ಕರ್ನಾಟಕ ರಾಜ್ಯ ಬರಹಗಾರರ ಸಂಘದಿ0ದ ದಾವಣಗೆರೆಯಲ್ಲಿಕನ್ನಡ ನುಡಿ ವೈಭವರಾಜ್ಯಮಟ್ಟದ ಸಾಹಿತ್ಯಕಾರ್ಯಕ್ರಮ

VK NEWS
By -
0

ಕರ್ನಾಟಕ ರಾಜ್ಯ ಬರಹಗಾರರ ಸಂಘದಿ0ದ ದಾವಣಗೆರೆಯಲ್ಲಿಕನ್ನಡ ನುಡಿ ವೈಭವರಾಜ್ಯಮಟ್ಟದ ಸಾಹಿತ್ಯಕಾರ್ಯಕ್ರಮ


ಕರ್ನಾಟಕರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರ ವತಿಯಿಂದಕನ್ನಡ ನುಡಿ ವೈಭವ 2024 ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮವು ದಾವಣಗೆರೆಯ ಎ.ವಿ.ಕೆ.ರೋಡ್‌ನಲ್ಲಿರುವ ಜಿಲ್ಲಾ ಗುರುಭವನದಲ್ಲಿ ದಿ. 25-8-2024ರ ಭಾನುವಾರ ಬೆ. 10ಕ್ಕೆ ನಡೆಯಲ್ಲಿದೆ. ನಾಡಿನ ಹಿರಿಯ ಸಾಹಿತಿಗಳು ಗೊರೂರು ಅನಂತರಾಜು ಇವರ ಅಧ್ಯಕ್ಷತೆಯಲ್ಲಿ ನಡೆಯುವ ನಡೆ ಯುವ ಕಾರ್ಯಕ್ರಮವನ್ನುದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೊಟ್ರೇಶ್ ಜಿ. ಉದ್ಘಾಟಿಸುವರು. 


ಮಧುನಾಯ್ಕ್ ಲಂಬಾಣಿ ಸಂಪಾದಕತ್ವದ ಹೂ ಮುಡಿದಜಡೆ ಕವನ ಸಂಕಲನ, ಭಾಗ್ಯ ನಾಗರಾಜ ಅವರ ಚಿರುನಕ್ಷತ್ರ ಕೃತಿಗಳನ್ನು ಗೋವಿಂದಸ್ವಾಮಿ, ಬಂಜಾರಾ ಭಾಷಾಅಕಾಡೆಮಿಅಧ್ಯಕ್ಷರುಬೆಂಗಳೂರು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಧು ನಾಯ್ಕ್ ಲಂಬಾಣಿ, ಸಂಸ್ಥಾಪಕ ಅಧ್ಯಕ್ಷರು,ಕ.ರಾ.ಬ.ಸಂಘ, ಹೂವಿನಹಡಗಲಿ, ಶ್ರೀಕಾಂತ್ ಆರ್. ಜಾಧವ್‌ ಅಧ್ಯಕ್ಷರು, ಕರ್ನಾಟಕರಾಜ್ಯ ಬಂಜಾರ ಸಾಹಿತ್ಯ ವೇದಿಕೆಧಾರವಾಡ, ವೀರೇಶ್‌ಎಸ್. ಒಡೆನಪುರ ಜಿಲ್ಲಾಧ್ಯಕ್ಷರು ಸರಕಾರಿ ನೌಕರರ ಸಂಘದಾವಣಗೆರೆ, ರಾಮಪ್ಪ ಟಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಾವಣಗೆರೆ, ಹೆಚ್.ಡಿ.ಜಗ್ಗಿನ್ ಸಾಹಿತಿಗಳು ಹೊಳಲು, ಉಮೇಶ್‌ಚಿನ್ನಸಮುದ್ರಗಾಯಕರುದಾವಣಗೆರೆ ಭಾಗವಹಿಸುವರು. 

ಚಂದ್ರಶೇಖರ ಹಡಪದ, ಜಿಲ್ಲಾಧ್ಯಕ್ಷರು, ಕ.ರಾ.ಬ.ಸಂಘ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಪ್ರಸ್ತಾವಿಕ ನುಡಿಗಳನ್ನಾಡುವರು. ಇದೇ ಸಂದರ್ಭರಾಜ್ಯಾದ್ಯ0ತ ಆಯ್ಕೆಯಾಗಿರುವ 40 ಮಂದಿ ಶಿಕ್ಷಕರಿಗೆ ಶಿಕ್ಷಣ ಸೌರಭ ಪ್ರಶಸ್ತಿ, 70 ಮಂದಿ ಸಾಹಿತಿಗಣ್ಯರಿಗೆ ಸಾಹಿತ್ಯ ಸೌರಭ ಪ್ರಶಸ್ತಿ, ಕಲಾಕ್ಷೇತ್ರದಿಂದ 6 ಕಲಾವಿದರಿಗೆ ಕಲಾ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕರ್ನಾಟಕ ರಾಜ್ಯ ಬರಹಗಾರರ ಸಂಘದಿ0ದ ರಾಜ್ಯಮಟ್ಟದಲ್ಲಿ ಏರ್ಪಡಿಸಿದ್ದ ಕವನ ಸ್ಫರ್ಧೆಯಲ್ಲಿ 80 ಮಂದಿ ಕವಿ ಕವಯಿತ್ರಿಯರು ಭಾಗವಹಿಸಿದ್ದು ಇವರಲ್ಲಿ 10 ಉತ್ತಮಕವಿತೆರಚನೆಕಾರರಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.


Tags:

Post a Comment

0Comments

Post a Comment (0)