ಭಾದ್ರಪದ ಕೃಷ್ಣ ಪಕ್ಷದ ಅಮಾವಾಸ್ಯೆವರೆಗಿನ ಕಾಲವನ್ನು ಪಕ್ಷ ಮಾಸ ಎನ್ನುವರು.ಪಿತೃ ಪಕ್ಷ ಕಾಲ ಎಂದು ಹೇಳುವರು.ಪಿತೃ ಎಂದರೆ ನಮ್ಮ ಕುಟುಂಬದ ಗತಿಸಿದ ಹಿರಿಯರು.ಅವರನ್ನು ನೆನೆಯುವ ಕಾಲವೇ ಪಕ್ಷ ಮಾಸ.
ವೈಜ್ಞಾನಿಕ ವಿವರಣೆಗಳೇನೆ ಇದ್ದರೂ ಈ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಗತಿಸಿದ ಹಿರಿಯರಿಗೆ ಶ್ರಾದ್ಧ, ತರ್ಪಣ ಇತ್ಯಾದಿ ಮಾಡುವರು.ತರ್ಪಣ ದಿನಾಲು ನೀಡುವವರು ಇರುವರು.ಮಹಾಲಯ ಅಮಾವಾಸ್ಯೆಎನ್ದು ಹೆಚ್ಚಾಗಿ ತರ್ಪಣ ನೀಡುವವರು ಇರುವರು. ಈ ದಿನ ಪುರೋಹಿತರು ಬಂದು ತರ್ಪಣ ಬಿಡಿಸುವ ಪದ್ಧತಿ ಇದೆ.ಕೆಲವರು ಬೇರೆಯವರ ಮನೆಯಲ್ಲಿ ಈ ಮಾಸದಲ್ಲಿದ್ದರೆ ತುಳಸಿ ಗಿಡದ ಬಳಿ ತರ್ಪಣ ಬಿಡುವರು.
ಇನ್ನು ಶ್ರಾದ್ಧ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುವರು.ಆದರೆ ಹಿಂದೆ ಹಿರಿಯರು ಗತಿಸಿದ ತಿಥಿಯ ದಿನವೇ ಪಕ್ಷ ಮಾಸದಲ್ಲಿ ಶ್ರಾದ್ಧ ಮಾಡುತ್ತಿದ್ದರು.
ಇನ್ನು ಸ್ವಯಂಪಾಕ ಕೊಡುವವರು ಇರುತ್ತಾರೆ. ಮಹಾಲಯ ಅಮಾವಾಸ್ಯೆ ದಿನ ತರ್ಪಣ, ಶ್ರಾದ್ಧ, ಸ್ವಯಂಪಾಕ ನೀಡುವುದು ಹೆಚ್ಚು. ಈ ಪಕ್ಷ ಎಲ್ಲ ಹಿಂದೂಗಳು ಆಚರಿಸುತ್ತಾರೆ.ಅವರವರ ಜಾತಿಯ ಪುರೋಹಿತರನ್ನು ಕರೆದು ಪಕ್ಷ ಆಚರಿಸುತ್ತಾರೆ.
ವೈಚಾರಿಕವಾಗಿ ನೋಡಿದರೆ ಹಿರಿಯರನ್ನು ನೆನೆಯುವ ಪುಣ್ಯಕಾಲ ಇದು.ಒಳ್ಳೆಯದೇ.ಪಕ್ಷದ ಆಹಾರ ಪದಾರ್ಥಗಳು ಆಗಿನ ಕಾಲದಲ್ಲಿ ಸಮರ್ಪಕ ಇರಬಹುದೇನೋ.ದಾನ ಧರ್ಮ ಇತ್ಯಾದಿ ಒಬ್ಬ ಬಡ ಕುಟುಂಬಕ್ಕೆ ಸಹಾಯ.
ಪಕ್ಷ ಮಾಸ ದಾನ ಧರ್ಮ ಹಿರಿಯರ ಹೆಸರಿನಲ್ಲಿ ಮಾಡುವುದಕ್ಕೂ ಪ್ರಶಸ್ತ ಕಾಲ.ತೀರ್ಥಯಾತ್ರೆ ಕೈಗೊಂಡು ತೀರ್ಥ ಶ್ರಾದ್ಧ ಸಹ ಆಚರಿಸಬಹುದು.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ಬಗ್ಗೆ ಇದೆ.ಉಳಿದಂತೆ ಅವರವರ ಮನೆಯ ಪೂರ್ವ ಸಂಪ್ರದಾಯದಂತೆ ಇರುತ್ತದೆ.
ರಾಧಿಕಾ ಜಿ ಎನ್ ಟೀವೀ ಹೋಸ್ಟ್
brahmies@gmail.com