ಬೆಂಗಳೂರಿನ ಚೊಕ್ಕನಹಳ್ಳಿಯಲ್ಲಿ ಶ್ರೀ ಬಾಯಿಕೊಂಡ ಗಂಗಮ್ಮದೇವಿ ಕರಗ ಹಾಗೂ 3 ನೇ ವಾರ್ಷಿಕೋತ್ಸವ
ಬೆಂಗಳೂರಿನ ಯಲಹಂಕ ತಾಲ್ಲೂಕು ಜಾಲ ಹೋಬಳಿ ಮಾರೇನಹಳ್ಳಿ ಗ್ರಾ.ಪಂ. ಚೊಕ್ಕನಹಳ್ಳಿಯ ಮಾರುತಿ ಬಡಾವಣೆಯಲ್ಲಿ ಸ್ಥಾಪಿಸಲಾಗಿರುವ ಶ್ರೀ ಬಾಯಿಕೊಂಡ ಗಂಗಮ್ಮ ದೇವಿ ಹಾಗೂ ಶ್ರೀ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ, ವಾಡಿಕೆಯಂತೆ ಈ ಬಾರಿಯೂ ಶ್ರಾವಣ ಮಾಸದ ಪ್ರಯುಕ್ತ 3ನೇ ವಾರ್ಷಿಕ ಮಹೋತ್ಸವದ ಆಚರಣೆಯನ್ನು, ಶ್ರೀ ಕ್ಷೇತ್ರದ ದೈವಗಳ ಸಂಕಲ್ಪದಂತೆ ಶ್ರೀ ಗಂಗಮ್ಮ ದೇವಿ ಉಪಾಸಕರು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರು ಆದ ಶ್ರೀ ಭಾಸ್ಕರ್ ನಾಯ್ಡುರವರ ಮಾರ್ಗದರ್ಶನದಲ್ಲಿ, ಆಗಸ್ಟ್ 30 ನೇ ತಾರೀಖು ಶುಕ್ರವಾರ ಹಾಗೂ 31 ನೇ ತಾರೀಖು ಶನಿವಾರದಂದು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ.
ದಿ. 30.08.2024ನೇ ಶುಕ್ರವಾರ ಸಂಜೆ 6-30ಕ್ಕೆ ಸರಿಯಾಗಿ ಗಂಗೆ ಪೂಜೆಯೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮ ಯಾಗಶಾಲೆ ಪ್ರವೇಶ, ಸ್ವಸ್ತಿವಾಚನ (ಅನುಗ್ನೆ). ಸಭಾ ಪ್ರಾರ್ಥನೆ, ದೀಪಾರಾಧನೆ, ಗಣಪತಿ ಪೂಜಾ, ಮಹಾಸಂಕಲ್ಪ, ಪುಣ್ಯಾಹವಾಚನ, ನವಗ್ರಹ ಪೂಜೆ ಪ್ರಧಾನದೇವತಾ ಕಳಶಾರಾಧನೆ, ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ಪರಿವಾರ ಹೋಮ ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದಗಳ ವಿನಿಯೋಗ ನೆರವೇರಿಸಲಾಗುತ್ತದೆ.
ದಿ. 31.08.2024ನೇ ಶನಿವಾರದಂದು ಬೆಳಿಗ್ಗೆ 05-30 ಕ್ಕೆ ಸರಿಯಾಗಿ ಸುಪ್ರಭಾತ ಸೇವೆ, ದಿವ್ಯವೇದ ಪಾರಾಯಣ, ಗಣಪತಿ ಪ್ರಾರ್ಥನೆ, ಕಳಶಾರಾಧನೆ ಹೋಮ, ಕೈಂಕರ್ಯ, ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಉಮಾ ಮಹೇಶ್ವರ ಹೋಮ, ಪ್ರಧಾನ ದೇವತಾ ಶ್ರೀ ಬಾಯಿಕೂಂಡ ಗಂಗಮ್ಮದೇವಿ ಮತ್ತು ಶ್ರೀ ಅಭಯ ಆಂಜನೇಯಸ್ವಾಮಿ ಹೋಮ, ಶತೃ ಭಾದೆ ನಿವಾರಣೆಗಾಗಿ ವಿಶೇಷ ಪ್ರತ್ಯಂಗಿರ ಹೋಮ, ಪರಿವಾರ ಹೋಮ, ಶಾಂತಿ ಹೋಮ ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಅಲಂಕಾರ ಸೇವೆ ಅಷ್ಟಾವಧನ ಸೇವೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12.30 ರ ವೇಳೆಗೆ ಶ್ರೀ ದೇವಿ ಉಪಾಸಕರಾದ ಶ್ರೀ ಭಾಸ್ಕರ್ ನಾಯ್ದುರವರು ಕರಗಧಾರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗಂಗಮ್ಮನ ಕರಗವು ಸಂಚಾರ ನಡೆಸಿ, ಭಕ್ತರಿಗೆ ದರ್ಶನ ನೀಡಿ ಅವರ ಪೂಜೆ ಸ್ವೀಕರಿಸಿ ದೇವಸ್ಥಾನಕ್ಕೆ ಮರಳಿ ಬಂದ ನಂತರ, ನಮ್ಮ ದೇಶದ ಎಲ್ಲಾ ಪ್ರಾಂತ್ಯಗಳಿಂದ ಈ ವಿಶೇಷ ಶ್ರಾವಣ ಮಾಸದ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವಂತಹ ಭಕ್ತಾಧಿಗಳ ಉಪಸ್ಥಿತಿಯಲ್ಲಿ, ವಾದ್ಯ ಮೇಳಗಳೊಂದಿಗೆ ಶ್ರೀ ಬಾಯಿಕೊಂಡ ಗಂಗಮ್ಮ ದೇವಿ ಹಾಗೂ ಶ್ರೀ ಅಭಯ ಆಂಜನೇಯಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆಯನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಲಾಗಿರುತ್ತದೆ.
ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಎರಡು ದಿನಗಳ ಈ ಕಾರ್ಯಕ್ರಮಕ್ಕೆ ಸಕಾಲಕ್ಕೆ ಆಗಮಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸುತ್ತ ಮುತ್ತಲಿನ ಎಲ್ಲ ಗ್ರಾಮಸ್ಥರು ಈ ಮೂಲಕ ಭಕ್ತಾದಿಗಳನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತಿದ್ದಾರೆ.