ಶೇಷಾದ್ರಿಪುರಂ ರಾಯರ ಮಠದಲ್ಲಿ ವಿವಿಧ "ಹೋಮಗಳು" ಮತ್ತು "ಭಜನೆಗಳು"

VK NEWS
By -
0

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ನವರಾತ್ರೋತ್ಸವದ ಪ್ರಯುಕ್ತ ಅಕ್ಟೋಬರ್ 3 ರಿಂದ 12ರ ವರೆಗೆ ಪ್ರತಿದಿನ ಬೆಳಗ್ಗೆ ವಿವಿಧ ಹೋಮಗಳು, ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಪ್ರತಿದಿನ ಸಂಜೆ 5-00 ರಿಂದ 6-30ರ ವರೆಗೆ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾಮೃತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಅದರ ವಿವರಗಳು ಈ ರೀತಿ ಇವೆ : 

ಅಕ್ಟೋಬರ್ 3, ಗುರುವಾರ :

ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿ, ಅಕ್ಟೋಬರ್ 4, ಶುಕ್ರವಾರ : ವಿಜಯನಗರದ ಶ್ರೀ ಶ್ರೀಪಾದರಾಜ ಭಜನಾ ಮಂಡಳಿ, ಅಕ್ಟೋಬರ್ 5, ಶನಿವಾರ : ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿ, ಅಕ್ಟೋಬರ್ 6, ಭಾನುವಾರ :

ರಾಜಾಜಿನಗರದ ಅಂಭ್ರಣಿ ಭಜನಾ ಮಂಡಳಿ, ಅಕ್ಟೋಬರ್ 7, ಸೋಮವಾರ : ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘ,

 ಅಕ್ಟೋಬರ್ 8, ಮಂಗಳವಾರ :

ಚಾಮರಾಜಪೇಟೆಯ ಶ್ರೀ ವಾಗ್ದೇವಿ ಭಜನಾ ಮಂಡಳಿ, ಅಕ್ಟೋಬರ್ 9, ಬುಧವಾರ : ವಿದ್ಯಾರಣ್ಯಪುರದ ಶ್ರೀ ವಿಜಯವಿಠಲ ಭಜನಾ ಮಂಡಳಿ, ಅಕ್ಟೋಬರ್ 10, ಗುರುವಾರ :

ವಿಜಯನಗರದ ಪವಿತ್ರ ಗಾನ ವೃಂದ, ಅಕ್ಟೋಬರ್ 11, ಶುಕ್ರವಾರ :

ಸುಬ್ರಹ್ಮಣ್ಯನಗರದ ಜಾನ್ಹವಿ ಭಜನಾ ಮಂಡಳಿ, ಹಾಗೂ ಅಕ್ಟೋಬರ್ 12, ಶನಿವಾರ : ಸುಧೀಂದ್ರನಗರದ ಶ್ರೀ ವಿಜಯವಿಠಲ ಭಜನಾ ಮಂಡಳಿಯ ಸದಸ್ಯರುಗಳು ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬನರಸಿಂಹ (ಸುಬ್ಬಣ್ಣ) ಅವರು ತಿಳಿಸಿದ್ದಾರೆ.

 ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ಲಾಟ್ ಫಾರ್ಮ್ ರಸ್ತೆ, ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದ ಎದುರು, ಶೇಷಾದ್ರಿಪುರಂ, ಬೆಂಗಳೂರು-560020

Post a Comment

0Comments

Post a Comment (0)