ಕಾರ್ತೀಕ ಶುದ್ಧ ಬಿದಿಗೆ ಭಾವನ ಬಿದಿಗೆ ಎಂದು ಪ್ರಖ್ಯಾತಿ ಹೊಂದಿದೆ. ಈ ದಿನ ಅಕ್ಕ ಭಾವ ಅಥವಾ ಮಗಳು ಅಳಿಯನನ್ನು ಮನೆಗೆ ಕರೆದು ಹಬ್ಬದಡುಗೆ ಮಾಡಿ ಬಡಿಸಿ ಉಡುಗೊರೆ ನೀಡುವರು.ಪ್ರತಿ ವರುಷ ದೀಪಾವಳಿ ಅವರವರ ಮನೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಆಚರಿಸುವುದರಿಂದ , ಹಬ್ಬದ ಮರುದಿವಸ ಅವರನ್ನು ತವರಿಗೆ ಕುಟುಂಬ ಸಮೇತ ಆಹ್ವಾನಿಸಿ ಸತ್ಕರಿಸುವ ಪದ್ಧತಿ ಇದೆ.
ಹಾಗೆಯೇ ತವರಿಗೆ ಹೋಗುವಾಗ ಹೆಣ್ಣು ಮಕ್ಕಳು ಬಾರಿ ಕೈಲಿ ಹೋಗದೆ ಹಣ್ಣು ಹೂವು ತೆಗೆದುಕೊಂಡು ಹೋಗಿ ಕುಟುಂಬದ ಹಿರಿಯರಿಗೆ ನೀಡುವರು.
ಗೋಪೂಜೆ ಮರುದಿನ ಕೂಡಾ ಮಾಡಬಹುದು.
ಬಲಿ ಪಾಡ್ಯಮಿ ದಿನ ಹಸುಗಳ ಮೈತೊಳೆದು ಕೆಮ್ಮಣ್ಣು ಹಚ್ಚಿ ಅವುಗಳ ಕೊರಳಿಗೆ ಚೆಂಡು ಹೂವಿನ ಮಾಲೆ ಹಾಕಿ , ಹಸುವಿಗೆ ಅರಿಶಿಣ ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರ ಇಟ್ಟು ತಿನ್ನಲು ಅಕ್ಕಿ, ಬೆಲ್ಲ ,ಬಾಳೆಹಣ್ಣು ನೀಡುವರು.ನಂತರ ಅವುಗಳ ಕಟ್ಟು ಬಿಚ್ಚಿ ಪಟಾಕಿ ಸಿಡಿಸುತ್ತಾರೆ.ಗೋವುಗಳು ಓಡುತ್ತವೆ.
ನಂತರ ಅವುಗಳ ಕೊರಲಿನಿಂದ ಚೆಂಡು ಹೂವಿನ ಹಾರ ತಂದು ಮನೆಯಲ್ಲಿ ಬೆಣ್ಣೆ ಕಡೆಯುವ ಗೂಡೆಯ ಗೂಟಕ್ಕೆ ಸಿಕ್ಕಿಸುವ ಪದ್ಧತಿ ಇದೆ.
ವೈಚಾರಿಕವಾಗಿ ನೋಡಿದರೆ ಗೋಪೂಜೆ ನಮ್ಮ ಸಮೃದ್ಧತೆ ಸೂಚಿಸುತ್ತದೆ.ಹೆಣ್ಣುಮಕ್ಕಳ ಸತ್ಕಾರ ಅವರು ತವರಿನ ಅವಿಭಾಜ್ಯ ಅಂಗ ಎಂದು ನೆನಪಿಸುತ್ತದೆ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಅವರವರ ಮನೆಯ ಪದ್ಧತಿ ಎಲ್ಲರೂ ಪಾಲಿಸುತ್ತಾರೆ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com