ಬೆಂಗಳೂರು : ಶ್ರೀ ಗೋವರ್ಧನಗಿರಿ ಉಡುಪಿ ಪುತ್ತಿಗೆ ಮಠದಲ್ಲಿ ಉಭಯ ಶ್ರೀಪಾದಂಗಳವರ ಆದೇಶದಂತೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 26, ಸೋಮವಾರ ರಾತ್ರಿ10-00 ಗಂಟೆಗೆ ಶ್ರೀಮತಿ ರಮ್ಯಾ ಸುಧೀರ್ ಅವರು "ಹರಿದಾಸರು ಕಂಡ ಶ್ರೀಕೃಷ್ಣ" ಎಂಬ ಶೀರ್ಷಿಕೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಶ್ರೀಕೃಷ್ಣನನ್ನು ಹಾಡಿ ಹೊಗಳಿದ ಹಲವಾರು ದಾಸರ ಪದಗಳನ್ನು ಪ್ರಸ್ತುತ ಪಡಿಸುತ್ತಾರೆ. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ್ ಕಾಖಂಡಕಿ ಸಹಕರಿಸಲಿದ್ದಾರೆ.
ಸ್ಥಳ : ಉಡುಪಿ ಶ್ರೀ ಪುತ್ತಿಗೆ ಮಠ, ಬಸವನಗುಡಿ, ಬೆಂಗಳೂರು-560004