ಗುರುರಾಯರ ,ಸನ್ನಿಧಿಯಲ್ಲಿ ಯುವ ಪ್ರತಿಭೆಗಳ ಗಾಯನ

VK NEWS
By -
0

----------------------------------

'ಕಲಿಯುಗ ಕಲ್ಪತರು' ಶ್ರೀ ರಾಘವೇಂದ್ರ ಸ್ವಾಮಿಗಳವರ 353ನೇ ಆರಾಧನೆ ಪ್ರಯುಕ್ತ ಬೆಂಗಳೂರಿನ ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಆಗಸ್ಟ್ 20, ಮಂಗಳವಾರ ರಾಯರ ಪೂರ್ವಾರಾಧನೆಯ ಅಂಗವಾಗಿ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.



 ಸಂಜೆ ನಡೆದ ವಿಶೇಷ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನಸುಧಾ ಸಂಗೀತ ಅಕಾಡೆಮಿಯ ನಿರ್ದೇಶಕಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರ ಶಿಷ್ಯೆಯರಾದ ಕು|| ದೀಪ್ತಿ ಶ್ರೀನಿವಾಸನ್, ಕು|| ಮನಸ್ವಿ ಕಶ್ಯಪ್, ಕು|| ಅನನ್ಯ ಬೆಳವಾಡಿ, ಕು|| ಸಂಜನಾ ಎಂ. ಮತ್ತು ಕು|| ದೀಪ್ತಿ ಮೋಹನ್ ಇವರುಗಳು ಗಾಯನ ಸೇವೆ ಸಲ್ಲಿಸಿದರು. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಟಿ.ಎಸ್. ರಮೇಶ್ ಹಾಗೂ ತಬಲಾ ವಾದನದಲ್ಲಿ ಶ್ರೀ ಮೋಹನ್ ಸಹಕರಿಸಿದರು.

Post a Comment

0Comments

Post a Comment (0)