ದುರ್ಗಾ ಪೂಜೆಯು ನವರಾತ್ರಿಯ ಅಷ್ಟಮಿ ತಿಥಿಯಂದು ಪೂಜಿಸಲ್ಪಡುತ್ತದೆ. ಈ ದಿನ ದುರ್ಗಾ ದೇವಿಯನ್ನು ಆವಾಹನೆ ಮಾಡಿ ಪೂಜಿಸುತ್ತಾರೆ.ಇದು ಕರ್ನಾಟಕದಲ್ಲಿ ವಿಜೃಂಭಣೆ ಇಂದ ಆಚರಿಸಲ್ಪಡುತ್ತದೆ. ಈ ದಿನ ದುರ್ಗಾ ಫೋಟೋ ಗೆ , ಅಥವಾ ಕಲಶಕ್ಕೆ ಪೂಜೆ ಮಾಡುವರು.ದೀಪ ನಮಸ್ಕಾರ , ದೀಪದ ಕಂಭಕ್ಕೆ ದುರ್ಗಾ ಪೂಜೆ ಮಾಡುವ ಪದ್ಧತಿ ಕೂಡ ಕೆಲವೆಡೆ ಇದೆ. ಈ ದಿನ ಹಬ್ಬದಡುಗೆ ಮಾಡಿ ಕಡಲೆಬೇಳೆ ಆಂಬೊಡೆ ಅಥವಾ ಒಬ್ಬಟ್ಟು ನೈವೇದ್ಯ ಮಾಡುವರು.ನವರಾತ್ರಿಯ ಇನ್ನೊಂದು ವಿಶೇಷ ಎಂದರೆ ಕನ್ನಿಕೆಯರ ಪೂಜೆ.ಅಂದರೆ ಋತುಮತಿ ಆಗದ ಹೆಣ್ಣು ಮಕ್ಕಳನ್ನು ಮನೆಗೆ ಅವಾನಿಸಿ ಪೂಜಿಸುವರು.ಅಂದರೆ ಅಂಥಹ ಹೆಣ್ಣು ಮಕ್ಕಳನ್ನು ದುರ್ಗಾಷ್ಟಮಿ ದಿನ ಮನೆಗೆ ಅವಾನಿಸುತ್ತಾರೆ.ಹೆಣ್ಣು ಮಕ್ಕಳು ಈ ದಿನ ಅಭ್ಯಂಗ ಸ್ನಾನ ಮಾಡಿ ಒಗೆದ ಅಥವಾ ಹೊಸ ವಸ್ತ್ರ ಧರಿಸಿ ಕರೆದವರ ಮನೆಗೆ ಬರುತ್ತಾರೆ.
ಈ ಹೆಣ್ಣು ಮಕ್ಕಳನ್ನು ಮನೆಯ ಮೇಲೆ ನಿಲ್ಲಿಸಿ ಅವರ ಪಾದಗಳನ್ನು ನೀರಿನಿಂದ ತೊಳೆದು, ಅವರಿಗೆ ಅರಿಶಿಣ,ಕುಂಕುಮ, ಮುಡಿಯಲು ಹೂವು ಮನೆಯವರು ನೀಡುತ್ತಾರೆ. ಈ ಕಲಾಪಗಳನ್ನು ಸಾಮಾನ್ಯವಾಗಿ ಮನೆಯ ಹೆಂಗಸರು ಮಾಡುವರು.ನಂತರ ಹೆಣ್ಣು ಮಕ್ಕಳನ್ನು ಇನ್ನೊಂದು ಮನೆಯ ಮೇಲೆ ಕೂರಿಸಿ ಅವರಿಗೆ ಊಟ ಅಥವಾ ತಿಂಡಿ ಬಡಿಸುತ್ತಾರೆ.ನಂತರ ಅವರಿಗೆ ಮೊರದ ಬಾಗಿನ ಕೊಡುತ್ತಾರೆ.ಇನ್ನು ಕೆಲವರು ರಿಬ್ಬನ್, ಹಣೆಬೊಟ್ಟು,.ರಬ್ಬರ್ ಹೇರ್ ಬ್ಯಾಂಡ್,ಕರ್ಚೀಫ್, ಫ್ರಾಕ್, ಬಳೆಗಳು, ಇತ್ಯಾದಿ ಅಲಂಕಾರ ಅಥವಾ ನಿತ್ಯೋಪಯೋಗಿ ವಸ್ತುಗಳನ್ನು ನೀಡುತ್ತಾರೆ.ನಂತರ ಮನೆ ಮಂದಿಯೆಲ್ಲ ಕನ್ನಿಕೆಯರ ಆಶೀರ್ವಾದ ಬೇಡುತ್ತಾರೆ.ಅವ ರ ಕೈಯಿಂದ ಮಂತ್ರಾಕ್ಷತೆ ತೆಗೆದುಕೊಳ್ಳುತ್ತಾರೆ
ನಂತರ ಹೆಣ್ಣು ಮಕ್ಕಳನ್ನು ಅವರವರ ಮನೆಗೆ ಬೀಲ್ಕೋ ಡುತ್ತಾರೆ. ಈ ಕನ್ನಿಕಾ ಪೂಜೆ ಎಲ್ಲರ ಮನೆಯಲ್ಲೂ ಪದ್ಧತಿ ಇರುವುದಿಲ್ಲ.ಸಾಮಾನ್ಯವಾಗಿ ಬಿಸಿನೆಸ್ ಜನ ಈ ಪದ್ಧತಿ ,ಪೂಜೆ ಪಾಲಿಸುತ್ತಾರೆ.
ಮಿಕ್ಕಂತೆ ದುರ್ಗಾ ಪೂಜೆ ಬಂಗಾಳದಲ್ಲಿ ಬಹಳ ರೂಡಿಯಲ್ಲಿದೆ.
ಹೆಣ್ಣು ಮಕ್ಕಳ ಶೀಲಭಂಗ ಮಾಡುವ ರಾಕ್ಷಸರಿಗೆಲ್ಲ ದುರ್ಗಾ ಪಾಟ ಕಲಿಸುವಳು ಎಂಬ ನಂಬಿಕೆ ಇದೆ
ಬನ್ನಿ ನಾವು ಕೂಡ ದುರ್ಗೆಯನ್ನು ಆರಾಧಿಸೋಣ.
ಮರೆಯದಿರಿ ಹೆಣ್ಣನ್ನು ಗೌರವಿಸೋಣ
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com