*ಬ್ರಾಹ್ಮಣರ ಅಭಿವೃದ್ದಿ ಮತ್ತು ಬ್ರಾಹ್ಮಣ ಒಳಿತಿಗಾಗಿ ಶ್ರಮಿಸುವೆ-ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್*

VK NEWS
By -
0

 *ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ-2025 ಅಧ್ಯಕ್ಷಿಯ ಅಭ್ಯರ್ಥಿ ಎಸ್.ರಘುನಾಥ್ ಪರ ಚುನಾವಣೆ ಪ್ರಚಾರ* 

ಬಸವನಗುಡಿ:ಎನ್.ಆರ್.ಕಾಲೋನಿಯಲ್ಲಿರುವ ಪತ್ತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅದ್ಯಕ್ಷೀಯ ಚುನಾವಣೆ- ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರ ಪರ ಚುನಾವಣೆ  ಪ್ರಚಾರ ಸಭೆ.

ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಕಟಪೂರ್ವ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ನಿವೃತ್ತ ನ್ಯಾಯಮೂರ್ತಿಗಳಾದ ಎನ್.ಕುಮಾರ್ ರವರು, ಸಾಹಿತಿಗಳಾದ ಪಾವಗಡ ಪ್ರಕಾಶ್ ರಾವ್,ಕೆ.ಪಿ.ಪುತ್ತುರಾಯರವರು,

ಅರುಳು ಮಲ್ಲಿಗೆ ಪಾರ್ಥಸಾರಥಿ, ಬ್ರಾಹ್ಮಣ ಸಮುದಾಯದ ಮುಖಂಡರುಗಳಾದ , ಎಂ.ಆರ್.ವಿ.ಪ್ರಸಾದ್, ಡಾ.ಎ.ವಿ.ಪ್ರಸನ್ನ, ಬಿಜೆಪಿ ಮುಖಂಡರಾದ ಸುಬ್ಬಣ್ಣರವರು ಭಾಸ್ಕರ್ ಮೂರ್ತಿ, ದತ್ತಾತ್ರಿ, ರಾಘವೇಂದ್ರ ಮೋಕ್ಷಗುಂಡಂ ವಿಶ್ವನಾಥ್ ದಿಕ್ಷೀತ್, ಡಾ||ನಾಗೇಂದ್ರರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. 

*ಎಸ್.ರಘುನಾಥ್ ರವರು* ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯ ಚುನಾವಣೆ ಏಪ್ರಿಲ್ ಎರಡನೇಯ ವಾರದಲ್ಲಿ ನಡೆಯಲಿದೆ. ರಾಜ್ಯಾದ್ಯಂತ ಇರುವ ಬ್ರಾಹ್ಮಣ ಸಮುದಾಯದವರನ್ನ ಭೇಟಿ ಮಾಡಿ ನಮ್ಮ ಸಂಘಟನೆ ಮುಂದಿನ ಯೋಜನೆಗಳನ್ನು ತಿಳಿಸಿ ಮತಯಾಚನೆ ಮಾಡಲಿದ್ದೇನೆ.

ನನಗೆ ರಾಜ್ಯದಲ್ಲಿರುವ ಸಮುದಾಯದ ಪ್ರಮುಖ ಮುಖಂಡರು, ಸದಸ್ಯರುಗಳು ಸಹಕಾರ, ಬೆಂಬಲ ನೀಡುತ್ತಿದ್ದಾರೆ.


ಬ್ರಾಹ್ಮಣ ಸಮುದಾಯದ ಮುಖಂಡರಾದ ಬಿ.ಎನ್.ವಿ.ಸುಬ್ರಮಣ್ಯ ರವರ, ಸಿ.ವಿ.ಎಲ್.ಶಾಸ್ತ್ರಿ  ಮತ್ತು ಲಕ್ಷ್ಮಿಕಾಂತ್ ರವರ ಬೆಂಬಲಿಗರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. 


