ಅಕ್ಟೋಬರ್ 4 ರಿಂದ 6 ಮೂರು ದಿವಸಗಳ ಕಾಲ 8ನೇ ರಾಷ್ಟ್ರಮಟ್ಟದ ಪಿಕಲ್ ಬಾಲ್ ಚಾಂಪಿಯನ್ಶಿಪ್ ಆಲ್ ಇಂಡಿಯಾ ಪಿಕಲ್ ಬಾಲ್ ಅಸೋಸಿಯೇಷನ್ ಹಾಗೂ ಪಿಕಲ್ ಬಾಲ್ ಅಸೋಸಿಯೇಷನ್ ಆಫ್ ಹರಿಯಾಣ ಪಾಣಿಪತ್ ನಲ್ಲಿ ಏರ್ಪಡಿಸಲಾಗಿದೆ.
21 ರಾಜ್ಯಗಳು,500ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರಮಟ್ಟದ ಪಿಕಲ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ.
ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಕರ್ನಾಟಕ ತಂಡವನ್ನು ಆಯ್ಕೆ ಮಾಡಿದ್ದು ಕರ್ನಾಟಕ ತಂಡದಿಂದ ನಿರೂಪ ರಾಜ್, ಪೂರ್ಣಿಮಾ ,ರಘು ಗೌಡ ,ಕಿರಣ್ ಕುಮಾರ್, ಲೋಕೇಶ್ ಆರ್, ಕಾವ್ಯ ಜೆ, ಶರ್ಮದ ಬಾಲು ,ನಾಗೇಂದ್ರ, ನವೀನ್ ಕುಮಾರ್, ವಿಜಯ್ ಕುಮಾರ್, ಗೌತಮ್ ಆರ್, ಆಕಾಶ್ ಎಸ್, ಸ್ವಾತಿ ಅಗರ್ವಾಲ್, ಕವಿತಾ ಕಿರಣ್ ಕುಮಾರ್, ಆದಿತ್ಯ ಪ್ರದೀಪ್, ಇಶಾನ್ ರಿಷಬ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶ್ರೀ ರಜತ್ ಕಂಕರ್ ಜರ್ಸಿ ವಿತರಣೆಯ ವೇಳೆ ಮಾತನಾಡಿ ಈ ಬಾರಿ ಕರ್ನಾಟಕ ತಂಡದಲ್ಲಿ ಅತಿ ಹೆಚ್ಚು ಅನುಭವಿ ಆಟಗಾರರಿದ್ದು ಹಾಗೂ ಹೊಸ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹೆಚ್ಚು ಪದಕವನ್ನು ಕರ್ನಾಟಕಕ್ಕೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜರ್ಸಿ ವಿತರಣೆಯ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದ ಮುಖಂಡರಾದ ರಘು ಗೌಡ ರವರು ಮಾತನಾಡಿ ಕ್ರೀಡಾಪಟುಗಳಿಗೆ ಮುಂದಿನ ದಿವಸದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲಾಗುತ್ತದೆ ಈ ಬಾರಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಅತಿ ಹೆಚ್ಚು ಪದಕವನ್ನು ಸಿಗಲಿ ಎಂದು ಶುಭ ಹಾರೈಸಿದರು.