ದೀಪಾವಳಿ ಲಕ್ಷ್ಮಿ ಪೂಜೆ ಬಗ್ಗೆ ಒಂದಿಷ್ಟು ಮಾಹಿತಿ....

VK NEWS
By -
0


ಆಶ್ವೀಜ ಬಹುಳ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವರು.ದೀಪಾವಳಿ ದಿನದಿಂದ ಪಾಡ್ಯಮಿ ಇಂದ ಮಾರವಾಡಿಗಳಿಗೆ ಹೊಸಾ ವರುಷ ಪ್ರಾರಂಭ ಆಗುತ್ತದೆ.ಹಾಗಾಗಿ ಅಮಾವಾಸ್ಯೆ ಲಕ್ಷ್ಮಿ ಪೂಜೆ ಮಾಡಿ ಹಿಂದಿನ ವರುಷದ ಲೆಕ್ಕ ಸರಿ ಮಾಡುತ್ತಾರೆ. ಈ ನಡುವೆ ಎಲ್ಲ ವ್ಯವಹಾರಸ್ಥರು ಅಮಾವಾಸ್ಯೆ ಲಕ್ಷ್ಮಿ ಪೂಜೆ ತಮ್ಮ ವ್ಯವಹಾರದ ಅಭಿವೃದ್ಧಿಗಾಗಿ ಮಾಡುವ ಪದ್ಧತಿ ಪ್ರಾರಂಭ ಆಗಿದೆ.

 ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡುವವರು ಮುತ್ತೈದೆಯರಿಗೆ ಫಲ, ಅಂದರೆ ತೆಂಗಿನಕಾಯಿ ತಾಂಬೂಲ ನೀಡುವರು.ಕೆಲವರು ಈ ದಿನ ತಾಂಬೂಲ ನೀಡುವಾಗ ದಕ್ಷಿಣೆ ನೀಡುವುದಿಲ್ಲ.


 ಮನೆಯಲ್ಲೂ ಲಕ್ಷ್ಮಿ ಪೂಜೆ ಈ ಅಮಾವಾಸ್ಯೆ ಮಾಡಬಹುದು.ಸಾಮಾನ್ಯವಾಗಿ ಅಂಗಡಿ ಪೂಜೆಗೆ ಪುರೋಹಿತರನ್ನು ಕರೆಸುತ್ತಾರೆ. ಈ ದಿನ ಅಂಗಡಿಗೆ ಬರುವ ಎಲ್ಲರಿಗೂ ತಾಂಬೂಲ, ಸಿಹಿ ತಿಂಡಿಯ ಡಬ್ಬಿ ಹಂಚುತ್ತಾರೆ

 ವೈಚಾರಿಕವಾಗಿ ನೋಡಿದರೆ ಈ ದಿನ ವ್ಯವಹಾರ ಲೆಕ್ಕ ಪತ್ರ ಸರಿ, ತಾಳೆ ಮಾಡಲಾಗುತ್ತದೆ.ಹಾಗು ತಮ್ಮ ಖಾಯಂ ಗಿರಾಕಿಗಳಿಗೆ ಉಡುಗೊರೆ ನೀಡಲಾಗುತ್ತದೆ.ಎಲ್ಲ ಹಬ್ಬಗಳಲ್ಲಿ ಮುತ್ತೈದೆಯರಿಗೆ ನೀಡುವ ಪ್ರಾಶಸ್ತ್ಯ ನಮ್ಮ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಇರುವ ಸ್ಥಾನ ತಿಳಿಸುತ್ತದೆ.

 ಸಾಮಾನ್ಯವಾಗಿ ಸಂಜೆ ಕೂಡಾ ಲಕ್ಷ್ಮೀ ಪೂಜೆ ಮಾಡುವರು.ಕೆಲವರು ಕಲಶ ಇಟ್ಟರೆ, ಕೆಲವರು ಲಕ್ಷ್ಮಿ ಫೋಟೋಗೆ ಪೂಜೆ ಮಾಡುವರು.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ತಿಳಿಸುತ್ತದೆ.ಮಿಕ್ಕಂತೆ ಅವರವರ ಪದ್ಧತಿ.ಇದು ಎಲ್ಲ ಹಿಂದೂಗಳು ಆಚರಿಸುವ ಹಬ್ಬ. ಈ ದಿನ ಕೂಡಾ ಪಟಾಕಿ ಸುಡುವುದು ಈ ನಡುವೆ ಆರಂಭವಾಗಿದೆ.

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

brahmies@gmail.com

Post a Comment

0Comments

Post a Comment (0)