ವಿರೋಧಿಗಳನ್ನು  ಎದುರಿಸಲು ಮತ್ತು ಅಧಿಕಾರ ಚಲಾಯಿಸಲು ನಮಗೆ ಗೊತ್ತು ಅದರೆ ಕೆಲ ಪಟಭದ್ರ ಹಿತಾಸಕ್ತಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಪ್ರತಿ ಜಿಲ್ಲೆಗೆ ಒಬ್ಬ ಪ್ರತಿನಿಧಿ ಹಾಗೂ ಬೆಂಗಳೂರುನಗರಕ್ಕೆ 3ಪ್ರತಿನಿಧಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಎಲ್ಲ ರೀತಿಯಲ್ಲಿ ನಮ್ಮ ತಂಡವು ಸಹಕಾರ ನೀಡಿದ್ದೇವೆ.

ಬ್ರಾಹ್ಮಣರ ಅಭಿವೃದ್ದಿ ಮತ್ತು ಬ್ರಾಹ್ಮಣರ ಒಳಿತಿಗಾಗಿ ನಮ್ಮ ಕೈಜೋಡಿಸಿ ಒಂದು ತಂಡವಾಗಿ ಸಂಘಟನೆ ಮಾಡೋಣ. 

ಎಲ್ಲ ಹಿರಿಯ ನಾಯಕರು ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದು ಹೇಳಿದರು.

*ಲಕ್ಷ್ಮಿಕಾಂತ್* ರವರು ಮಾತನಾಡಿ ಹಿಂದಿನ ಬಾರಿ ಚುನಾವಣೆ ನಾನು ಮತ್ತು ರಘುನಾಥ್ ರವರ ಸ್ಪರ್ಧೆ ಮಾಡಿದ ಕಾರಣ ಮತಗಳು ವಿಭಜನೆಯಾದ ಕಾರಣದಿಂದ ಮೂರನೇಯ ವ್ಯಕ್ತಿ ಗೆಲವು ಸಾಧಿಸಿದರು.

ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಎಸ್.ರಘುನಾಥ್ ರವರು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಅವರಿಗೆ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದ್ದೇನೆ.

ಬ್ರಾಹ್ಮಣರ ಸಂಘಟನೆ ಮತ್ತು ಬ್ರಾಹ್ಮಣರ ಅಭಿವೃದ್ದಿಗಾಗಿ ನಮ್ಮ ಹೋರಾಟ  ಎಂದು ಹೇಳಿದರು.

*ಜಸ್ಟಿಸ್ ಎನ್. ಕುಮಾರ್* ರವರು ಮಾತನಾಡಿ ಬ್ರಾಹ್ಮಣ ಸಮುದಾಯದ ಮುಖಂಡರಾದ ಎಸ್.ರಘುನಾಥ್ ರವರು ಉತ್ತಮ ಸಂಘಟಕರು, ಸರಳ ವ್ಯಕ್ತಿತ್ವದವರು. 

ಎಲ್ಲರ ವಿಶ್ವಾಸಗಳಿಸಿರುವ ರಘುನಾಥ್ ರವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದರೆ ಎಸ್.ರಘುನಾಥ್ ರವರನ್ನ ಆಯ್ಕೆ ಮಾಡಿ, ಚುನಾವಣೆಯಲ್ಲಿ ಸೋತರು ಕಳೆದ 3ವರ್ಷಗಳಿಂದ ಬ್ರಾಹ್ಮಣ ಸಮುದಾಯ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ.

 ಎಲ್ಲರನ್ನು  ಕರೆದುಕೊಂಡು ಹೋಗುವ ನಾಯಕತ್ವ ಗುಣ ರಘುನಾಥ್ ರಲ್ಲಿ ಇದೆ. ಬ್ರಾಹ್ಮಣ ಮಹಾಸಭಾ ಮತದಾರರು ಯೋಚನೆ ಮಾಡಿ ರಘುನಾಥ್ ರವರ ಸಾಧನೆ ನೋಡಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

ವಿವಿಧ ಜಿಲ್ಲೆಗಳಿಂದ ಬ್ರಾಹ್ಮಣ ಸಮಾಜದ ಮುಖಂಡರು, ಸದಸ್ಯರುಗಳು ಮತ್ತು ವಿಪ್ರ ಸಂಘ, ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ವಿಶೇಷಾಧಿಕಾರಿ ಡಾ.ಎ.ವಿ.ಪ್ರಸನ್ನರವರಿಗೆ ಅಭಿನಂದನಾ ಸಮಾರಂಭ ನೇರವೆರಿತು.

Post a Comment

0Comments

Post a Comment (0)