ನೃತ್ಯಾಂಗ' ದ ವತಿಯಿಂದ ಗಣೇಶ ಚತುರ್ಥಿ ನೃತ್ಯೋತ್ಸವ

VK NEWS
By -
0

 ಬೆಂಗಳೂರಿನ ಯುವಕ ಸಂಘದಲ್ಲಿ,2024 ರ ಸೆಪ್ಟೆಂಬರ್ 22 ರಂದು   'ನೃತ್ಯಾಂಗ' ದ ವತಿಯಿಂದ ಗಣೇಶ ಚತುರ್ಥಿ ನೃತ್ಯೋತ್ಸವವನ್ನು ಆಯೋಜಿಸಿದ್ದ ಶ್ರೀಮತಿ ಹೀನಾ ಜೈನ್ ಅವರ ಪ್ರಿನ್ಸೆಸ್ ಡ್ಯಾನ್ಸ್ ಸ್ಟುಡಿಯೋ ಮತ್ತು ದಿ ಫಿಟ್ 24 ಜಿಮ್‌ನ ವತಿಯಿಂದ ಹರ್ಷಿತ್ ಮತ್ತು ತೇಜಸ್ವಿನಿರವರ ಸಹಕಾರದಲ್ಲಿ ಪ್ರಾಯೋಜಿಸಲಾದ ಕಾರ್ಯಕ್ರಮದಲ್ಲಿ, ಪ್ರಸಿದ್ದ ಕಲಾವಿದೆ ಸುಧಾ ಚಂದ್ರನ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.




     ದೇಶದ ವಿವಿಧ ಭಾಗಗಳ ಅಂಧ ಮತ್ತು ವಿಶೇಷ ಸಾಮರ್ಥ್ಯದ ಕಲಾವಿದರಿಗೆ ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ತಮ್ಮ ತಮ್ಮ ಸಾಧನೆ ಹಾಗೂ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಈ ವೇದಿಕೆಯಲ್ಲಿ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಸುಧಾ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.

 ಈ ವೇಳೆ ನಟಿ ಅದ್ವಿತಿ ಶೆಟ್ಟಿ, ಜಯನಗರ ಶಾಸಕರಾದ ಸಿ.ಕೆ.ರಾಮಮೂರ್ತಿ, ಹಿರಿಯ ಬಿಜೆಪಿ ನಾಯಕ ಲಕ್ಷ್ಮೀನಾರಾಯಣ, ಸಮಾಜ ಸುಧಾರಕ ವಿನೋದ್ ಕರ್ತವ್ಯ, ಬಸಂತ್ ಜೈನ್, ರಂಜು ಜೈನ್ ಮತ್ತು ಯಶ್ ಜೈನ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0Comments

Post a Comment (0)