ಶ್ರಾವಣ ಶುಕ್ರವಾರ ಬಗ್ಗೆ ಸ್ವಲ್ಪ ತಿಳಿಯೋಣ.

VK NEWS
By -
0

 ಶ್ರಾವಣ ಶುಕ್ರವಾರ

ನಮ್ಮಲ್ಲಿ ಕೆಲ ಮನೆಗಳಲ್ಲಿ ಶ್ರಾವಣ ಶುಕ್ರವಾರದ ಲಕ್ಷ್ಮಿ ಪೂಜೆ ಪದ್ಧತಿ ಇದ.ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.

ಶ್ರಾವಣ ಶುಕ್ರವಾರದ ದಿನ ಅಂಬಿನ ಕಂದಲು ಅಥವಾ ಲಕ್ಷ್ಮಿ ಕಂಧಿಲಿಗೆ ಪೂಜೆ ಮಾಡುವರು. ಈ ಪೂಜಾ ಪದ್ಧತಿ ಇರುವವರು ಪ್ರತಿ ಶ್ರಾವಣ ಶುಕ್ರವಾರವೂ ಒಬ್ಬ ಮುತ್ತೈದೆಗೆ ಮನೆಗೆ ಕುಂಕುಮಕ್ಕೆ ಕರೆಯುವರು. ಮುತ್ತೈದೆಗೆ ಹಿಂದಿನ ದಿನವೇ ಅರಿಶಿಣ, ಒಳ್ಳೆಣ್ಣೆ ಕೊಟ್ಟು, ಕುಂಕುಮ ಕೊಟ್ಟು ಆಹ್ವಾನ ನೀಡಿರುತ್ತಾರೆ. ನಂತರ ಶುಕ್ರವಾರ ಮಂಗಳ ಸ್ನಾನ ಮಾಡಿ ಮಡಿ ವಸ್ತ್ರ ಧರಿಸಿ ಆಂಬಿನ ಕಂದಿಲಿಗೆ ಪೂಜೆ ಮಾಡುತ್ತಾರೆ. ಷೋಡಶೋಪಚಾರ ಮಾಡುತ್ತಾರೆ. 


ಅಂದು ದೇವರಿಗೆ ಪಾಯಸ, 2 ಬಗೆ ಪಲ್ಯ,2 ಬಗೆ ಕೋಸಂಬರಿ,2 ಬಗೆ ಗೊಜ್ಜು,ಸಪ್ಪೆ ಹುಗ್ಗಿ,ಮೊಸರು ಸಾಸಿವೆ,ಒಬ್ಬಟ್ಟು ತಯಾರಿಸಿ ನೈವೇದ್ಯ ಮಾಡುತ್ತಾರೆ.ನಂತರ ಊಟದ ವೇಳೆಗೆ ಮುತ್ತೈದೆ ಮಡಿ ವಸ್ತ್ರ ಧರಿಸಿ ಬರುತ್ತಾರೆ.ಮುತ್ತೈದೆ ಅಂದು ಆಹ್ವಾನಿತರ ಮನೆಯವರು ನೀಡಿದ ಒಳ್ಳೆಣ್ಣೆಯಲ್ಲಿ ತಲೆ ಸ್ನಾನ ಮಾಡಿ ಅವರು ಕೊಟ್ಟಿರುವ ಅರಿಶಿಣ ಹಚ್ಚಿ ಕೊಂಡು ಬಂದಿರುತ್ತಾರೆ.

ನಂತರ ಮನೆಯವರು ಅವರನ್ನು ಊಟಕ್ಕೆ ಕೂರಿಸಿ ಕುಂಕುಮ ಕೊಟ್ಟು ಭೋಜನ ಮುತ್ತೈದೆಯರಿಗೆ ಮಾಡಿಸುತ್ತಾರೆ.ಊಟದ ನಂತರ ಅವರಿಗೆ ತಾಂಬೂಲ ಕೊಟ್ಟು, ಕೋಸಂಬರಿ, ಹಣ್ಣು, ತೆಂಗಿನಕಾಯಿ, ರವಿಕೆ ಕಣ, ಬಳೆಗಳು, ಹೂವು, ಯಥಾಶಕ್ತಿ ದಕ್ಷಿಣೆ ಇತ್ತು ನಮಸ್ಕಾರ ಮಾಡುತ್ತಾರೆ.

 ನಂತರ ಮುತ್ತೈದೆಯರು ತಮ್ಮ ಮನೆಗೆ ಹಿಂದಿರುಗುವರು.ಆಮೇಲೆ ಶುಕ್ರವಾರ ಸಂಜೆಗೆ ಲಕ್ಷ್ಮಿ ದೇವಿಗೆ ಆರತಿ ಮಾಡಿ, 5 ಶುಕ್ರವಾರದ ಹಾಡನ್ನು ಹಾಡುತ್ತಾರೆ.ಹೀಗೆ ಶ್ರಾವಣದ ಎಲ್ಲ ಶುಕ್ರವಾರ ಪೂಜೆ ಮಾಡುತ್ತಾರೆ.ಹಾಗು ಪ್ರತಿ ಶುಕ್ರವಾರ ಬೇರೆ ಬೇರೆ ಮುತ್ತೈದೆಯರಿಗೆ ಆಹ್ವಾನ ನೀಡಿರುತ್ತಾರೆ.ಮನೆಯ ಹೆಣ್ಣು ಮಕ್ಕಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಈ ಪೂಜಾ ಪದ್ಧತಿ ಇರುವವರ ಕೆಲವು ಮನೆಗಳಲ್ಲಿ ಹೆಂಗಸರು ಹಸಿರು ಬಳೆ ತೊಡುವುದಿಲ್ಲ.ಹಾಗು ಹಸಿರು ಸೀರೆ ಉಡುವುದಿಲ್ಲ.

 ಇಂದಿಗೂ ಕೆಲವರ ಮನೆಗಳಲ್ಲಿ ಅಂಬಿನ ಕಂಧಿಲನ್ನೇ ವರಮಹಾಲಕ್ಷ್ಮಿ ವ್ರತ ಪೂಜೆ ಗೆ ಬಳಸುವ ಪದ್ಧತಿ ಇದೆ.ಅಂಥವರು ಗಾತ್ರದಲ್ಲಿ ದೊಡ್ಡ ಅಮ್ಬಿನ ಕಂದಲು ಪೂಜೆಗೆ ಇಡುತ್ತಾರೆ.

ವೈಚಾರಿಕವಾಗಿ ನೋಡಿದರೆ ಶ್ರಾವಣ ಶುಕ್ರವಾರ ಹೆಣ್ಣು ಮಕ್ಕಳನ್ನು ಮುತ್ತೈದೆಯಾಗಿ ಮನೆಗೆ ಕರೆಯುವುದು ,ಹೆಣ್ಣು ಮಕ್ಕಳು ತವರಿಗೆ ಬರಲಿ ಎಂಧಿರಬಹುದು.ಗೌರಿ ಹಬ್ಬಕ್ಕೆ ಎಲ್ಲರಿಗೂ ತವರಿಗೆ ಹೋಗಲು ಆಗುವುದಿಲ್ಲ.ಹಾಗಾಗಿ ಇದು ಸಾಧ್ಯ.ಆಹಾರ ಸೇವನೆ ಇತ್ಯಾದಿ ಶ್ರಾವಣದ ಹವಾಮಾನಕ್ಕೆ ತಕ್ಕಂತೆ ಇರುವುದು.ಹಾಗು ಶ್ರಾವಣ ಮಾಸದಲ್ಲಿ ಕೆಲವರು ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದ ಅರಿಶಿಣ ಕುಂಕುಮ ನೀಡುವುದು ಇದೆ.ಶ್ರಾವಣ ಮಾಸದ ಯಾವುದೆ ವಾರ ಮುತ್ತೈದೆಯರು ಮನೆಗೆ ಬಂದರೆ ತಾಂಬೂಲ ನೀಡುತ್ತಾರೆ.

ಈ ಹಬ್ಬ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಇದು ಬೇರೆ ಬೇರೆ ಜಾತಿ ಹಾಗೂ ಪಂಗಡಗಳಲ್ಲಿ ಅವರ ಹಿರಿಯರ ಸಂಪ್ರದಾಯದಂತೆ ಆಚರಿಸಲ್ಪಡುತ್ತದೆ.

 ರಾಧಿಕಾ ಜಿ.ಎನ್.

ಟೀವೀ ಹೋಸ್ಟ್ 

7019990492

Post a Comment

0Comments

Post a Comment (0)