ನಿಜಲಿಂಗಪ್ಪರವರ ದೂರದೃಷ್ಟಿ ಚಿಂತನೆಯಿಂದ ರಾಜ್ಯ ಅಭಿವೃದ್ದಿಯಾಯಿತು, ಅಂದಿನ ರಾಜಕೀಯದಲ್ಲಿ ಪ್ರಾಮಾಣಿಕತೆ, ಬದ್ದತೆ ಇತ್ತು -ಕೇಂದ್ರ ಸಚಿವ ವಿ.ಸೋಮಣ್ಣ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಅವರಣದಲ್ಲಿ ಶ್ರೀ ಎಸ್.ನಿಜಲಿಂಗಪ್ಪ ಬಳಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣದ ರೂವಾರಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪರವರ 25ನೇ ಸಂಸ್ಮರಣೆ ಸಮಾರಂಭ.
ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ಸಚಿವರಾದ ವಿ.ಸೋಮಣ್ಣರವರು,ಸುಪ್ರಿಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಡಾ||ಶಿವರಾಜ್ ವಿ.ಪಾಟೀಲ್ ರವರು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ, ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್.ಹನುಮಂತಪ್ಪ, ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಮತ್ತು ಸಂಚಾಲಕರುಗಳಾದ ಡಾ||ಅರುಣ್ ಸೋಮಣ್ಣ, ಪಾಲನೇತ್ರ, ಎಂ.ಕೆ.ಶಿವಶಂಕರ್, ಬಿ.ಕೆ.ಚಂದ್ರಧರ, ಸ್ವ್ಯಾನ್ ಕೃಷ್ಣಮೂರ್ತಿರವರು ದೀಪ ಬೆಳಗಿಸಿ, ಎಸ್.ನಿಜಲಿಂಗಪ್ಪರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿಜಲಿಂಗಪ್ಪರವರ ಕಿರುಹೊತ್ತಿಗೆ ಲೋಕರ್ಪಣೆ ಮಾಡಲಾಯಿತು.
*ಕೇಂದ್ರ ಸಚಿವರಾದ ವಿ.ಸೋಮಣ್ಣರವರು* ಮಾತನಾಡಿ ರಾಜಕಾರಣ ಐದು ವರ್ಷಕ್ಕೆ ಒಮ್ಮೆ ಬದಲಾವಣೆಯಾಗುತ್ತದೆ, ರಾಜಕೀಯ ಮುಳ್ಳಿನ ಹಾಸಿಗೆ ನಿಜಲಿಂಗಪ್ಪರವರ ಕಾಲದಲ್ಲಿ ಪ್ರಾಮಾಣಿಕತೆ ಬದ್ದತೆ ಇತ್ತು, ರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ನಿಜಲಿಂಗಪ್ಪರವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.
ಮಹಾನಗರ ಪಾಲಿಕೆ ಸದಸ್ಯನಾಗಿ ಇದ್ದಾಗ ಅತ್ಯಂತ ಸಂತೋಷವಾಗಿ ಇದ್ದೆ. ವಿ.ಎಸ್.ಕೃಷ್ಣಯ್ಯರ್ ರವರು ಮಾರ್ಗದರ್ಶನವಿತ್ತು.
ಕುಟುಂಬ ರಾಜಕೀಯ ನಡೆಯವುದಿಲ್ಲ ರಾಜಕೀಯದಲ್ಲಿ ಅವರಾಗಿ ಬೆಳಯಬೇಕು.
ಮುಖ್ಯಮಂತ್ರಿಯಾಗಿ ನಿಜಲಿಂಗಪ್ಪರವರ ದೂರದೃಷ್ಟಿ ಚಿಂತನೆಯಿಂದ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡರು, ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜ್ ರಾಜ್ಯದ ಸರ್ವತೋಮುಖ ಅಭಿವೃದ್ದಿ ಕೊಡುಗೆ ನೀಡಿದರು.
ನಿಜಲಿಂಗಪ್ಪರವರು ರಾಷ್ಟ್ರಪತಿಯಾಗುವ ಸಂಭವವಿತ್ತು.
ಕೆಂಗಲ್ ಹನುಮಂತಯ್ಯ ಮತ್ತು ನಿಜಲಿಂಗಪ್ಪರವರ ಜೀವನಚರಿತ್ರೆಯನ್ನು ಪ್ರೌಡಶಾಲೆ ಶಿಕ್ಷಣ ಪಠ್ಯದಲ್ಲಿ ಆಳವಡಿಸಬೇಕು ಮತ್ತು ನಿಜಲಿಂಗಪ್ಪರವರ ಜಯಂತಿ ಅಚರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ನಿಜಲಿಂಗಪ್ಪರವರು ಶೇಷ್ಠ ರಾಜಕಾರಣಿ,ರಾಜಕೀಯವಾಗಿ ನಾನು ಬೆಳಯಲು ಜೆ.ಹೆಚ್.ಪಟೇಲ್ ರವರು ಕಾರಣ.
ನಿಜಲಿಂಗಪ್ಪರವರ ಜಯಂತಿಯನ್ನು ನವಹೆಹಲಿಯಲ್ಲಿ ಅಚರಿಸಲು ಸಿದ್ದತೆ ಮಾಡಿಕೊಳ್ಳಿ.
8ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ್ನು ಜನರಿಗೆ ನೀಡಬೇಕು ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಕಾರ್ಯಯೋಜನೆ ಚಾಲನೆ ನೀಡಲಾಗಿದೆ, ಜನರಿಗೆ ಶುದ್ದ ಕುಡಿಯುವ ನೀರು ಕೊಡಬೇಕು ಎಂಬುದು ನಿಜಲಿಂಗಪ್ಪರವರ ಆಶಯವಾಗಿದೆ.
ತಂದೆ ತಾಯಿಯ ಆಶೀರ್ವಾದ ಫಲದಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1.75ಅಧಿಕ ಮತದಿಂದ ಜಯಗಳಿಸಲು ಸ್ವಾಮೀಜಿಗಳು ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಕಾರಣ.
ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರು ಅದರು ಅವರು ಒಳ ಪ್ರವೇಶ ಮಾಡಲು ಆಗಲಿಲ್ಲ.
ನಿಜಲಿಂಗಪ್ಪರವರ ಆದರ್ಶ ಮಾರ್ಗದರ್ಶನದಲ್ಲಿ ಎಲ್ಲರು ಸಾಗಬೇಕು ಎಂದು ಹೇಳಿದರು.
ವಿಶ್ರಾಂತ ನ್ಯಾಯಮೂರ್ತಿಗಳಾದ *ಡಾ||ಶಿವರಾಜ್ ವಿ.ಪಾಟೀಲ್ ರವರು* ಮಾತನಾಡಿ ತಮ್ಮ ಜೀವನದಲ್ಲಿ ಮೌಲ್ಯಗಳಿಂದ ಬದುಕು ಸಾಗಿಸಿದ ಎಸ್.ನಿಜಲಿಂಗಪ್ಪರವರಿಗೆ ಅಭಿಮಾನಿಗಳು ಅದರ್ಶ ರಾಜಕಾರಣಿಯಾಗಿದ್ದಾರೆ. ದೇಶ ಕಂಡ ಕನ್ನಡನಾಡಿನ ರತ್ನ ಎಂದರೆ ನಿಜಲಿಂಗಪ್ಪರವರು.
ಕರ್ನಾಟಕ ಏಕೀಕರಣ ಎಂದರೆ ನಿಜಲಿಂಗಪ್ಪರವರು ಅಗ್ರಗಣ್ಯರು, ತಾಳ್ಮೆ ಸಾಕಾರ ಮೂರ್ತಿ, ಗಾಂಧಿ, ಬಸವಣ್ಣ ತತ್ವ ಸಿದ್ದಾಂತದಲ್ಲಿ ಜೀವನ ನಡೆಸಿದರು.
ಅಖಂಡ ಕರ್ನಾಟಕ ಮೊಟ್ಟ ಮೊದಲ ಮುಖ್ಯಮಂತ್ರಿ ನಿಜಲಿಂಗಪ್ಪರವರು.
ರಾಜಕೀಯ ಕ್ಷೇತ್ರದಲ್ಲಿ ನಿಜಲಿಂಗಪ್ಪರವರ ಆದರ್ಶಗಳನ್ನು ಆಳವಡಿಸಿಕೊಂಡು ರಾಜಕಾರಣಿಗಳು ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಿ.
ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿರವರು ಅವರ ಸಂಬಳ 40ರೂಪಾಯಿ ಇತ್ತು, ಜೀವನ ಸಾಗಿಸಲು 30ರೂಪಾಯಿ ಸಂಬಳ ಸಾಕು ಎಂದು ಮನವಿ ಮಾಡಿದರು.
ಲಾಲ್ ಬಹುದ್ದೂರ್ ಶಾಸ್ತ್ರಿ, ಗುಜ್ಜಾರಿಲಾಲ್ ನಂದಾ ರವರು ಕಾಮರಾಜ್ ನಾಡಾರ್ ನಿಜಲಿಂಗಪ್ಪರವರು ಇಂತಹ ರಾಜಕಾರಣಿಗಳು ಪ್ರಾಮಾಣಿಕತೆ ಎಲ್ಲರು ಅನುಸರಿಸಬೇಕು.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆ ಮೊದಲು ಸಂಪತ್ತು ಎಷ್ಟು ಇತ್ತು, ನಂತರ ಅವರ ಸಂಪತ್ತು ಎಷ್ಟು ಎಂಬುದು ನೋಡಿದರೆ ಆಶ್ಚರ್ಯವಾಗುತ್ತದೆ.
ಶರಾವತಿ ಯೋಜನೆ ಮತ್ತು ಬೆಂಗಳೂರುನಗರಕ್ಕೆ ಕಾವೇರಿ ನೀರನ್ನು 1964ರಲ್ಲಿ ತಂದವರು ನಿಜಲಿಂಗಪ್ಪರವರು.
ಬಿಜಾಪುರ, ಗುಲ್ಬರ್ಗ ಕೃಷ್ಣ ಮೇಲ್ದಂಡೆ ಯೋಜನೆ, ದಕ್ಷಿಣ ಭಾರತ ಪ್ರಥಮ ಕೃಷಿ ವಿಶ್ವವಿದ್ಯಾಲಯ ಹಾಗೂ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿದರು.
ನಿಜಲಿಂಗಪ್ಪರವರ ರಾಜಕೀಯ ಜೀವನ ಅಡಂಬರವಿಲ್ಲದ , ನಿಸ್ವಾರ್ಥ ಸೇವೆ, ದ್ವೇಷರಹಿತ ಸರಳ ರಾಜಕೀಯವಾಗಿತ್ತು.