ಆಶ್ವೀಜ ಬಹುಳ ಚತುರ್ದಶಿಯಂದು ನರಕ ಚತುರ್ದಶಿ ಆಚರಿಸಲಾಗುತ್ತದೆ. ಈ ದಿನ ಬೆಳಿಗ್ಗೆ ಎಲ್ಲರೂ ತಲೆಗೆ ಹರಳೆಣ್ಣೆ ಒತ್ತಿಕೊಂಡು ಅಭ್ಯಂಜನ ಸ್ನಾನ ಮಾಡುವರು. ಈ ದಿನ ಎಣ್ಣೆ ಸ್ನಾನ ಮಾಡದಿದ್ದರೆ ಕತ್ತೆ ಜನ್ಮ ಬರುವುದು ಎಂಬ ನಂಬಿಕೆ ಇದೆ.ನಂತರ ಒಗೆದ ವಸ್ತ್ರ ಧರಿಸಿ ನಿತ್ಯ ದೇವರ ಪೂಜೆ ಮಾಡಿ ಹಬ್ಬದ ಅಡುಗೆ ತಯಾರಿಸಿ ಭೋಜನ ಮಾಡುತ್ತಾರೆ. ಈ ದಿನ ಶ್ರೀಕೃಷ್ಣ ನರಕಾಸುರ ವಧೆ ಮಾಡಿದ ನೆನಪಿಗೆ ದೀಪಗಳನ್ನು ಹಚ್ಚಿ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ.
ಈ ಹಬ್ಬಕ್ಕೆ ಮನೆಮಂದಿಯೆಲ್ಲ ಸೇರುವರು.ನಾವೆಲ್ಲ ಈ ಬಾರಿ ಹಸಿರು ದೀಪಾವಳಿ ಆಚರಿಸಿ ಪರಿಸರ ಮಾಲಿನ್ಯ ಕಡಿಮೆ ಮಾಡೋಣ.
ವೈಚಾರಿಕವಾಗಿ ನೋಡಿದರೆ ಅಭ್ಯಂಜನ ಸ್ನಾನ ಆರೋಗ್ಯಕ್ಕೆ ಹಿತ.ದೀಪ ಹಚ್ಚುವುದು ಮನೆಗೆ ಶುಭ.ಪಟಾಕಿ ಸಂಭ್ರಮ ಅಷ್ಟೇ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಎಲ್ಲ ಹಿಂದೂಗಳು ಈ ಹಬ್ಬ ತಮ್ಮ ಪೂರ್ವಿಕರ ಪದ್ಧತಿಯಂತೆ ಆಚರಿಸುವರು.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com