ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 2024ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಶೃಂಗೇರಿ ಶ್ರೀ ಮಠ ಮುದ್ರಾಧಿಕಾರಿಗಳಾದ ವೇದ ಬ್ರಹ್ಮ ಶ್ರೀ ಶ್ರೀಕಾಂತ ಶರ್ಮ ಹಾಗೂ ಮಾಜಿ ಉಪಮುಖ್ಯಮಂತ್ರಿ, ಶಾಸಕರು ಡಾ. ಸಿ ಎನ್ ಅಶ್ವಥ್ ನಾರಾಯಣ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ರಾಜ್ಯದ ಹಿರಿಯ ವಿಪ್ರ ಛಾಯಾಗ್ರಾಹಕರುಗಳಿಗೆ ಛಾಯಾ ಸಾಧಕ ಪ್ರಶಸ್ತಿ ವಿಕರಿಸಿದ ಸನ್ಮಾನ ಶ್ರೀ ಎಸ್ ಸುರೇಶ್ ಮಾಧ್ಯಮ ಛಾಯಾಗ್ರಾಹಕರು, ಶ್ರೀ ಚಂದ್ರಶೇಖರ್ ಎಸ್ ಆರ್, ಶ್ರೀಮತಿ ಕ್ಷಮ ವನ್ಯಜೀವಿ ಛಾಯಾಗ್ರಾಹಕಿ , ಶ್ರೀಮತಿ ವಿಜಯಲಕ್ಷ್ಮಿ , ಶ್ರೀ ಸುಬ್ರಾಯ ಹೊಳ್ಳ ಸಂತೆಬೆನ್ನೂರು, ಶ್ರೀ ರವೀಂದ್ರ ಕುಲಕರಣಿ ಬಿಜಾಪುರ, ಶ್ರೀ ಸುಧೀಂದ್ರ ಪುರೋಹಿತ ಕಲಬುರ್ಗಿ , ಶ್ರೀ ಸತ್ಯನಾರಾಯಣ ಸಾಲಿಗ್ರಾಮ, ಶ್ರೀ ಸತ್ಯನಾರಾಯಣ ಮಂಡ್ಯ, ಶ್ರೀ ಅಚ್ಚುತ ಕಡಿಯ, ಶ್ರೀ ಅಶ್ವತ್ ನಾರಾಯಣ ಚಲನಚಿತ್ರ ಸ್ಥಿರ ಛಾಯಾಗ್ರಾಹಕರು, ಶ್ರೀ ವಾದಿರಾಜ್ ಹೆಚ್‍ಡಿ ಕೋಟೆ ವಿಪ್ರ ಬಿಜಿನೆಸ್ ಫೋರಂ ಅಧ್ಯಕ್ಷರಾದ ಶ್ರೀಯುತ ಜಯತೀರ್ಥ, ಕರ್ನಾಟಕ ರಾಜ್ಯ ಬ್ರಾಹ್ಮಣ ರಾಜಕೀಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ರಾಘವೇಂದ್ರ ಮಯ್ಯ, ಕ್ಯಾನ್ಸರ್ ಸೊಸೈಟಿ ಅಧ್ಯಕ್ಷರಾದ ಶ್ರೀಯುತ ಹೆಚ್.ವಿ ಸುರೇಶ್, ಸೂಪರ್ ಫೋಟೋಸ್ ಕಲರ್ ಲ್ಯಾಬ್ ಮಾಲೀಕರಾದ ಆದಿತ್ಯ ಉಪಾಧ್ಯ ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಯುತ ಬಿ.ಕೆ. ರಮೇಶ್ ಉಪಾಧ್ಯಕ್ಷರಾದ ಶ್ರೀ ಎಸ್ ರಘು, ಕಾರ್ಯದರ್ಶಿ ಶ್ರೀ ಸುಧೀರ್ ಹೆಬ್ಬಾರ್, ಖಜಾಂಚಿ ಶ್ರೀ ಪ್ರದೀಪ್ ಬಿ ಆರ್, ನಿರ್ದೇಶಕರುಗಳಾದ ಶ್ರೀ ಆರ್ ಜಿ ಭಟ್ ಶ್ರೀ ಪ್ರಸನ್ನ ಕುಲಕರ್ಣಿ ಶ್ರೀ ಕಾಶಿ ಸುಬ್ರಮಣ್ಯ ಶ್ರೀ ಪ್ರಸನ್ನ ಎನ್.ಎಸ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಛಾಯಾಗ್ರಾಹಕರುಗಳಿಗೆ ಕಷ್ಟಕಾಲದಲ್ಲಿ ತಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಛಾಯಾ ನಿಧಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ 20,000 ಹಣ ಸಂಗ್ರಹವಾಯಿತು.