ಲಯನ್ ಸಂಸ್ಥೆಯಿಂದ ಶಿರಡಿ ಸಾಯಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಲಾಯಿತು.
ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರತಿಷ್ಠಾನ ಲಯನ್ ಜಿಲ್ಲೆ, 317 F ಸೇವಾ ಪ್ರತಿಷ್ಠಾನ ವತಿಯಿಂದ ಬಿಇಎಲ್ ರಸ್ತೆಯಲ್ಲಿರುವ ದೇವಸಂದ್ರದ ಶಿರಡಿ ಸಾಯಿ ಆಸ್ಪತ್ರೆಯಲ್ಲಿ 10 ನೂತನ ಡಯಾಲಿಸಿಸ್ ಯಂತ್ರಕ್ಕೇ ಚಾಲನೆ ನೀಡಲಾಯಿತು.
ಲಯನ್ 317 F ವತಿಯಿಂದ ಸ್ಥಾಪಿಸಲಾಗಿರುವ 10 ಡಯಾಲಿಸಿಸ್ ಯಂತ್ರವನ್ನು ಅಂತರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷರಾದ ಮಾರ್ಕ್ಸ್ ಎಸ್.ಲಯಿನ್, ಲಿನ್ ಲಯನ್ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಲಯನ್ 317 F ಜಿಲ್ಲಾ ರಾಜ್ಯಪಾಲ ಸಿ.ಎಂ. ನಾರಾಯಣಸ್ವಾಮಿ ಮಾತನಾಡಿ ಲಯನ್ಸ್ 317 ಎಫ್ ನಿಂದ ಬಡ ಕಿಡ್ನಿ ರೋಗಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಡಯಾಲಿಸಿಸ್ ಮಾಡಲು 10 ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ ಅತಿ ಬಡವರಿಗೆ ಉಚಿತ ಹಾಗೂ ಬಡವರಿಗೆ ಅತಿ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ವಿ.ವಿ. ಕೃಷ್ಣಾರೆಡ್ಡಿ, ವಂಶಿಧರ್ ಬಾಬು, ಜಿಲ್ಲಾ ಉಪಾ ರಾಜ್ಯಪಾಲರಾದ ಆಕಾಶ್ ಏ ಸುವರ್ಣ, ರಾಜು ಚಂದ್ರಶೇಖರ್, ಮಾಜಿ ರಾಜ್ಯಪಾಲರಾದ ಬಿ.ಎಸ್. ನಾಗರಾಜ್, ಎನ್.ಕುಮಾರ್, ದೀಪಕ್ ಸುಮನ್,ಎಚ್. ಕೆ. ಗಿರಿಧರ್ ಹಾಗೂ ಜಿಲ್ಲಾ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.