ರಾತ್ರಿ 11:10 ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ:-19 ರ ಚೈನ್ ಲಿಂಕ್ ಕಟ್ ಆಗಿದ್ದು,ಗೇಟ್ ಕಾಣಿಸುತ್ತಿಲ್ಲ, ಭಾರೀ ಪ್ರಮಾಣದ ನೀರು (ಗೇಟ್ ನಂ:-19 ರಿಂದಲೇ ಸರಿಸುಮಾರು 35000 ಕ್ಯೂಸೆಕ್ಸ್) .ಈ ಅವಘಡದ ಸುದ್ದಿ ತಿಳಿದ ತಕ್ಷಣವೇ * ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು , ಸಚಿವರಾದ ಶ್ರೀ ಶಿವರಾಜ್ ತಂಗಡಗಿ ರವರು, ಕಾಡಾ ಅಧ್ಯಕ್ಷರು* ಡ್ಯಾಂ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಹಾಗೆಯೇ ಸಂಸದ ಶ್ರೀ ರಾಜಶೇಖರ ಹಿಟ್ನಾಳ್* ರವರು ