ನವರಾತ್ರಿಯಲ್ಲಿ ಮೂಲ ನಕ್ಷತ್ರ ದ ದಿನ ಸಪ್ತಮಿ ತಿಥಿ ಇರುವಾಗ ಸರಸ್ವತಿ ಪೂಜೆ ಮಾಡುವರು. ಈ ದಿನ ಮನೆಯಲ್ಲಿನ ಪುಸ್ತಕಗಳು, ಪುರಾಣದ ಪುಸ್ತಕಗಳು, ಮಕ್ಕಳ ಪಠ್ಯ ಪುಸ್ತಕಗಳು, ನೋಟು ಬುಕ್ಕುಗಳು, ಪೆನ್ಸಿಲ್, ಪೆನ್, ರಬ್ಬರ್, ಶಾರ್ಪ್ನರ್, ಜಾಮಿಟ್ರಿ ಬಾಕ್ಸ, ಡ್ರಾಯಿಂಗ್ ಬೋರ್ಡ್, ಸಂಗೀತದ ಸಲಕರಣೆಗಳು ಇತ್ಯಾದಿ ವಿದ್ಯೆಗೆ ಸಂಬಂಧಪಟ್ಟ ವಸ್ತುಗಳನ್ನು ಒಂದು ಕಡೆ ಪೂರ್ವದಿಕ್ಕಿಗೆ ಇಲ್ಲವೇ ಉತ್ತರ ದಿಕ್ಕಿಗೆ ಜೋಡಿಸಿ ಇಡುತ್ತಾರೆ. ಇಂದೆ ಕಳಸ ಇಡುತ್ತಾರೆ.ಹಾಗು ಇಂದಿನಿಂದ ಗೊಂಬೆ ಕೂರಿಸುತ್ತಾರೆ.ಪಟ್ಟದ ಬೊಂಬೆ ಮೊದಲು.ಇದು ಲಕ್ಷ್ಮಿ ನಾರಾಯಣ ಸ್ವರೂಪ.
ಈ ದಿನ ಬೆಳಿಗ್ಗೆ ಸರಸ್ವತಿ ಪೂಜೆ, ಕಳಸ ಪೂಜೆ, ವಿದ್ಯಾ ಸಾಮಗ್ರಿಗಳ ಪೂಜೆ, ನೆರವೇರಿಸಿದ ನಂತರ ಸಂಜೆ ಮಕ್ಕಳನ್ನು, ಮುತ್ತೈದೆಯರು ಬೊಂಬೆ ಆರತಿಗೆ ಕರೆಯುತ್ತಾರೆ.ಮುತ್ತೈದೆಯರಿಗೆ ಬೊಂಬೆ ಆರತಿಯ ನಂತರ ಅರಿಶಿಣ, ಕುಂಕುಮ, ಕೊಟ್ಟು ನಂತರ ವೀಳ್ಯದೆಲೆ, ಅಡಿಕೆ, ಹಣ್ಣುಗಳು, ರವಿಕೆ ಕಣ, ಯಥಾ ಶಕ್ತಿ ದಕ್ಷಿಣೆ ಕೊಟ್ಟು ಮುತ್ತೈದೆಯರಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾರೆ.
ಮಕ್ಕಳ ಕೈಲಿ ಏನಾದರೂ ಹಾಡು ಹೇಳಿಸಿ(ಕಡ್ಡಾಯ ಏನಿಲ್ಲ) ಕುರುಕಲು/ ಸಿಹಿ ತಿಂಡಿ ಅವರಿಗೆ ನೀಡಿ ಕಳಿಸುತ್ತಾರೆ.
ಚಿಕ್ಕ,ದೊಡ್ಡ ವಿದ್ಯಾ ಸಂಸ್ಥೆಗಳು ಹಾಗು ಎಜುಕೇಶನ್ಗೆ ಸಂಬಂಧಪಟ್ಟ ವ್ಯವಹಾರಸ್ಥರು ಕೂಡಾ ಸರಸ್ವತಿ ಪೂಜೆ ನೆರವೇರಿಸುತ್ತಾರೆ.ಅವರು ತಮ್ಮ ಸೀಲ್, letterhead, application, ರಸೀದಿ ಪುಸ್ತಕ ಕೂಡಾ ಪೂಜೆಗೆ ಇಡುವರು.ಪ್ರಯೋಗಾಲಯ ಶಾಲಾ ಕಾಲೇಜುಗಳಲ್ಲಿ ಇದ್ದರೆ ಅಲ್ಲಿನ ವಸ್ತುಗಳಿಗೆ ಕೂಡಾ ಪೂಜೆ ಮಾಡುವರು.
ಬನ್ನಿ ಎಲ್ಲರೂ ಸರಸ್ವತಿ ಪೂಜೆ ಮಾಡಿ ಸದ್ವಿದ್ಯೆಗಾಗಿ ದೇವಿಯನ್ನು ಪ್ರಾರ್ಥಿಸೋಣ. ವಿದ್ಯಾ ದಾನ ಮಾಡೋಣ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಶಿಕ್ಷಕರಿಗೂ ಸರಸ್ವತಿ ಪೂಜೆ ಕಡ್ಡಾಯ.
ಮರೆಯದಿರಿ ಹೆಣ್ಣನ್ನು ಗೌರವಿಸೋಣ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com