ಶ್ರಾವಣ ಮಾಸದಲ್ಲಿ ಅಚರಿಸುವ ಮಂಗಳ ಗೌರಿ ವ್ರತ

VK NEWS
By -
0

 

ಣೆಗಳಲ್ಲಿ ಇದು ಒಂದು. ಬನ್ನಿ ಮಂಗಳ ಗೌರಿ ವ್ರತದ ಆಚರಣೆಯ ಬಗ್ಗೆ ತಿಳಿಯೋಣ.

 ಶ್ರಾವಣ ಮಾಸದಲ್ಲಿ ಬರುವ ಆಚರಿಸುವ ವ್ರತವನ್ನು ನವ ವಿವಾಹಿತೆಯರು 5 ವರುಷ ಕಾಲ ಆಚರಿಸುವರು.ಇದನ್ನು ಗಂಡನ ಮನೆಯಲ್ಲೇ ಆಚರಿಸುವ ಪದ್ಧತಿ.

ಶ್ರಾವಣ ಮಾಸದ ಪ್ರತಿ ಮಂಗಳವಾರ ಈ ವ್ರತ ಪೂಜೆ ಮಾಡಬೇಕು.ನವ ವಿವಾಹಿತೆಯರು ಆ ದಿನ ಮುಂಜಾನೆ ಮಂಗಳ ಸ್ನಾನ ಮಾಡಿ , ಮಡಿ ವಸ್ತ್ರ ಧರಿಸಿ ಸಿದ್ಧರಾಗುತ್ತಾರೆ.ಸಾಮಾನ್ಯವಾಗಿ ಪುರೋಹಿತರನ್ನು ಕರೆಸುವ ಪದ್ಧತಿ ಇದೆ. ಶಿವ ಪಾರ್ವತಿಯರ ಫೋಟೋ ಇಟ್ಟು ಒಂದು ಕಂಚು ಇಡುತ್ತಾರೆ.ಕಂಚು ಎಂದರೆ ಕಂಠ ಇರುವ ಹೊಸ ಪಾತ್ರೆ.ಉದಾಹರಣೆಗೆ ಚೊಂಬು.ಅದರೊಳಗೆ 16 ಗೋಧಿ ಹಿಟ್ಟಿನಿಂದ ಮಾಡಿದ ಸಿಹಿ ಲಡ್ಡಿಕೆ ತುಂಬುತ್ತಾರೆ.ನಂತರ ಅದರ ಮೇಲೆ ಒಂದು ಹೊಸ ರವಿಕೆ ಬಟ್ಟೆಯನ್ನು ತ್ರಿಕೋಣ ಆಕಾರವಾಗಿ ಮಡಿಸಿ ಇಡುತ್ತಾರೆ.ನಂತರ ಕಂಚಿನ ಎರಡು ಬದಿ ಒಂದೊಂದು ರವಿಕೆ ಬಟ್ಟೆ, ತ್ರಿಕೋನಾಕಾರದಲ್ಲಿ ಮಡಿಸಿದ್ದು,16 ವೀಳ್ಯದೆಲೆ,16 ಬಟ್ಟಲು ಅಡಿಕೆ, ಅದರ ಮೇಲೆ ಅರ್ಧ ಕೊಬ್ಬರಿ ಬಟ್ಟಲು,ಒಂದೊಂದು ಕನ್ನಡಿ,ಬಾಚಣಿಗೆ, ಹಾಗು ಇತರೆ ಮಂಗಳ ದ್ರವ್ಯಗಳಾದ ಅರಿಶಿಣ, ಕುಂಕುಮ, ಕಂಗಪ್ಪು, ಗಾಜಿನ ಬಳೆಗಳು, ಗೌರಿ ಬಳೆ ಬಿಚ್ಚೂಲೆ ಇಡುತ್ತಾರೆ.ನಂತರ ಅರಿಸಿನಕ್ಕೆ ಹಾಲು ಸೇರಿಸಿ ಲಡಿಕೆ ಆಕಾರದಲ್ಲಿ ಗೌರಿ ಮಾಡಿ ಅದಕ್ಕೆ ಕುಂಕುಮದ ಬೊಟ್ಟು ಇಡುತ್ತಾರೆ.ಕೆಲವರು ಮಂಗಳ ಗೌರಿ ವಿಗ್ರಹ ಕೂಡಾ ಇಡುವರು.

 ಮಂಗಳ ಗೌರಿಗೆ ಷೋಡಶೋಪಚಾರ ಪೂಜೆ ನೆರವೇರಿಸಿ ಕಡೆಯಲ್ಲಿ ಅಕ್ಕಿ ಹಿಟ್ಟಿನ ತಂಬಿಟ್ಟಿನಲ್ಲಿ ತುಪ್ಪದ ಬತ್ತಿ ಇಟ್ಟು 16 ದೀಪದ ಆರತಿ ಮಾಡುವರು. ಇದೇ ವಿಶೇಷ.ನಂತರ ಒಂದು ಹೊಸ ಸ್ಟೀಲಿನ ಮೊಗಚು ಕೈ ಅಥವಾ ಚಮಚಕ್ಕೆ ತುಪ್ಪ ಸವರಿ ಈ ಆರತಿಗೆ  ಹಿಡಿದು ಕಪ್ಪು ಹಿಡಿಯುತ್ತಾರೆ .ಆಗ ನವ ವಿವಾಹಿತೆಯರು ಮಂಗಳ ಗೌರಿ ಕಥೆ ಓದಬೇಕು ಅಥವಾ ಹಾಡನ್ನು ಹಾಡಬೇಕು.ಆಗ ಅವರ ಅತ್ತೆ ಜಡೆ ಹೆಣೆಯುತ್ತಾರೆ.ದೀಪಗಳು ಆರಿ ಕಪ್ಪು ಹಿಡಿದ ನಂತರ ಒಂದು ಒಳ್ಳೆಯ ಹೂವಿನಲ್ಲಿ ಆ ಕಪ್ಪನ್ನು ಮಂಗಳ ಗೌರಿ ದೇವಿಗೆ ಇಟ್ಟು, ತಾವು ಕಣ್ಣಿಗೆ ಹಚ್ಚಿಕೊಂಡು, ನಂತರ ಮುತ್ತೈದೆಯರಿಗೆಲ್ಲಾ ತಾಂಬೂಲ ನೀಡಿ, ಕಪ್ಪು ನೀಡುವರು. ಈ ದಿನ ದೇವಿಗೆ ಹಬ್ಬದಡುಗೆ ಮಾಡಿ ,ಸಪ್ಪೆ ಹುಗ್ಗಿ ,ಪಾಯಸ ವಿಶೇಷ ವಾಗಿ ನೈವೇದ್ಯ ಮಾಡುವರು.ಹೀಗೆ ಈ ಅರಿಶಿನದ ಗೌರಿಯನ್ನೇ ಶ್ರಾವಣ ಮಂಗಳವಾರ ಪೂರ್ತಿ ಪೂಜಿಸಿ ಕಡೆಗೆ ಸ್ವರ್ಣಗೌರಿ ಹಬ್ಬದಲ್ಲಿ ಗೌರಿ ಬಿಡುವಾಗ, ಈ ಅರಿಶಿನದ ಗೌರಿಯನ್ನು ಮಡಿಲು ತುಂಬುವರು.

 ಪ್ರತಿ ವಾರ  ದೇವಿಯ ಬಲಭಾಗದ ಕೊಬ್ಬರಿ, ವೀಳ್ಯದೆಲೆ, ಅಡಿಕೆ ಇತ್ಯಾದಿ ದಂಪತಿಗಳ ಸೇವಿಸಬೇಕು. ಎಡ ಭಾಗದ್ದನ್ನು ವಿವಾಹಿತೆಯರೂ ತಾಯಿಗೆ ತಾಂಬೂಲ ನೀಡಬೇಕು.

5 ವರುಷದ ಆಚರಣೆಯ ನಂತರ ಕಡೆ ವರುಷ,ಹೊಸಾ ಕನ್ಚು ಲಡ್ಡಿಕೆ ಸಮೇತ, ತಾಳಿ, ಕರಿಮಣಿ, ಗುಂಡು, ಹಾಗು ಕಾಲುಂಗುರ, ಹೊಸಾ ಸೀರೆ, ರವಿಕೆ ಬಟ್ಟೆ ಹಾಗು ಕಾಳು ಬೇಳೆ, ಇತ್ಯಾದಿ ಜೊತೆಗೆ ಮಂಗಳ ದ್ರವ್ಯಗಳನ್ನು ಇಟ್ಟು  ಮೊರದ ಬಾಗಿನ ತಾಯಿಗೆ ನೀಡುವರು.ತಾಯಂದಿರು ತಾಳಿ, ಕರಿಮಣಿ, ಗುಂಡು ಹಾಗು ಕಾಲುಂಗುರ ತಮಗೆ ಗಂಡು ಮಕ್ಕಳಿದ್ದರೆ ಅವರ ವಧುಗಳಿಗೆ ಎಂದು ರಕ್ಷಿಸುವರು.

ಮಂಗಳ ಗೌರಿ ಕಥೆಯಲ್ಲಿ ಅಲ್ಪಾಯುಷಿ ರಾಜಕುಮಾರನನ್ನು ಮದುವೆಯಾಗುವ ರಾಜಕುಮಾರಿಯು ಈ ಪೂಜೆ ಮಾಡಿ ತನ್ನ ಪತಿಯ ಕಂಟಕ ವನ್ನು ದೂರ ಮಾಡಿದ ಕಥೆ ಇದೆ.

ವೈಚಾರಿಕವಾಗಿ ಹಿಂದೆಲ್ಲ ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದರು.ಶ್ರಾವಣ ಮಳೆಗಾಲ.ಹೀಗಾಗಿ ಹೊರ ಹೋಗುವ ಗಂಡಸರ ಕ್ಷೇಮಕ್ಕಾಗಿ ಈ ಪೂಜೆ ರೂಢಿಗೆ ಬಂದಿರಬಹುದು.ವಯಸ್ಸು ಚಿಕ್ಕದಾಗಿರುತ್ತಿದ್ದರಿಂದ ಅವರನ್ನು ಸಂಸಾರಕ್ಕೆ ಅಣಿಗೊಳಿಸಲು ಹಾಗು ನವ ವಿವಾಹಿತೆಯಾರಿಗೆ ತವರಿನ ನಂಟು ಉಳಿಸಲು ಆಗಿನ ಕಾಲದಲ್ಲಿ ಇಂಥ ಆಚರನೇಗಳು ನೆರವಾಗುತ್ತಿದ್ದವು.ಇನ್ನು ಆಹಾರ ಇತ್ಯಾದಿ ಆಗಿನ ಹವಾಮಾನ, ಬೆಳೆಗೆ ಸಂಬಂಧಿಸಿದಂತೆ ಹೊಸ ಬೆಳೆಯನ್ನು ದೇವರ ಪೂಜೆಗೆ ಉಪಯೋಗಿಸುವ, ನಂತರ ಕೆಲ ಮುತ್ತೈದೆಯರಿಗೆ ನೀಡಿ, ನಂತರ ತಾವು ಸೇವಿಸುವ ರೂಡಿ ಇದ್ದಿರಬಹುದು.

ಈ ಲೇಖನ ಸ್ಮಾರ್ಥ ಸಂಪ್ರದಾಯದ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ಬಗ್ಗೆ ಇದೆ .ಈ ಹಬ್ಬ ಲಿಂಗಾಯತರು, ವೀರಶೈವರು ವೈಶ್ಯರು, ಕ್ಷತ್ರಿಯ ಹಾಗು ಇತರೆ ಜಾತಿಯವರಲ್ಲಿಯೂ ಇದೆ.ಅದು ಅವರ ಮನೆಯ ಪೂರ್ವಿಕರ ಪದ್ಧತಿಯಂತೆ ಇರುತ್ತದೆ.

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

7019990492

Post a Comment

0Comments

Post a Comment (0)