ವಿಜಯದಶಮಿಯ ದಿನ ಮನೆಯವರೆಲ್ಲ ಅಭ್ಯಂಗ ಸ್ನಾ ಮಾಡಿ ಹೊಸಾ ಬಟ್ಟೆ ಧರಿಸುತ್ತಾರೆ.ಮನೆಯ ಹಿರಿಯರು ಮನೆದೇವರ ಷೋಡಶೋಪಚಾರ ಪೂಜೆ ಮಾಡುತ್ತಾರೆ.ಮುತ್ತೈದೆಯರಿಗೆ ತಾಂಬೂಲ ನೀಡುತ್ತಾರೆ.ನಂತರ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಅಲ್ಲಿಂದ ಬನ್ನಿ ಪತ್ರೆ ಮನೆಗೆ ತರುತ್ತಾರೆ.
ವಿಜಯದಶಮಿಯ ದಿನ ನಾಡದೇವಿಯ ಪೂಜೆಯೊಂದಿಗೆ ದಸರಾ ಹಬ್ಬ ಮುಕ್ತಾಯವಾಗುತ್ತದೆ.ನವರಾತ್ರಿಯ ಒಂಭತ್ತು ದಿನಗಳು ಶುಭ ಕೆಲಸಗಳಿಗೆ, ಹೊಸ ಕಾರ್ಯ ಆರಂಭಕ್ಕೆ ಒಳ್ಳೆಯದು.ಅದರಲ್ಲೂ ವಿಜಯ ದಶಮಿಯ ದಿನ ಯಾವುದೇ ಕಾರ್ಯ ಆರಂಭ ಮಾಡಿದರೆ ವಿಜಯಮಾಲೆ ಖಂಡಿತ ಎಂದು ನಮ್ಮ ಹಿರಿಯರು ಹೇಳುತ್ತಾರೆ.ಹಾಗಾಗಿ ಈ ದಿನ ಶುಭ ಕೆಲಸಗಳು, ನವ ಆರಂಭಗಳು ಹೆಚ್ಚು.
ಸಂಜೆ ಚಿಕ್ಕ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಸಿಹಿಯನ್ನು ಅವಾನಿಸಿದವರಿಗೆಲ್ಲ ಹಂಚುತ್ತಾರೆ.ಕಳಸ ವಿಸರ್ಜನೆ ಇಂದು ಮಾಡುವರು.ಸಂಜೆ ಗೊಂಬೆ ಆರತಿ ಕೂಡಾ ಇರುವುದು.ಎಲ್ಲ ಕಲಾಪಗಳು ಮುಗಿದ ಮೇಲೆ ಮನೆಯ ಕಿರಿಯರು, ಹಿರಿಯರಿಗೆ ಬನ್ನಿ ಪತ್ರೆ ನೀಡಿ ಆಶೀರ್ವಾದ ಬೇಡುತ್ತಾರೆ.
ಶಮೀ ಶಮಯತೆ ಪಾಪಂ, ಶಮೀ ಶತೃ ನಿವಾರಣಂ
ಅರ್ಜುನಸ್ಯ ಧನುರ್ಧಾರಿ, ರಾಮಸ್ಯ ಪ್ರಿಯಾದರ್ಷನಂ.
ಈ ಶ್ಲೋಕ ಹೇಳಿಕೊಂಡು ಹಿರಿಯರಿಗೆ ಅಕ್ಷತೆ ನೀಡಿ ನಮಸ್ಕರಿಸುತ್ತಾರೆ.
ಈ ಶ್ಲೋಕದ ಅರ್ಥ ಏನೆಂದರೆ ಶಮೀ ಪತ್ರೆ ನಮ್ಮ ಪಾಪವನ್ನು ನಿವಾರಿಸುತ್ತದೆ, ನಮ್ಮ ಶತ್ರು ಗಳನ್ನು ನಿವಾರಿಸುತ್ತದೆ.
ಈ ದಿನ ಅರ್ಜುನ ತನ್ನ ಆಯುಧಗಳನ್ನು ಬನ್ನಿ ವೃಕ್ಷದಿನ್ದ ತೆಗೆದು ಪುನಃ ಧನುಸ್ಸನ್ನು ಧರಿಸಿ ಯುದ್ಧ ಸನ್ನದ್ಧನಾಗುತ್ತಾನೆ.
ಹಾಗು ಈ ದಿನ ರಾಮನು ರಾವನಾಸುರನನ್ನು ಕೊಂದು ಸೀತೆಯೊಂದಿಗೆ ಅಯೋಧ್ಯಪುರ ಪ್ರವೇಶ ಮಾಡಿ ತನ್ನ ಪ್ರಿಯ ಜನರನ್ನು ನೋಡುತ್ತಾನೆ.
ವೈಚಾರಿಕವಾಗಿ ನವರಾತ್ರಿ ಮಹಿಳೆಯರ ಶಕ್ತಿಗೆ ನಮಿಸುವ, ಗೌರವ ತೋರುವ ಹಬ್ಬ.ವಿಜಯ ದಶಮಿ ದಿನ ನಮ್ಮ ಮೈಸೂರು ಸಂಸ್ಥಾನದಲ್ಲಿ ನಾಡ ದೇವಿಯ ಅಂಬಾರಿ ಉತ್ಸವ ನಡೆಯುವುದು.ಅದನ್ನು ನೋಡಲು ದೇಶವಿದೇಶ ಗಳಿಂದ ಜನ ಆಗಮಿಸುವರು.
ಮೈಸೂರು ದಸರಾ ಆಚರಣೆ ಗಮನಾರ್ಹವಾದುದು.ಹಾಗೆಯ ಕೊಡಗಿನ ದಸರಾ ಕೂಡಾ ಈ ನಡುವೆ ಪ್ರಸಿದ್ಧವಾಗಿದೆ.
ಸಾಮಾನ್ಯವಾಗಿ ನವರಾತ್ರಿಯಲ್ಲಿ ಹೆಣ್ಣು ದೇವರುಗಳಿಗೆ ದಿನಾಲು ಒಂದೊಂದು ಅಲಂಕಾರ ಮಾಡುವರು.ಜನರು ಸಾಮಾನ್ಯವಾಗಿ ನವರಾತ್ರಿಯಲ್ಲಿ ಪ್ರತಿದಿನ ಹೆಣ್ಣು ದೇವರ ಗುಡಿಗಳಿವೆ ಹೋಗುತ್ತಾರೆ.
ಹೀಗೆ ವಿಜಯದಶಮಿಯ ದಿನ ದಸರಾ ಮುಕ್ತಾಯ ಆಗುತ್ತದೆ.ಆದರೆ ಮರೆಯದಿರಿ ಹೆಣ್ಣನ್ನು ನವರಾತ್ರಿಯ ಹೊರತು ಬೇರೆ ದಿನಗಳಲ್ಲೂ ಗೌರವಿಸೋಣ.ರಕ್ಷಿಸೋಣ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com