ದಸರಾ ಎಂದರೆ ಮೈಸೂರು.ಮೈಸೂರು ನಮ್ಮ ನಾಡು.ಹಾಗಾಗಿ ದಸರಾ ನಮ್ಮ ಹಬ್ಬ.ನಮ್ಮ ನಾಡ ಹಬ್ಬ.ದಸರಾದಲ್ಲಿ ಶಕ್ತಿ ದೇವತೆ ಆರಾಧನೆ ಪ್ರಮುಖವಾದದ್ದು.ಇದು ನವರಾತ್ರಿ ಎಂದು ಪ್ರಖ್ಯಾತಿ ಪಡೆದಿದೆ.ನವ ದಿನಗಳಲ್ಲಿ ಕ್ರಮವಾಗಿ 3 ದಿನಗಳು ಲಕ್ಷ್ಮಿ, ಸರಸ್ವತಿ, ಪಾರ್ವತಿ ಆರಾಧನೆಗೆ ಮೀಸಲಾಗಿವೆ. ಈ ಹಬ್ಬದಲ್ಲಿ ಪ್ರತಿ ಹಿಂದೂ ಮನೆಗಳಲ್ಲಿ ಗೊಂಬೆ ಕೂರಿಸುವುದು ವಿಶೇಷ.ಅದರಲ್ಲೂ ಈಗ ಸ್ಪರ್ಧೆಗಳು ಸಾಮಾನ್ಯವಾಗಿವೆ.ಒಂದು ಥೀಮ್ಗೆ ಅನುಗುಣವಾಗಿ ಗೊಂಬೆ ಕೂರಿಸುವುದು ಈಗಿನ ಪದ್ಧತಿ.ಕೆಲವರು ನವರಾತ್ರಿಯ ಮೊದಲ ದಿನದಿಂದ ಗೊಂಬೆ ಕೂರಿಸಿದರೆ ಕೆಲವರು ಮೂಲ ನಕ್ಷತ್ರ ಸರಸ್ವತಿ ಪೂಜೆಯ ದಿನದಿಂದ ಗೊಂಬೆ ಕೂರಿಸುತ್ತಾರೆ.ಕಳಸ ಇಡುವುದು ಹಾಗೆಯೇ.ಕಳಸ ಇಟ್ಟ ಮೇಲೆ ಮನೆಯಲ್ಲಿ ಮಡಿ ಅನುಸರಣೆ ಕಡ್ಡಾಯ.ಮದುವೆಯ ಸಮಯದಲ್ಲಿ ವಧುವಿನ ಮನೆಯಲ್ಲಿ ಅಲಂಕರಿಸಿ ಕೊಡುವ ಪಟ್ಟದ ಬೊಂಬೆ ಇಲ್ಲಿ ಪ್ರಾಶಸ್ತ್ಯ ಪಡೆದಿವೆ.ಮಿಕ್ಕಂತೆ ಮಕ್ಕಳ ಆಟಿಕೆಗಳು, ಶೋ ಪೀಸ್ ಗಳು ಇತ್ಯಾದಿ.ಕೆಲವರು ಹುಲ್ಲು ಬೆಳೆಸಿ, ಹೂವಿನ ಕುಂಡ ಇಟ್ಟು ಪಾರ್ಕ್ ಸಜ್ಜು ಮಾಡುವುದು ಇದೆ. ಈ ಹಬ್ಬದ ಇನ್ನೊಂದು ವಿಶೇಷ ಏನೆಂದರೆ ಪುಟ್ಟ ಪುಟ್ಟ ಮಕ್ಕಳು ಪ್ರತಿ ಮನೆಗೂ ಬೊಂಬೆ ನೋಡಲು ಗುಂಪಾಗಿ ಹೋಗುವುದು.ಸಂಜೆ ಬೊಂಬೆ ಆರತಿಗೆ ಮಕ್ಕಳನ್ನು, ಮುತ್ತೈದೆಯರನ್ನೂ ಕರೆಯುತ್ತಾರೆ.
ಮುತ್ತೈದೆಯರಿಗೆ ತಾಂಬೂಲ ನೀಡಿದರೆ, ಮಕ್ಕಳಿಗೆ ಏನಾದರೂ ತಿಂಡಿ ಕೊಡುತ್ತಾರೆ.ಒಂಭತ್ತು ದಿನವೂ ವಿಧ ವಿಧ ತಿಂಡಿ ಮಾಡುತ್ತಾರೆ.ಮಕ್ಕಳು ಪ್ರತಿ ಮನೆಯಲ್ಲೂ ತಮಗೆ ತೋಚಿದ ಹಾಡು, ಕಥೆ, ಕವನ ಕೆಲವೊಮ್ಮೆ ಜನಪ್ರಿಯ ಸಂಭಾಷಣೆ ಹೇಳುತ್ತಾರೆ.ಎಲ್ಲ ಮನೆಗೆ ಭೇಟಿ ಮಾಡಿದ ನಂತರ ಮಕ್ಕಳು ಸ್ವಗೃಹಕ್ಕೆ ಹಿಂದಿರುಗುತ್ತಾರೆ.
ಈ ಹಬ್ಬದ ಬಗ್ಗೆ ಬಹಳಷ್ಟು ಪೌರಾಣಿಕ ಕಥೆಗಳಿವೆ. ಈ ಹಬ್ಬದಲ್ಲಿ ಮನೆಗಳಶ್ಟೇ ಅಲ್ಲದೆ ಗುಡಿಗಳಲ್ಲಿ , ಶಾಲೆಗಳಲ್ಲಿ ಗೊಂಬೆ ಕೂರಿಸುತ್ತಾರೆ.
ಮೂಲ ನಕ್ಷತ್ರದ ದಿನ ಸರಸ್ವತಿ ಪೂಜೆ, ದುರ್ಗಾಷ್ಟಮಿ ದಿನ ಹೆಣ್ಣು ಮಕ್ಕಳ , ಕನ್ನಿಕೆಯರ ಪೂಜೆ, ಮಾರನವಮಿಯ ದಿನ ಆಯುಧ ಪೂಜೆ, ಕಡೆಗೆ ವಿಜಯದಶಮಿಯ ದಿನ ಬನ್ನಿ ಪೂಜೆ ಯೊಂದಿಗೆ ದಸರಾ ಹಬ್ಬ ಮುಕ್ತಾಯವಾಗುತ್ತದೆ.
ಒಟ್ಟಿನಲ್ಲಿ ಈ ಹಬ್ಬ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ.ವೈಚಾರಿಕವಾಗಿ ನೋಡಿದರೆ ಮಹಿಳೆಯರ ಮಿಲನ ಹಾಗು ಮಕ್ಕಳ ಆತ್ಮ ಸ್ಥೈರ್ಯ, ಪ್ರತಿಭೆಗೆ ಅವಕಾಶ ಇಲ್ಲಿ ಇದೆ. ಈಗ ಗೊಂಬೆ ಕೂ ರಿಸಿರುವ ಫೋಟೋಗಳು ನ್ಯೂಸ್ ಪೇಪರ್, ಹಾಗು ವಿಡಿಯೋ ಗಳು ಟೀವಿ ಚಾನೆಲ್, ಯೂಟ್ಯೂಬ್ ಚಾನೆಲ್, ಫೇಸ್ಬುಕ್, Instagram, WhatsApp ಇತ್ಯಾದಿ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಶೇರ್ ಮಾಡಲ್ಪಡುತ್ತವೆ.
ಬನ್ನಿ ಎಲ್ಲರೂ ಗೊಂಬೆ ಕೂ ರಿಸೋಣ.
ಮರೆಯದಿರಿ ಹೆಣ್ಣನ್ನು ಗೌರವಿಸೋಣ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com