ಲಯನ್ಸ್ ಸಂಸ್ಥೆ 317ಎಫ್ ಜಿಲ್ಲೆಯಿಂದ ಶಿಕ್ಷಕರಿಗೆ ತರಬೇತಿ

VK NEWS
By -
0

 ಬೆಂಗಳೂರು  ಜಿಲ್ಲಾ ಲಯನ್ಸ್ ಸಂಸ್ಥೆ 317ಎಫ್ ಜಿಲ್ಲೆಯಿಂದ ಶಿಕ್ಷಕರಿಗೆ ತರಬೇತಿ ನೀಡುವ ಶಿಬಿರವನ್ನು ಎರಡು ದಿವಸ ಕಾಲ ಇಲ್ಲಿನ ಮ್ಯಾಕ್ಸ್ವೆಲ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಕಡೆ ನಡೆಯುತ್ತಿದ್ದು ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗಿತ್ತು ಎಂದು ಕಾರ್ಯಕ್ರಮದ ಸಂಯೋಜಕರಾದ ಲಯನ್ ಪ್ರಿಯಾಆಜಿತ್ ರವರು ತಿಳಿಸಿರುತ್ತಾರೆ.

     ಶಿಕ್ಷಕರ ತರಬೇತಿ ಪಡೆದ ಎಲ್ಲಾ ಶಿಕ್ಷಕರಿಗೂ ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಪ್ರಶಸ್ತಿ ಪತ್ರ ನೀಡಿ ಮಾತನಾಡುತ್ತಾ ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.



     ಈ ಕಾರ್ಯಕ್ರಮದಲ್ಲಿ ಮಾಜಿ ಲಯನ್  ಗವರ್ನರ್ ಗಳಾದ ಎಸ್.ನಾಗರಾಜರಾವ್, ಸಿ.ಕೆ. ಕೃಷ್ಣಮೂರ್ತಿ, ಕವಿತಾ ಶಾಸ್ತ್ರ  ಉಷಾ ಕುಮಾರಿ, 

ಎಂ.ಆರ್. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)