ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ -ಎಂ.ಕೃಷ್ಣಪ್ಪ

VK NEWS
By -
0

ಬೆಂಗಳೂರು : ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ 150 ಅಡಿ ಎತ್ತರದ ಪ್ರತಿಮೆಯನ್ನು ಬೆಂಗಳೂರು ನಗರದಲ್ಲಿ ಪ್ರತಿಷ್ಠಾಪನೆ ಮಾಡಲು ಎಂದು ಆನೇಕಲ್ ಡಾ||ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಎಂ.ಕೃಷ್ಣಪ್ಪರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.

ಅಧ್ಯಕ್ಷರಾದ ಎಂ.ಕೃಷ್ಣಪ್ಪ ರವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ.

ಸಾಮಾನತೆ ಮತ್ತು ಮಹಿಳೆಯರಿಗೆ ಸರಿಸಾಮಾನ ಸ್ಥಾನ, ಎಲ್ಲರು ಸರಿಸಮಾನವಾಗಿ ಬದುಕು ಸಾಗಿಸಲು ಸಂವಿಧಾನ ಸಹಕಾರಿಯಾಗಿದೆ.


ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನವನ್ನು ಬರೆದು ದೇಶಕ್ಕೆ ಕೊಡುಗೆಯಾಗಿ ನೀಡಿದ ಕಾರಣದಿಂದ ದೇಶದಲ್ಲಿ ಎಲ್ಲರು ಸಹೋದರತ್ವ ಮತ್ತು ಸಹಬಾಳ್ಮೆಯಿಂದ ಬದುಕುತ್ತಿದ್ದಾರೆ. ಅಂಬೇಡ್ಕರ್ ರವರ ಜೀವನ ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು . ತೆಲಂಗಾಣದಲ್ಲಿ 120ಅಡಿ ಪ್ರತಿಮೆ ನಿರ್ಮಿಸಲಾಗಿದೆ, ರಾಜ್ಯದಲ್ಲಿಯು 150ಅಡಿ ಉದ್ದದ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸಬೇಕು ಎಂಬುದು ರಾಜ್ಯ ಸರ್ಕಾರ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಅಧ್ಯಕ್ಷೆ  ಬೊಮ್ಮಸಂದ್ರ ರೇಣುಕಾ, ಉಪಾಧ್ಯಕ್ಷ ಮಣಿಗಾನಹಳ್ಳಿ ವಿ.ಶ್ರೀನಿವಾಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯಕವಿ, ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ಎಸ್.ಮೀಸೆ ರಾಮಣ್ಣ, ರಾಜ್ಯ ಮಹಿಳಾ ಗೌರವಾಧ್ಯಕ್ಷ ಸಿ.ಮೀನಾಕ್ಷಿ, ಮುಖಂಡರುಗಳಾದ ಪಿ.ಮಂಜುನಾಥ್, ಕೊಪ್ಪ ಮುನಿರಾಜಣ್ಣ, ಶೇಕ್ ರಿಜ್ಞಾನ್ ರವರು ಭಾಗವಹಿಸಿದ್ದರು.

Post a Comment

0Comments

Post a Comment (0)