು



Post a Comment

0Comments

Post a Comment (0)