ಮಂಗಳ ಸ್ನಾನ ಮಾಡಿ , ಮಡಿ ವಸ್ತ್ರ ಧರಿಸಿ ಗೌರಿಯನ್ನು ಪೂಜಿಸುವ ಶ್ರಾವಣ ಶನಿವಾರ

VK NEWS
By -
0



ಶ್ರಾವಣ ಶನಿವಾರ ವಿಭಿನ್ನವಾಗಿ ಆಚರಿಸಲ್ಪಡುತ್ತದೆ.ಅಂದು ಗೌರಿ ಪೂಜೆ ಮಾಡುತ್ತಾರೆ.ಹೆಂಗಳೆಯರು ಮಂಗಳ ಸ್ನಾನ ಮಾಡಿ , ಮಡಿ ವಸ್ತ್ರ ಧರಿಸಿ ಗೌರಿಯನ್ನು ಪೂಜಿಸುತ್ತಾರೆ.ಷೋಡಶೋಪಚಾರ ಪೂಜೆ ಮಾಡುತ್ತಾರೆ.ಹಿಂದಿನ ದಿನ ಲಕ್ಷ್ಮಿ ಪೂಜೆ ಮಾಡಿರುತ್ತಾರೆ.

ಶ್ರಾವಣ ಶನಿವಾರ ನೈವೇದ್ಯಕ್ಕೆ ಹುರಿದ ಅಕ್ಕಿ ಪಾಯಸ, 2 ಬಗೆ ಕೋಸಂಬರಿ, 2 ಬಗೆ ಪಲ್ಯ, ಸೊಪ್ಪಿನ ಪಲ್ಯ, ಅಕ್ಕಿ ತರಿಯಲ್ಲಿ ತಯಾರಿಸಿ ಕಟ್ಟಿದ ಕಡುಬು ಅಂದರೆ ಅಕ್ಕಿ ತರಿ ಹುರಿದು ಜೀರಿಗೆ, ತೆಂಗಿನ ತುರಿ ಹಾಕಿ ಉಪ್ಪಿಟ್ಟು ಮಾಡಿ ಅದನ್ನು ಕಡುಬು ಎಂದರೆ ಉಂಡೆ ಕಟ್ಟುತ್ತಾರೆ.ನಂತರ ಅದೇ ಕಡುಬಿಗೆ ಮೊಸರು ಹಾಕಿ ಅಂಬಲಿ ಎಂಬ ಖಾದ್ಯ ಮಾಡುತ್ತಾರೆ.ಉಳಿದಂತೆ ಅನ್ನ, ಸಾರು ತೊವ್ವೆ ಮಜ್ಜಿಗೆ ಇರುವುದು.ಹೀಗೆ ಹಬ್ಬದಡುಗೆ ದೇವರಿಗೆ ನೈವೇದ್ಯ ಮಾಡುತ್ತಾರೆ.ಸಂಜೆಗೆ ದೇವರ ದೀಪ ಹಚ್ಚಿ, ಆರತಿ ಮಾಡಿ ಶನಿವಾರದ ಹಾಡನ್ನು ಹಾಡುತ್ತಾರೆ.ಬೇಕಾದರೆ ಯಾರಾದರೂ ಮುತ್ಥೈದೆಗೆ ತಾಂಬೂಲ ನೀಡಬಹುದು

ಹೀಗೆ ಶ್ರಾವಣ ಮಾಸ ಪೂರಾ ಹಬ್ಬಗಳ ಸಾಲು.ಪ್ರತಿ ಶುಕ್ರವಾರ, ಶನಿವಾರ ಹೀಗೆ ಬಹಳ ಆಚರಣೆಗಳು ರೂಢಿಯಲ್ಲಿವೆ.ಮುತ್ತೈದೆಯರು ಯಾರೆ ಮನೆಗೆ ಬಂದರೆ ತಾಂಬೂಲ ನೀಡಿಯೇ ಕಳಿಸುತ್ತಾರೆ.




ವೈಚಾರಿಕವಾಗಿ ನೋಡಿದರೆ.ಲಕ್ಷ್ಮಿ, ಗೌರಿ ಹಾಗೆಯೇ ಮನೆ ಸೊಸೆ, ಮಗಳು ಸಮಾನ ಎಂದು ಈ ಆಚರಣೆಗಳು ತಿಳಿಸುತ್ತವೆ.ಆಯಾ ರುತುಮಾನ, ಹವಾಮಾನಕ್ಕೆ ತಕ್ಕಂತೆ ಆಹಾರ ಸೇವನೆ ಕೂಡಾ ರೂಢಿಯಲ್ಲಿರುತ್ತವೆ.

ಈ ಆಚರಣೆ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಅವರವರ ಮನೆಯ ಸಂಪ್ರದಾಯದಂತೆ ಆಚರಣೆ ಪ್ರಾಂತಾವಾರು ಇರುತ್ತದೆ.

ರಾಧಿಕಾ ಜಿ.ಎನ್, ಟೀವೀ ಹೋಸ್ಟ್ 

Mobile : 7019990492

Post a Comment

0Comments

Post a Comment (0)