ಜಯನಗರ ರಾಯರ ಮಠದಲ್ಲಿ ಯಶಸ್ವಿಯಾಗಿ ಜರುಗಿದ ಟಿ ಟಿ ಡಿ ಕಾರ್ಯಕ್ರಮ ಪ್ರವಚನದ ಮಂಗಳ

VK NEWS
By -
0

 ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 6 ರಿಂದ 9ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಹರಿ ಭಜನೆ, ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ಯರಿಂದ "ಶ್ರೀಮದ್ಭಾಗವತ ರತ್ನ ಶ್ರೀ ಪ್ರಹ್ಲಾದರಾಜರ ವೈಭವ" ವಿಷಯವಾಗಿ ಧಾರ್ಮಿಕ ಪ್ರವಚನ, ಶ್ರೀಮತಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ, ಆಗಸ್ಟ್ 8, ಗುರುವಾರ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಸುಮಾರು ಐದು ಸಾವಿರ ಜನರಿಗೆ ಅನ್ನದಾನ ಸೇವೆ,  ಸಂಜೆ ಕಾರ್ಯಕ್ರಮದಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ ತೊಟ್ಟಿಲು ಸೇವೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಮತ್ತು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. 




ಇದೇ ಸಂದರ್ಭದಲ್ಲಿ ವಿದ್ವಾನ್ - ಬ್ರಹ್ಮಣ್ಯ ಆಚಾರ್ಯರಿಗೆ ಶ್ರೀ ಮಠದ ಪರವಾಗಿ ಆರ್ ಕೆ ವಾದಿಂದ್ರಚಾರ್ಯರು ಮತ್ತು ನಂದಕಿಶೋರಾಚಾರ್ಯರು ಸನ್ಮಾನಿಸಿದರು ಈ ವಿಶೇಷ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಶ್ರೀ ಸುಧೀಂದ್ರ  ದೇಸಾಯಿಯವರು ಮತ್ತು ಶ್ರೀಮಠದ ಸಿಬ್ಬಂದಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Post a Comment

0Comments

Post a Comment (0)