# ಖ್ಯಾತ ನರ್ತಕಿಯರಾದ
ಮಾಳವಿಕಾ - ಇಂದಿರಾ ನರ್ತನ ಮೋಡಿ
ಬೆಂಗಳೂರು:ರಾಜಧಾನಿ ಈಗ ವಿಭಿನ್ನವಾದ ನೃತ್ಯ ಉತ್ಸವಕ್ಕೆ ಅಣಿ ಯಾಗಿದೆ. ಪ್ರತಿ ಬಾರಿಯೂ ವಿಶೇಷ, ವಿಭಿನ್ನ ಸಂಗೀತ - ನೃತ್ಯ ಸಮಾರಾಧನೆ ಮಾಡುವ ಉಡುಪ ಪ್ರತಿಷ್ಠಾನ ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಫೆ. 22ರ ಸಂಜೆ 5. 30ಕ್ಕೆ ನೃತ್ಯಕಥಾ -ನೃತ್ಯೋತ್ಸವ 4ನೇ ಆವೃತ್ತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಪದ್ಮಶ್ರೀ ಪುರಸ್ಕೃತ ಖ್ಯಾತ ಕಲಾವಿದೆ ಮಾಳವಿಕಾ ಸಾರುಕ್ಕೈ ಅವರು ‘ದರ್ಶನ’ ಮತ್ತು ಆಚಾರ್ಯ ಇಂದಿರಾ ಕಡಂಬಿ ಅವರು
ಅಂಬಲಂ ತಂಡದೊಂದಿಗೆ ‘ಕೊಹಂ- ದಿ ಸರ್ಚ್ ಎಂಬ ವಿಷಯಾಧಾರಿತ ವಿಶೇಷ ನೃತ್ಯ ಪ್ರಸ್ತುತಿ ಮಾಡುತ್ತಿರುವುದು ಬಹು ವಿಶೇಷವಾಗಿದೆ ಎಂದು ನೃತ್ಯೋತ್ಸವ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಬ್ಬರು ಕಲಾವಿದೆಯರೂಮನೋಜ್ಞವಾಗಿ ಅಭಿನಯಿಸಲಿರುವುದನ್ನು ವೀಕ್ಷಿಸುವುದೇ ಒಂದು ಸಂಭ್ರಮವಾಗಿದೆ.
ವಿವರಗಳಿಗೆ 98861 83872 ಸಂಪರ್ಕಿಸಲು ವಿನಂತಿಸ ಲಾಗಿದೆ.
ದಶಮಾನೋತ್ಸವ ಸಂಭ್ರಮ:
ಉಡುಪ ಪ್ರತಿಷ್ಠಾನವು ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆ ಮಾಡುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 292 ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 148 ಸಂಗೀತ ಕಛೇರಿಗಳನ್ನು ವಿವಿಧೆಡೆ ಆಯೋಜನೆ ಮಾಡಿದ ಕೀರ್ತಿಗೆ ಭಾಜನವಾಗಿದೆ. ಇದೀಗ 149ನೇ ಕಾರ್ಯಕ್ರಮ ಸಮರ್ಪಣೆಯಾಗಲಿದೆ ಎಂದು ನೃತ್ಯೋತ್ಸವ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ಖುಷಿಯಿಂದಲೇ ಹೇಳಿದ್ದಾರೆ.