ಮಾರನವಮಿ

VK NEWS
By -
0


 ಮಾರನವಮಿ ಹಬ್ಬ

ಮಹಾನವಮಿ ಅಥವಾ ಮಾರನವಮಿ ಎಂದು ನವರಾತ್ರಿಯ ನವಮಿ ದಿನ ಪ್ರಖ್ಯಾತವಾಗಿದೆ. ಈ ದಸರಾ ಸಂಭ್ರಮಕ್ಕೆ ವಿಜಯನಗರದ ಅರಸರ ಕಾಲದಿಂದಲೂ ಪುರಾವೆಗಳಿವೆ.ಮಹಾನವಮಿ ದಿಬ್ಬ ಎಂಬ ಸ್ಥಳ ಹಂಪೆಯಲ್ಲಿ ಕಾಣಸಿಗುತ್ತದೆ.

ಈ ದಿನದ ಇನ್ನೊಂದು ವಿಶೇಷ ಎಂದರೆ ಆಯುಧ ಪೂಜೆ. ಈ ಪೂಜೆಗೆ ಮಹಾಭಾರತದ ಕಥೆ ಉಂಟು. ಈ ದಿನ ಮನೆಯ ಮಷಿನರಿ ವಸ್ತು ಹಾಗು ಆಯುಧಗಳಿಗೆ ಪೂಜೆ ಮಾಡುವರು. ಟೀವೀ, ರೇಡಿಯೋ, ಟೈಲರಿಂಗ್ ಮೆಶಿನ್, ಮಿಕ್ಸಿ, ಗ್ರೈಂಡರ್, ಗ್ಯಾಸ್ ಸ್ಟವ್, ಎಲೆಕ್ಟ್ರಿಕ್ ಸ್ಟವ್, ಐರನ್ ಬ್ಯಾಕ್ಸ, ಫ್ರಿಜ್, ಚಾಕು,ವಾಷಿಂಗ್ ಮೆಶಿನ್, ಡಿಶ್ ವಾಷರ್, ಕಾರು, ಸ್ಕೂಟಿ, ಸೈಕಲ್, ಇತ್ಯಾದಿ ವಾಹನಗಳು ಈ ದಿನ ಪೂಜಿಸಲ್ಪಡುತ್ತವೆ.ಆಟೋ, ಟ್ಯಾಕ್ಸಿ, ಲಾರಿ, ಬಸ್ ಇತ್ಯಾದಿ ವಾಹನಗಳಿಗೂ ಅವುಗಳ ಮಾಲಿಕರು ಪೂಜೆ ಮಾಡುತ್ತಾರೆ.ಇತರೆ ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್, ಮೆಶಿನ್ ವಸ್ತುಗಳ ಅಂಗಡಿಗಳು ಪೂಜೆ ಮಾಡುತ್ತಾರೆ.ಬೀರು, ಅಲ್ಮರಾ, ತಿಜೋರಿ ಪೂಜೆ ಕೂಡಾ ನಡೆಯುತ್ತದೆ.


ಈ ದಿನ ಮಾರನವಮಿ ಮಗನಿಗೆ ಎಂಬ ಮಾತಿನಂತೆ ಗಂಡು ಮಕ್ಕಳಿಗೆ ಅಭ್ಯಂಗ ಸ್ನಾನ ಮಾಡಿಸಿ ಹಬ್ಬದಡುಗೆ ಮಾಡುತ್ತಾರೆ.ಪಾಯಸ, ಒಬ್ಬಟ್ಟು, ತಟ್ಟೆ ಇಡ್ಲಿ ಅಥವಾ ಇಡ್ಲಿ ತಯಾರಿಸುತ್ತಾರೆ.ಎಂದಿನಂತೆ ಸಂಜೆ ಗೊಂಬೆಗೆ ಆರತಿ ಇದ್ದೆ ಇರುತ್ತದೆ.ಗೊಂಬೆ ಆರತಿಗೆ ಬರುವ ಮಕ್ಕಳಿಗೆ ವಿಧ ವಿಧ ತಿಂಡಿ ತಯಾರಿಸುತ್ತಾರೆ.

