ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ವಾರ್ಡಿನ ಮಲ್ಲತಹಳ್ಳಿಯಲ್ಲಿ ಭಾನುವಾರ ಗಾನ ಪಲ್ಲವಿ ಆಡಿಟೋರಿಯಂನ್ನು ಖ್ಯಾತ ಜಾನಪದ ಹಾಡುಗಾರರು ಮತ್ತು ನಟರಾದ ಶ್ರೀ ಗುರುರಾಜ ಹೊಸಕೋಟೆ ಅವರು ಉದ್ಘಾಟಿಸಿದರು.
ಗಾನ ಪಲ್ಲವಿಯ ಮುಖ್ಯಸ್ಥರಾದ ಡಾ. ಎಚ್ ತುಕಾರಾಂ ಮಾತನಾಡಿ ಸಂಗೀತಕ್ಕೆ ಯಾವುದೇ ಭಾಷೆ ಜಾತಿ ಧರ್ಮವಿಲ್ಲ. ಒತ್ತಡದ ಇಂದಿನ ದಿನಗಳಲ್ಲಿ ಸಂಗೀತ ಎಲ್ಲ ನೋವನ್ನು ಮರೆಸುವ ಸಾಧನವಾಗಿದೆ. ಯಾವುದೇ ವಯಸ್ಸಿನ ಅಂತರವಿಲ್ಲದೆ ಹಾಡು ಹೇಳುವ ಆಸಕ್ತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ. ಸಂಗೀತಕ್ಕೆ ಮಾತ್ರ ಎಲ್ಲರನ್ನೂ ಆಕರ್ಷಿಸುವ ಸೆಳೆಯುವ ಶಕ್ತಿ ಇದೆ, ಪ್ರತಿದಿನ ಒಂದೆರಡು ಗಂಟೆಗಳ ಕಾಲ ಸಂಗೀತ ಕೇಳಿದರೆ ಎಂತಹ ಒತ್ತಡವು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ .ಹಾಡನ್ನು ಕೇಳುವಾಗ ಪ್ರತಿಯೊಬ್ಬರ ತಲೆ ತೂಗುತ್ತಾ ಮತ್ತು ಕಾಲು ನೆಲಕ್ಕೆ ಚಪ್ಪಾಳೆ ಹೊಡೆಯುತ್ತಿರುತ್ತದೆ. ಇದು ಸಂಗೀತದ ತಾಕತ್ತು.
ಸುಮಾರು 60 ಜನ ಹಾಡುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಶ್ರೀ ಅಪ್ಪಗೆರೆ ತಿಮ್ಮರಾಜು, ಶ್ರೀಧರ್ ಅಯ್ಯರ್, ಕುಣಿಗಲ್ ರಾಮಚಂದ್ರ ಗಾಯಕರು ಭಾಗವಹಿಸಿ ಹಾಡಿದ್ದು ವಿಶೇಷವಾಗಿತ್ತು.
ಎಲ್ಲ ಗಾಯತ್ರಿಗು ಸನ್ಮಾನಿಸಲಾಯಿತು ಸಂಸ್ಥೆಯ ಪದಾಧಿಕಾರಿಗಳಾದ ಕೆಂಪರತ್ನಮ್ಮ ,ಮಹಾಲಕ್ಷ್ಮಿ ವೆಂಕಟರಾಜ್, ಜ್ಯೋತಿ ಮತ್ತು ಚೆಲುವರಾಜ್ ಉಪಸ್ಥಿತರಿದ್ದರು.