ಒಡಿಶಾದ ಕಟಕ್‌ನಲ್ಲಿ ಇಂದು (ಗುರುವಾರ) ಆರಂಭವಾಗುವ 71ನೇ ರಾಷ್ಟ್ರೀಯ ಸೀನಿಯರ್ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಬೆಂಗಳೂರಿನ ಎಚ್‌ಎಂಟಿ ಕಾಲೋನಿ ಬಾಯ್ಸ್ ತಂಡದ ಕಿರಣ್ ಆಯ್ಕೆಯಾಗಿದ್ದಾರೆ.
ಖ್ಯಾತ ಕಬಡ್ಡಿ ಆಟಗಾರರಾದ ಆರ್.ಶೇಖರ್ ಅವರ ಪುತ್ರ ಕಿರಣ್ ರವರು ಸಹ ತಾವು ಅನುಭವಿ ಪ್ರತಿಭಾನ್ವಿತ ಕಬಡ್ಡಿ ಆಟಗಾರರೆಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಈ ಹಿಂದೆ ಜೂನಿಯರ್ ಮತ್ತು ಸಬ್-ಜೂನಿಯರ್ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಮತ್ತು ಎರಡು ಬಾರಿ ಬೆಂಗಳೂರು ವಿಶ್ವವಿದ್ಯಾನಿಲಯಕ್ಕಾಗಿ ಆಡಿದ್ದಾರೆ, ತಂಡವನ್ನು ಒಮ್ಮೆ ನಾಯಕನಾಗಿಯೂ ಮುನ್ನೆಡಿಸಿದ್ದಾರೆ.
ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಈ ಬಾರಿ ತಂಡಕ್ಕೆ ಕಿರಣ್ ಅವರ ಆಯ್ಕೆ, ತಂಡವನ್ನು ಹೆಚ್ಚು ಬಲಪಡಿಸಿದೆ ಹಾಗೂ ತಂಡವು ತಮ್ಮೆಲ್ಲರ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ರಾಜ್ಯವು ಚಾಂಪಿಯನ್‌ಶಿಪ್ ಗೆಲ್ಲಬಲ್ಲ ಉತ್ತಮ ಅವಕಾಶ ತಂಡಕ್ಕಿದೆ, ರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ ರಾಜ್ಯವನ್ನು ವಿಜೇತ ತಂಡವಾಗಿಸಿ ಯಶಸ್ಸು ಹಾಗೂ ಕೀರ್ತಿಯನ್ನು ತರಲಿ ಎಂದು ಆಶಿಸಿ ಕಿರಣ್ ಮತ್ತು ಅವರ ಇಡೀ ತಂಡಕ್ಕೆ ಅಭಿಮಾನಿಗಳು ಮತ್ತು ಹಿತೈಷಿಗಳು ಶುಭ ಕೋರಿ ಪ್ರೋತ್ಸಾಹಿಸಿದ್ದಾರೆ.