* ಮಧುರ ಗಾಯನದಲ್ಲಿ ಶ್ರೀನಿವಾಸ ಕಲ್ಯಾಣದ ದಾಸರಪದಗಳು ಲಭ್ಯ
* ಖ್ಯಾತನಾಮರ ಪ್ರವಚನವೂ ಅಡಕ
* ಮುಂಬರುವ ದಿನಗಳಲ್ಲಿ ಅನೇಕ ದಾಸ ಸಾಹಿತ್ಯದ ಉಗಾಭೋಗ , ಸಂಪ್ರದಾಯ ಪದಗಳು, ಸುಳಾದಿ ಎಲ್ಲವೂ ಲಭ್ಯವಾಗುವುದು
ಬೆಂಗಳೂರು : ಬೆಂಗಳೂರಿನ ಜನಪ್ರಿಯ ಗಾಯಕಿಯರಾದ, ರೂಪಶ್ರೀ ಪ್ರಭಂಜನ, ರಾಗಿಣಿ ಸನತ್ ಮತ್ತು ಅನುಷಾ ರಾಘವೇಂದ್ರ ಅವರು ‘ದಾಸಾರ್ಪಣ’ ಯೂ ಟ್ಯೂಬ್ ಚಾನಲ್ ಲೋಕಾರ್ಪಣೆಗೊಳಿಸಿದ್ದಾರೆ.
ಇದರಲ್ಲಿ ಸುಶ್ರಾವ್ಯ ಶೈಲಿಯ ಶ್ರೀನಿವಾಸ ಕಲ್ಯಾಣದ ಕೆಲವು ದಾಸರ ಪದಗಳು ಲಭ್ಯವಿದೆ ಹಾಗೂ ಮುಂಬರುವ ದಿನಗಳಲ್ಲಿ ಪೂರ್ಣ ಶ್ರೀನಿವಾಸ ಕಲ್ಯಾಣದ ಹಾಡುಗಳು ಬರುವುದು . ವಿವಿಧ ಮಠಾಧೀಶರ ಮತ್ತು ಹಿರಿಯ ವಿದ್ವಾಂಸರ ಪ್ರವಚನಗಳನ್ನೂ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.
ಹರಿದಾಸ ಸಾಹಿತ್ಯದ ಹರಿಕಾರರೆಂದೇ ಖ್ಯಾತರಾದ ಶ್ರೀಪಾದರಾಜರಿಂದ ಪ್ರಾರಂಭಿಸಿ ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ರಾಘವೇಂದ್ರ ಸ್ವಾಮಿಗಳು, ದಾಸವರೇಣ್ಯ ಪುರಂದರದಾಸರು, ಕನಕದಾಸರಿಂದ ಶ್ರೀ ಶ್ಯಾಮಸುಂದರದಾಸರವರೆಗೂ ಬರುವ ಹರಿದಾಸ- ಹರಿದಾಸಿಯರ ಅನೇಕ ಕೃತಿಗಳನ್ನು ಹಾಗೂ ದಾಸ ಸಾಹಿತ್ಯದ ಅಪಾರ ಕೊಡುಗೆಯನ್ನು ಪ್ರಪಂಚಕ್ಕೆ ಪ್ರಸಾರ ಸೇವೆ ಮಾಡುವುದು ಚಾನೆಲ್ ಉದ್ದೇಶವಾಗಿದೆ. ಹರಿದಾಸ ಸಾಹಿತ್ಯಾಭಿಮಾನಿಗಳು ಮತ್ತು ಪ್ರವಚನ ಕೇಳುಗರು ಈ ಕೆಳಗಿನ ಲಿಂಕ್ (ಕೊಂಡಿ) ಮೂಲಕ ಚಾನಲ್‌ಗೆ ಭೇಟಿ ನೀಡಬಹುದು ಎಂದು ಗಾಯಕಿಯರಾದ ರೂಪಶ್ರೀ ಪ್ರಭಂಜನ, ಅನುಷಾ ರಾಘವೇಂದ್ರ ಹಾಗೂ ರಾಗಿಣಿ ಸನತ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯೂ ಟ್ಯೂಬ್ ಚಾನಲ್ ......ಲಿಂಕ್ ..
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ :
9964246317