ಜ್ಯೇಷ್ಠ ಗೌರಿ ಪೂಜೆ

VK NEWS
By -
0

ಎಳೆಯಷ್ಟಮಿ ಅಥವಾ ಎಳೆ ಗೌರಮ್ಮನ ಪೂಜೆ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಆಚರಿಸಲ್ಪಡುವ ವ್ರತ ಅಲ್ಲ.ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಜ್ಯೇಷ್ಠ ನಕ್ಷತ್ರ ಇರುವಾಗ ಈ ಪೂಜೆ ಆಚರಿಸಲ್ಪಡುತ್ತದೆ.

ಈ ದಿನ ವ್ರತ ಇರುವವರ ಮನೆಯವರು ರಾತ್ರಿ 9ಗಂಟೆಯ ಮಂಗಳ ಸ್ನಾನ ಮಾಡಿ ಮೇಲೆ ನಿರವಾನದಲ್ಲಿ (ಗಂಡಸರು ಬಹುಶಃ)ಬಾವಿಯಿಂದ ಗಂಗೆ ತಂದು ಗೌರಿ ಪ್ರತಿಷ್ಟಾಪಿಸಿ ಮಾಡಿ ವಸ್ತ್ರ ಧರಿಸಿ ಷೋಡಶೋಪಚಾರ ಪೂಜೆ ನೆರವೇರಿಸುತ್ತಾರೆ.ಗೌರಿಯ ಮಣ್ಣಿನ ಅಥವಾ ಲೋಹದ ವಿಗ್ರಹ ಪೂಜೆಗೆ  ಇಟ್ಟಿರುತ್ತಾರೆ.

 ಈ ದೇವಿಯ ರಾತ್ರಿ ವೇಳೆ ಮನೆಗೆ ಬರುವಲೆಂಬ ಪ್ರತೀತಿ ಇದೆ.ಹಾಗಾಗಿ ರಾತ್ರಿ ಪೂಜೆ ನಡೆಯುತ್ತದೆ.ಮರು ದಿನ ಬೆಳಿಗ್ಗೆ 8 ಜನ ಮುತ್ತೈದೆಯರ ನ್ನು ಪೂಜೆಗೆ ಆಹ್ವಾಣಿಸಿರುತ್ತಾರೆ.ಅವರಿಗೆ ಮುಂಚಿನ ದಿನವೇ ಅರಿಶಿಣ ಒಳ್ಳೆನ್ನೇ ಕೊಟ್ಟು ಮನೆಗೆ ಭೋಜನಕ್ಕೆ ಆಹ್ವಾನಿಸಿ ಬಂದಿರುತ್ತಾರೆ.ಬೆಳಿಗ್ಗೆ ಸ್ನಾನ ಮಾಡಿ ಮಡಿ ವಸ್ತ್ರ ಧರಿಸಿ ಜ್ಯೇಷ್ಠ ಗೌರಿ ಪೂಜೆ ಮಾಡುತ್ತಾರೆ.ಅಂದು ವ್ರತ ಇರುವವರ ಮನೆಗೆ, ಸ್ವರ್ಣ ಗೌರಿ ಪೂಜೆ ಕಾರಣಾಂತರದಿಂದ ತಪ್ಪಿದವರು ಗೌರಿ ಪೂಜೆಗೆ ಬರುವರು.ಎಲ್ಲರ ಗೌರಿ ಪೂಜೆ ಆದ ನಂತರ ಬಾಗಿನ ಮೊದಲಾದ ಕಾರ್ಯಕ್ರಮ ಮುಗಿದ ನಂತರ , ಆಯಾ ದಿನ ಒಳ್ಳಾಣ್ಣೆಯಲ್ಲಿ ಸ್ನಾನ ಮಾಡಿ,ಅರಿಶಿಣ ಹಚ್ಚಿಕೊಂಡು ಮಡಿ ವಸ್ತ್ರ ಧರಿಸಿ ಮಡಿಯಲ್ಲಿಯೇ ಬರುವ ಮುತ್ತೈದೆಯರಿಗೆ ಹಸ್ಥೋದಕ ಹಾಕುವರು ಅಂದರೆ ಭೋಜನ ಮಾಡಿಸುವರು.ಹಬ್ಬದಡುಗೆ ಒಬ್ಬಟ್ಟು ದೇವರಿಗೆ ನೈವೇದ್ಯ ಮಾಡಿ ಆಹ್ವಾನಿಸಿದ ಮುತ್ತೈದೆಯರಿಗೆ ಬಡಿಸುವರು.ಅವರ ಭೋಜನದ ನಂತರ ಮನೆಯವರೆಲ್ಲ ಭೋಜನ ಮಾಡುವರು.ನಂತರ ಮುತ್ತೈದೆಯರಿಗೆ ಯಥಾ ಶಕ್ತಿ ತಾಂಬೂಲ ನೀಡುತ್ತಾರೆ.

