ಪೌರ ಕಾರ್ಮಿಕರ ಮತ್ತು ಮ್ಯಾನುವೇಲ್ ಸ್ಕಾವೆಂಜರ್ಸ್ ಪರ ಹೋರಾಟಗಾರ ಜಿ.ನಾಗೇಂದ್ರರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರದಾನ...
ಬೆಂಗಳೂರು: ಎ.ಜೆ.ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಭಾರತ್ ವರ್ಚುವಲ್ ಫಾರ್ ಪೀಸ್ ಆಂಡ್ ಎಜುಕೇಶನ್ ,ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ ಜಿನಿವಾ ಸಹಯೋಗದಲ್ಲಿ ಪೌರ ಕಾರ್ಮಿಕರು, ಮ್ಯಾನುವೇಲ್ ಸ್ಕಾವೆಂಜರ್ಸ್ ರವರ ಪರ ನ್ಯಾಯಯುತ ಹೋರಾಟ ಮಾಡುತ್ತಿರುವ ಸಫಾಯಿ ಕಾರ್ಮಚಾರಿ ಅಂದೋಲನ್ ಸಂಚಾಲಕರಾದ ಜಿ.ನಾಗೇಂದ್ರರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ *ಜಿ.ನಾಗೇಂದ್ರರವರು* ಮಾತನಾಡಿ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಆದರ್ಶ ಸಿದ್ದಾಂತ, ಮಾರ್ಗದರ್ಶನದಲ್ಲಿ ಕಳೆದ 20ವರ್ಷಗಳಿಂದ ಪೌರ ಕಾರ್ಮಿಕರು ಮತ್ತು ಮ್ಯಾನುವೇಲ್ ಸ್ಕಾವೆಂಜರ್ಸ್ ಅವರಿಗೆ ಸಿಗಬೇಕಾದ ಸಮಾನ ವೇತನ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ವಸತಿ ಸೌಲಭ್ಯ, ಸೇವಾ ಭದ್ರತೆಗಾಗಿ ಸತತವಾಗಿ ಹೋರಾಟ ಮಾಡುತ್ತಿದ್ದೇನೆ.
ಮಾನವೀಯತೆ ಮುಖ್ಯ, ಪೌರ ಕಾರ್ಮಿಕರು ಮತ್ತು ಮ್ಯಾನುವೇಲ್ ಸ್ಕಾವೆಂಜರ್ಸ್ ಗಳನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾನವೀಯತೆಯಲ್ಲಿ ನೋಡಬೇಕು. ಭಾರತ ಸ್ವಾತಂತ್ರ್ಯ ಬಂದ 78ವರ್ಷವಾಯಿತು ಅದರು ಪೌರ ಕಾರ್ಮಿಕರು, ಮ್ಯಾನುವೇಲ್ ಸ್ಕಾವೆಂಜರ್ಸ್ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.
ವಸತಿ ಸೌಲಭ್ಯ, ವೈದ್ಯಕೀಯ ಸೌಲಭ್ಯ ಮತ್ತು ಸಮಾನ ವೇತನ ಕುರಿತು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಬೇಡಿಕೆಗಳನ್ನು ಮನವಿ ಮೂಲಕ ನೀಡಲಾಗಿದೆ ನ್ಯಾಯಯುತವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು.
ಅಂತರಾಷ್ಟ್ರಿಯ ಮಟ್ಟದ ವಿಶ್ವವಿದ್ಯಾಲಯ ದಿಂದ ಡಾಕ್ಟರೇಟ್ ಪದವಿಯನ್ನು ಪೌರ ಕಾರ್ಮಿಕರ, ಮ್ಯಾನುವೇಲ್ ಸ್ಕಾವೆಂಜರ್ಸ್ ಗಳಿಗೆ ಸಮರ್ಪಣೆ ಮಾಡುತ್ತೇನೆ ಎಂದು ಹೇಳಿದರು.