ಜಯನಗರ ಶ್ರೀ ಗಂಗಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವ

VK NEWS
By -
0

ಬೆಂಗಳೂರು : ಜಯನಗರ 4ನೇ ಟಿ ಬ್ಲಾಕ್ ನಲ್ಲಿರುವ ಶ್ರೀ ಗಂಗಮ್ಮ ದೇವಿ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರ ವರೆಗೆ ಶರನ್ನವರಾತ್ರೋತ್ಸವದ ಪ್ರಯುಕ್ತ ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸಂಜೆ 6-30ಕ್ಕೆ ಪ್ರಾರಂಭವಾಗುತ್ತದೆ :

 ಅಕ್ಟೋಬರ್ 3 ರಂದು ತತ್ವಂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ", ಅಕ್ಟೋಬರ್ 4 ರಂದು ಸಂಸ್ಕೃತ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ನ ಕಲಾವಿದರಿಂದ "ಭರತನಾಟ್ಯ", ಅಕ್ಟೋಬರ್ 5 ರಂದು ಶ್ರೀ ರಾಹುಲ್ ರವೀಂದ್ರನ್ ಮತ್ತು ಸಂಗಡಿಗರು "ಕರ್ನಾಟಕ ಶಾಸ್ತ್ರೀಯ ಸಂಗೀತ", ಅಕ್ಟೋಬರ್ 6 ರಂದು ಅಮೃತ ಕಲಾ ಮಂದಿರದ ವಿದುಷಿ ಹೆಚ್. ಹರಿಣಿಯವರಿಂದ "ಭರತನಾಟ್ಯ", ಅಕ್ಟೋಬರ್ 7 ರಂದು ಸೀತಾರಾಮ ಭಜನಾ ಮಂಡಳಿಯವರಿಂದ "ದೇವಿ ನಾಮ ಸಂಕೀರ್ತನೆ" ನಂತರ ಕು|| ನಿಧಿ ಭಟ್ ಇವರಿಂದ "ಹರಿಕಥೆ", ಅಕ್ಟೋಬರ್ 8 ರಂದು ಮೈಸೂರಿನ ಶ್ರೀ ವಿಜಯೇಂದ್ರಕುಮಾರ್ ಮತ್ತು ಸಂಗಡಿಗರಿಂದ "ಭಕ್ತಿ ಸುಧೆ", ಅಕ್ಟೋಬರ್ 9 ರಂದು ಮೈಸೂರಿನ ನಾದಬ್ರಹ್ಮ ಶ್ರೀ ತ್ಯಾಗರಾಜ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಡಾ|| ನಂದ್ಯಾಲ ಆರ್. ಚಂದ್ರಿಕಾ ಇವರಿಂದ "ಭರತನಾಟ್ಯ ಮತ್ತು ಕೂಚಿಪುಡಿ", ಅಕ್ಟೋಬರ್ 10 ರಂದು ಐಟಿಐ ಸತ್ಸಂಗ ಭಜನಾ ಮಂಡಳಿಯವರಿಂದ "ದೇವಿ ನಾಮ ಸಂಕೀರ್ತನೆ" ನಂತರ ಅಕ್ಷಯ್ ಎಸ್. ಭಾರಧ್ವಾಜ್ ರವರಿಂದ "ಭರತನಾಟ್ಯ", ಅಕ್ಟೋಬರ್ 11 ರಂದು ಶ್ರೀಮತಿ ಲಲಿತಾ ಗೋಪಾಲಸ್ವಾಮಿ ಮತ್ತು ಸಂಗಡಿಗರಿಂದ "ದೇವಿ ನಾಮ ಸಂಕೀರ್ತನೆ" ಅಕ್ಟೋಬರ್ 12 ರಂದು ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರಾಕಾರೋತ್ಸವ. ಸ್ಥಳ : ಶ್ರೀ ಗಂಗಮ್ಮ ದೇವಿ ದೇವಸ್ಥಾನ, 11ನೇ ಮುಖ್ಯರಸ್ತೆ, 35ನೇ 'ಎ'ಅಡ್ಡರಸ್ತೆ, ಜಯನಗರ 4ನೇ 'ಟಿ ' ಬಡಾವಣೆ, ಬೆಂಗಳೂರು-41 


Post a Comment

0Comments

Post a Comment (0)