ರಾಜಾಜಿನಗರ : ಶಾಸಕ ಎಸ್.ಸುರೇಶ್ ಕುಮಾರ್ ಮಾರ್ಗದರ್ಶನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

VK NEWS
By -
0

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀರಾಮಮಂದಿರ ವಾರ್ಡ್ ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಮಾಜಿ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜರುಗಿತು.

ಬೆಂಗಳೂರುನಗರ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಬಿಜೆಪಿ ಮುಖಂಡರಾದ ಬಿ.ಎನ್.ಶ್ರೀನಿವಾಸ್, ಟಿ.ಎನ್.ರಮೇಶ್, ಅಮಿತ್ ಜೈನ್,  ವಿಶ್ವನಾಥ, ವಿಜಿಗೌಡ,ಪುಟ್ಟ, ಮಂಜುನಾಥ್, ನಟರಾಜ್ ಶ್ರೀರಾಮಮಂದಿರ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಕಿರಣ್, ಪ್ರಕಾಶನಗರ ವಾರ್ಡ್ ಅಧ್ಯಕ್ಷ ಪ್ರವೀಣ್ ರವರು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದರು.

ವಿಶ್ವದ ಅತಿಡೊಡ್ಡ ಸದಸ್ಯತ್ವ ಇರುವ ಪಕ್ಷ ಬಿಜೆಪಿ ಪಕ್ಷ, ದೇಶ ಮೊದಲು ಎಂದು ರಾಷ್ಟ್ರ ಭಕ್ತಿ ಸಾರಿದ, ಬಿಜೆಪಿ ಪಕ್ಷದ ಕಾರ್ಯಕರ್ತ ಎಂದರೆ ಹೆಮ್ಮೆ ಪಡುವ ಸಂಗತಿ.

ಪ್ರಧಾನಿ ನರೇಂದ್ರಮೋದಿರವರ ನೇತೃತವದಲ್ಲಿ ಮೂರನೇಯ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ.

ಕಳೆದ 11ವರ್ಷದ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಭಾರತ ದೇಶ ಹೊರಹೊಮ್ಮಿದೆ.

ಬಿಜೆಪಿ ಸರ್ಕಾರದ ಸಾಧನೆ ಮತ್ತು ಪ್ರದಾನಿ ನರೇಂದ್ರಮೋದಿರವರ ನಾಯಕತ್ವ ಮೆಚ್ಚಿ ಸಾರ್ವಜನಿಕರು ಸ್ವಯಂಪೇರಿತರಾಗಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆಯುತ್ತಿದ್ದಾರೆ.

Post a Comment

0Comments

Post a Comment (0)