ಈ ದಿನ ನರ್ಸಿಂಗ್ ಹೋಂ, ಪ್ರಿಂಟಿಂಗ್ ಪ್ರೆಸ್ ಮುಂತಾದ ಕಡೆ ಕೂಡಾ ಪೂಜೆ ನಡೆಯುತ್ತದೆ.ನಮ್ಮ ಕಡೆ ವಿಶೇಷ ಏನೆಂದರೆ ಈ ದಿನ ಪೂಜೆ ಮಾಡಿದ ಮೇಲೆ ಆ ವಸ್ತುವನ್ನು ಉಪಯೋಗಿಸುವಂತಿಲ್ಲ.ಒಂದರ್ಥದಲ್ಲಿ ಈ ದಿನ ಅವುಗಳಿಗೆ ವಿಶ್ರಾಂತಿ.ಹಾಗಾಗಿ ಕೆಲವರು ವಿಜಯದಶಮಿಯ ದಿನ ಆಯುಧ ಪೂಜೆ ಮಾಡುವರು.

ಈ ಹಬ್ಬಕ್ಕೆ mnc ಕಂಪನಿ ಹಾಗು ಫ್ಯಾಕ್ಟರಿ ಯ ಮಾಲಿಕರು ತಮ್ಮ ತಮ್ಮ ನೌಕರರಿಗೆಲ್ಲ ಸಿಹಿಯ ಡಬ್ಬಿ ಯೊಂದಿಗೆ ಏನಾದರು ಉಡುಗೊರೆ ನೀಡುವ ಪದ್ಧತಿ ಇದೆ.ಹಾಗು ಕಡ್ಲೇಪುರಿ ಕೂಡಾ ನೀಡುತ್ತಾರೆ.ಸಿಹಿ ಕಡಲೆಹಿಟ್ಟು ಕೆಲವರು ಹಂಚುತ್ತಾರೆ.

 ಕೆಲವು ಕಡೆ ಈ ದಿನ ಪೂಜೆ ಮಾಡಿದ ವಸ್ತುಗಳನ್ನು ನಂತರ ಒಮ್ಮೆ ಉಪಯೋಗಿಸಿ ನೋಡುವ ಪದ್ಧತಿ ಇದೆ.ಉದಾಹರಣೆಗೆ ವಾಹನ ಮಾಲಿಕರು ತಮ್ಮ ತಮ್ಮ ವಾಹನಗಳಿಗೆ ಪೂಜೆ ಮಾಡಿ ಅದರ ಚಕ್ರಗಳ ಅಡಿಯಲ್ಲಿ ನಿಂಬೆ ಹಣ್ಣು ಇಟ್ಟು , ವಾಹನಕ್ಕೆ ಬೂದುಗುಂಬಳ ದ ಮೇಲೆ ಕರ್ಪೂರ ಇಟ್ಟು ಆರತಿ ದೃಷ್ಟಿ ನಿವಾರಣೆಗೆ ಮಾಡಿ ಅದನ್ನು ಎಡಪ್ರದಕ್ಷಿಣೆ ಮಾಡಿ ಅಂದರೆ ವಾಹನಕ್ಕೆ ನಿವಾಳಿಸಿ ಒಡೆಯುತ್ತಾರೆ.ನಂತರ ವಾಹನಗಳನ್ನು ಸ್ಟಾರ್ಟ್ ಮಾಡಿ ಅದನ್ನು ನಿಂಬೆಹಣ್ಣಿನ ಮೇಲೆ ಹತ್ತಿಸಿ  ಒಂದು ಸುತ್ತು ವಿಹಾರ ಹೋಗಿ ಬರುತ್ತಾರೆ.ಗುಡಿಗೆ ಹೋಗಿ ಪೂಜೆ ಮಾಡಿಸುವುದು ಉಂಟು.

 ವೈಚಾರಿಕವಾಗಿ ನೋಡಿದರೆ ಇದು ಮನುಷ್ಯರ ಜೀವನದ ಅವಿಭಾಜ್ಯ ಅಂಗಗಳಾದ ವಾಹನ, ಮೆಶಿನ್ ಇತ್ಯಾದಿಗೆ ನಾವು ತೋರುವ ಪ್ರೀತಿ ಹಾಗೂ ಗೌರವ.ಕಂಪನಿಯ ಮಾಲೀಕರು ನೌಕರರಿಗೆ ತೋರುವ ಕೃತಜ್ಞತೆ.

 ಬನ್ನಿ ಆಯುಧಪೂಜೆ ಮಾಡಿ ಸಂಬ್ರಮಿಸೋಣ

ಮರೆಯದಿರಿ ಹೆಣ್ಣನ್ನು ಗೌರವಿಸೋಣ.

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ brahmies@gmail.com


Post a Comment

0Comments

Post a Comment (0)