ಈ ದಿನ ಸಂಜೆ ಹೆಂಗಸರು ಗೌರಿಗೆ ಮಂಗಳಾರತಿ ಮಾಡಲು ತೆಂಗಿನಕಾಯಿ, ಹಣ್ಣು, ಮಡಿಲಲ್ಲಿ ಅಕ್ಕಿ, ಕಣ ಇತ್ಯಾದಿಯೊಂದಿಗೆ ವ್ರತ ಇರುವವರ ಮನೆಗೆ ಬರುವರು.ಸಂಜೆ ಇವೆಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ಗೌರಿಯನ್ನು ಬಿಡುವರು.ಆಗ ಮನೆಯಲ್ಲಿ ಯಾವ ಮಕ್ಕಳು ಇರಬಾರದು.ಗೌರಿ ಬಿಟ್ಟು ಬಂದ ನಂತರ ಮನೆಯವರೆಲ್ಲ ಮಕ್ಕಳನ್ನು ಮನೆಗೆ ಕರೆದು ಭೋಜನ ಮಾಡುವರು. ಈ ದಿನ ರಾತ್ರಿ ಉಪವಾಸ ಯಾರು ಇರಬಾರದು.

ವೈಚಾರಿಕವಾಗಿ ನೋಡಿದರೆ ಸ್ವರ್ಣ ಗೌರಿ ಹಬ್ಬ ತಪ್ಪಿದರೆ ಮಾಡಲು ಇದು ಅನುಕೂಲ.ಹಾಗೆ ರಾತ್ರಿ ವೇಳೆ ಪೂಜೆ ಕೂಡಾ ಒಂದು ರೀತಿ ಪ್ರಕೃತಿಗೆ ಪೂರಕ ಇರಬಹುದೇನೋ.ಮುತ್ತೈದೆಯರ ಆವಾಹನೆ ಇತ್ಯಾದಿ ನಮ್ಮ ದಾನ, ಧರ್ಮ ಹಾಗು ಜನಾಂಗದ ಸ್ತ್ರೀ ಸಮಾಜದ ಅಭಿವೃದ್ಧಿಗೆ, ಸಂವಹನಕ್ಕೆ, ಒಗ್ಗಟ್ಟಿಗೆ ಸಹಾಯ ಆಗುತ್ತದೆ.

ಈ ಗೌರಮ್ಮ ತವರಿಗೆ ಕದ್ದು ಬರುವಳು ಅಂದರೆ ಗಂಡನಾದ ಶಿವನಿಗೆ ತಿಳಿಸದೆ ಬರುವಳು.ಹಾಗಾಗಿ ರಾತ್ರಿ ಬರುವಳು.ರಾತ್ರಿಯೇ ಪೂಜೆ ಎಂಬ ಕಥೆ ನಮ್ಮ ಕಡೆ ಇದೆ. ಈ ಗೌರಿಯನ್ನು ಪುನಃ ಬಾವಿಗೆ ಬಿಡುವರು.

ನಮ್ಮ ತಾಯಿಯವರ ತಾಯಿಯ ತವರು ಮನೆಯಲ್ಲಿ ಹೀಗೆ ಒಮ್ಮೆ ಎಲೆ ಗೌರಮ್ಮನಿಗೆ ಮಂಗಳಾರತಿ ಮಾಡಿಸಿಕೊಂಡು ಬಂದಾಗ ಒಡೆದ ತೆಂಗಿನಕಾಯಿಯ ಜೊತೆ ಗೌರಿ ಎಳೆ ಒಂದು ಸಿಕ್ಕಿತ್ತಂತೆ.ಹಾಗಾಗಿ ಅವರು ಅದನ್ನು ತಂದು ದೇವರ ಮನೆಯಲ್ಲಿ ಎಳೆ ಇಟ್ಟು ಅದಕ್ಕೆ ಪೂಜೆ ಮಂಗಳಾರತಿ ಮಾಡಿ ಹಬ್ಬ ಮಾಡುತ್ತಿದ್ದರಂತೆ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ಬಗ್ಗೆ ಇದೆ.ಉಳಿದಂತೆ ಅವರವರ ಮನೆಯ ಸಂಪ್ರದಾಯದಂತೆ ವ್ರತದ ಅನುಸರಣೆ ಇರುತ್ತದೆ

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 


Post a Comment

0Comments

Post a Comment (0)