ಬೆಂಗಳೂರು : ನಗರದ ಹೆಸರಾಂತ ಭರತನಾಟ್ಯ ಶಾಲೆಯಾದ ನೃತ್ಯ ದಿಶಾ ಟ್ರಸ್ಟ್ (ರಿ.) ವತಿಯಿಂದ ಕಲಾಭೂಷಿಣಿ ಗುರು. ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಆಗಸ್ಟ್ 2ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ "ನೃತ್ಯ ನೀರಾಜನ" ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಕು|| ಶ್ರಾಗ್ವಿ, ಕು|| ಪಾರ್ನಿಕಾ ಮತ್ತು ಕು|| ಭೂಷಿತಾ ಉತ್ತಮ ಪ್ರದರ್ಶನ ನೀಡಿ ಪ್ರಸಂಶೆಗೆ ಪಾತ್ರರಾದರು.
ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಕಲಾವಿದರು ಆದಿಶಂಕರರ "ಗಣೇಶ ಶ್ಲೋಕ", "ತ್ರಿಶ ಅಲರಿಪು", ರೂಪಕ ತಾಳದ "ಜತಿಸ್ವರ", ಕು|| ಶ್ರಾಗ್ವಿ ಯೋಗಾನರಸಿಂಹರ ಕೃತಿ "ಅದಿಗೋ ಬರುತಿಹನು" ನರ್ತಿಸಿದರು. ಕು|| ಪಾರ್ನಿಕ ಪುರಂದರದಾಸರ "ಕಂಡೆ ಕರುಣಾನಿಧಿಯ", ಕು|| ಭೂಷಿತಾ "ನಾರಾಯಣ ನಿನ್ನ ನಾಮದ ಸ್ಮರಣೆಯ" ನರ್ತಿಸಿ, ಕೃತಿ ರಂಜಿನಿಮಾಲಾ ಹಾಗೂ ಕದನ ಕುತೂಹಲ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪೂರ್ಣ ಗೊಳಿಸಿದರು.
ಈ ಎಲ್ಲ ನೃತ್ಯ ಸಂಯೋಜನೆ ಮಾಡಿದ ಗುರು.ದರ್ಶಿನಿ ಮಂಜುನಾಥ್ ರವರನ್ನು ಕಲಾ ರಸಿಕರು ಅಭಿನಂದಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯರಾದ ವಿದುಷಿ ಉಷಾ ಬಸಪ್ಪ ಮತ್ತು ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ನ ಸಂಸ್ಥಾಪಕ ನಿರ್ದೇಶಕಿ ವಿದುಷಿ ಪವಿತ್ರಾ ಪ್ರಶಾಂತ್ ವಹಿಸಿದ್ದರು.