ರಾಜಾಜಿನಗರ ವಿಧಾನಸಭಾ: ದಯಾನಂದನಗರ ವಾರ್ಡ್ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರಮೋದಿರವರ ಹುಟ್ಟುಹಬ್ಬದ ಶುಭಾಸಂದರ್ಭದಲ್ಲಿ ಆಶ್ರಯ ಸೇವಾ ಟ್ರಸ್ಟ್ ವೃದ್ದಾಶ್ರಮದಲ್ಲಿ ಹಿರಿಯ ನಾಗರಿಕರ ಜೊತೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜುರವರು, ಶ್ರೀಮತಿ ಶಕೀಲ ಮುನಿರಾಜು, ಬಿಜೆಪಿ ಮುಖಂಡರಾದ ಗಿರೀಶ್ ಗೌಡ, ರಾಜಾಜಿನಗರ ವಿಧಾನಸಭಾ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್ ರವರು ಕೇಕ್ ಕಟ್ ಮಾಡಿ ಜನ್ಮದಿನಾಚರಣೆ ಅಚರಿಸಿದರು. ವೃದ್ದಾಶ್ರಮ ಹಿರಿಯ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಎಂ.ಮುನಿರಾಜು ರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರು ತಮ್ಮ ಜೀವನವನ್ನು ದೇಶದ ಸುರಕ್ಷತೆ, ಅಭಿವೃದ್ದಿಗಾಗಿ ಮೀಸಲು ಇಟ್ಟಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿ ಜನರ ಮನಸ್ಸನ್ನ ಗೆದ್ದಿದ್ದಾರೆ.
ಉಜ್ವಲ ಯೋಜನೆ ಪ್ರಧಾನಿ ಅವಾಸ್ ಯೋಜನೆ, ಜನಧನ್, ಜನರಿಕ್, ಅಯುಷ್ಮಾನ್ ಭಾರತ್, ಮುದ್ರ ಯೋಜನೆ, ಜಲಶಕ್ತಿ, ವಂದೇ ಭಾರತ್ ರೈಲ್ವೆ ನೂರಾರು ಯೋಜನೆಗಳು ದೇಶದ ಜನರು ಆರ್ಥಿಕವಾಗಿ ಸಬಲರಾಗಿ ಮಾಡುವಲ್ಲಿ ಸಹಕಾರಿಯಾಗಿದೆ.
ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿ ಅಯೋಧ್ಯೆ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ದಯಾನಂದನಗರ ವಾರ್ಡ್ ಮಾಜಿ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ.
ದೇಶ ಮೊದಲು ಎಂಬ ರಾಷ್ಟ್ರ ಭಕ್ತಿ ಕಲಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದರೆ ಹೆಮ್ಮೆಪಡುವ ಸಂಗತಿಯಾಗಿದೆ. ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರಿಗೆ ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ.
ಬಿಜೆಪಿ ಮುಖಂಡರುಗಳಾದ ಸುರೇಶ್ ಬಾಬು, ಗುರುಮೂರ್ತಿ,ವಿಜಯಲಕ್ಷ್ಮಿ, ಶೋಭಾ, ಮದನ್, ಜ್ಞಾನೋಜಿರಾವ್, ಷಣ್ಮಮುಗಂ , ಮುದ್ದಣ್ಣ, ಮಂಜುನಾಥ್ ಮೈಲಾರ್, ಚಂದನ್, ರವರು ಭಾಗವಹಿಸಿದ್ದರು.