ಶ್ರೀ ರಾಘವೇಂದ್ರ ಸ್ವಾಮಿಗಳವರ "353ನೇ ಆರಾಧನಾ ಮಹೋತ್ಸವ" ಪೂರ್ವಭಾವಿ ಸ್ವಯಂ ಸೇವಕರ ಸಭೆ ರಾಯರ ಸನ್ನಿಧಿಯಲ್ಲಿ
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ1008 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆರಾಧನೆಯ ಪೂರ್ವಭಾವಿಯಾಗಿ ಸ್ವಯಂಸೇವಕರ ಸಭೆಯ ಅಂಗವಾಗಿ ವೇದಘೋಷ, ಕೊಳಲುವಾದನ, ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಆರ್. ಕೆ. ವಾದೀಂದ್ರಾಚಾರ್ಯರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಬಗ್ಗೆ ಪ್ರಸ್ತಾಪಿಸಿ, ಆಗಸ್ಟ್18 ರಂದು ಸಂಜೆ 6-30ಕ್ಕೆ ಉಡುಪಿಯ ಕಾಣಿಯೂರು ಮಠದ ಪರಮಪೂಜ್ಯ1008 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು "ಉದ್ಘಾಟನೆ" ಮಾಡಲಿದ್ದಾರೆ ಎಂದು ತಿಳಿಸಿದರು. ತದನಂತರ ಸುಮಾರು ವರ್ಷಗಳಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು ಶ್ರೀಮಠದ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಸಪ್ತರಾತ್ರೋತ್ಸವ ಉತ್ಸವದ ಅಂಗವಾಗಿ ದಿನಾಂಕ 18-8-2024 ರಿಂದ 24-82024 ವರೆಗೆ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಭಕ್ತರಿಗೆ ಅನ್ನಸಂತರ್ಪಣೆ, ಉತ್ಸವಗಳು, ಪ್ರವಚನ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀಮತಿ ಮೇಘ ಶಿವಕುಮಾರ್ (ಹರಿದಾಸವಾಣಿ), ವಿದ್ವಾನ್ ಶ್ರೀ ಪ್ರಾದೇಶಾಚಾರ್ಯ (ಹರಿದಾಸ ಮಂಜರಿ), ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್-ಅಶೋಕ್ (ಹರಿನಾಮ ಘೋಷ), ವಿದ್ವಾನ್ -ಜಯತೀರ್ಥ ಮೇವುಂಡಿ (ಹರಿನಾಮ ಸಂಕೀರ್ತನೆ), ವಿದ್ವಾನ್ ಶ್ರೀ ಶೇಷಗಿರಿದಾಸ್ ರಾಯಚೂರು (ದಾಸರ ಪದಗಳ ಗಾಯನ), ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ (ಭರತನಾಟ್ಯ), ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಪ್ರವಚನ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ 353ನೇ "ಆರಾಧನಾ" ಮಹಾರಥೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಸಡಗರ ವಿಜೃಂಭಣೆಯಿಂದ ನೆರವೇರಿಸಲು ಉದ್ದೇಶಿಸಿದ್ದು, ಈ ಸಂದರ್ಭದಲ್ಲಿ ಶ್ರೀ ಗುರುರಾಯರ ಸನ್ನಿಧಿಗೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರು ತಿಳಿಸಿದರು, ಸ್ವಯಂಸೇವಕರ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಹಾಗೂ ಶ್ರೀ ಮಧುರನಾಥ್, ಡಾ|| ಶ್ರೀಧರ್, ಸುರೇಶ್ , ವಿಜಯ್ ಕುಮಾರ್, ಶ್ರೀನಾಥ್, ಇಂಜಿನಿಯರ್ ಶ್ರೀಧರ್, ಜಯಂತಿ ರಾಘವೇಂದ್ರ, ಉಷಾ ಮೋಹನ್, ಎ ಸಂತೋಷ್, ರಾಜೇಶ್ ಕುಲಕರ್ಣಿ, ಇನ್ನೂ ಮುಂತಾದ ನೂರಾರು ಸ್ವಯಂ ಸೇವಕರು ಭಾಗವಹಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.