*ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತೀಯ ರೈಲ್ವೆಯಲ್ಲಿ ಕ್ರಾಂತಿ, ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗೆ ಅವಕಾಶ-ಕೇಂದ್ರ ಸಚಿವ ವಿ.ಸೋಮಣ್ಣ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಮೂಡಲಪಾಳ್ಯ ಆರತಿ ಮಸಾಲಾ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಸಚಿವರಾದ ವಿ.ಸೋಮಣ್ಣರವರು, ಸಂಸದರಾದ ತೇಜಸ್ವಿಸೂರ್ಯ, ರಾಜ್ಯ ಬಿಜೆಪಿ ಮುಖಂಡರಾದ ಡಾ||ಅರುಣ್ ಸೋಮಣ್ಣ ದೀಪ ಬೆಳಗಿಸಿ, ಉದ್ಘಾಟನೆ ಮಾಡಿದರು.
ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಹಿಳಾ ಅಧ್ಯಕ್ಷೆ, ಮಾಲಿಕರಾದ ಶ್ರೀಮತಿ ರತ್ನಮ್ಮರವರು ಉಪಸ್ಥಿತರಿದ್ದರು.
*ಸಚಿವರಾದ ವಿ.ಸೋಮಣ್ಣರವರು* ಮಾತನಾಡಿ ಪ್ರಧಾನಿ ನರೇಂದ್ರ ಮೋದಿರವರು ಆತ್ಮನಿರ್ಭಾರ ಭಾರತ ಎಂದು ಕರೆ ನೀಡಿದ ಪರಿಣಾಮ ಇಂದು ಎಲ್ಲ ಅಗತ್ಯ ವಸ್ತುಗಳು ಸ್ವದೇಶದಲ್ಲಿ ತಯಾರುಗುತ್ತಿದೆ.
ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿ ಜೀವನಕ್ಕೆ ಮುದ್ರಾ ಯೋಜನೆ, ಜನಧನ್ ಯೋಜನೆ ಸಹಕಾರಿಯಾಗಿದೆ. ಕೊಟ್ಯಂತರ ಮಹಿಳೆಯರು ಈ ಯೋಜನೆಯ ಲಾಭದಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಿದ್ದಾರೆ.
ರೈಲ್ವೆ ಇಲಾಖೆಯಲ್ಲಿ 12ಲಕ್ಷ ಉದ್ಯೋಗಿಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ, ಈ ಬಾರಿ ರೈಲ್ವೆ ಪರೀಕ್ಷೆಯನ್ನು ಮಾತೃಭಾಷೆ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ.
10ವರ್ಷಗಳ ಹಿಂದೆ ರೈಲುಗಳಲ್ಲಿ ಪ್ರಯಾಣ ಮಾಡಲು ಸಾರ್ವಜನಿಕರು ಇಷ್ಟಪಡುತ್ತಿರಲ್ಲಿಲ, ಸ್ವಚ್ಚತೆ ಇಲ್ಲದೇ ಇಲಿ, ಹೆಗ್ಗಣಗಳ ಕಾಟವಾಗಿತ್ತು.
ಪ್ರಧಾನಿ ನರೇಂದ್ರಮೋದಿರವರು ಇಚ್ಚಾಶಕ್ತಿಯಿಂದ ರೈಲ್ವೆ ಇಲಾಖೆಯಲ್ಲಿ ಮಹತ್ವವಾದ ಬೆಳವಣಿಗೆಯಾಗಿದೆ. ಇಂದು ಹೈಟೆಕ್ ರೈಲುಗಳು ಇಂದು ದೇಶಾದ್ಯಂತ ಸಂಚಾರ ಮಾಡುತ್ತಿದೆ.
ನಿಕಟಪೂರ್ವ ಬಿಬಿಎಂಪಿ ಸದಸ್ಯ ದಾಸೇಗೌಡ,ಬಿಜೆಪಿ ಮುಖಂಡರುಗಳಾದ ಕ್ರಾಂತಿರಾಜು, ಡೊಡ್ಡವೀರಯ್ಯ,ಲೋಕನಾಥ್, ಲಕ್ಷ್ಮಣಗೌಡ, ಪರಮೇಶ್ ಮತ್ತು ಬಿಜೆಪಿ ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು.