ಬೆಂಗಳೂರು: ಶ್ರೀ ಬಲಮುರಿ ಮಹಾಗಣಪತಿ ಶ್ರೀ ಲಕ್ಷ್ಮಿನಾರಾಯಣ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕೆಂಗೇರಿ ಉಪನಗರ ಇಲ್ಲಿ ವಿಶೇಷ ಶರನ್ನವರಾತ್ರಿ ಕಾರ್ಯಕ್ರಮಗಳು ನಿರಂತರವಾಗಿ ಯಶಸ್ವಿಯಾಗಿ ನಡೆಸುತ್ತಾ ಬಂದಿರುತ್ತದೆ . ಅಂತೆಯೇ ಈ ಬಾರಿಯೂ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ನಡೆಯಲಿರುವ ಶ್ರೀ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರುತ್ತಾ, ಪ್ರತಿದಿನ ಉತ್ಸವ ಕಾಲದಲ್ಲಿ ಸಂಜೆ 4:30 ರಿಂದ ರಾಜರಾಜೇಶ್ವರಿ ಮಹಿಳಾ ಭಜನಾ ತಂಡದಿಂದ ಲಲಿತ ಸಹಸ್ರನಾಮ ಹಾಗೂ ಸೌಂದರ್ಯ ಲಹರಿ ಪಾರಾಯಣ ನಡೆಯುತ್ತದೆ ಪ್ರತಿದಿನ ಮಧ್ಯಾಹ್ನ ಪೂರ್ಣಾವತಿ, ಮಹಾ ಮಂಗಳಾರತಿ ಅನ್ನ ಸಂತರ್ಪಣೆ ನಡೆಯಲಿರುವುದು. ಈ ವಿಶಿಷ್ಟ ಕಾರ್ಯಕ್ರಮದ ಮುಖ್ಯರುವಾರಿಗಳಾದಂತಹ ದಿವಂಗತ ರಾಮದಾಸ್ ಬಟ್ ರವರ ಧರ್ಮಪತ್ನಿ ವಸಂತಿ ರಾಮದಾಸ್ , ಸುಪುತ್ರ ಲಕ್ಷ್ಮೀನಾರಾಯಣ , ಶೃತಿ ಲಕ್ಷ್ಮೀನಾರಾಯಣ್ ಮತ್ತು ಇವರ ಮೊಮ್ಮಗಳು ಕುಮಾರಿ ಶ್ರೀ ವಲ್ಲಿ ಇವರುಗಳು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದಾರೆ.
ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ಸಿಗೆ ಕೈ ಜೋಡಿಸಬೇಕಾಗಿ ಕೋರುತ್ತಿದ್ದೇವೆ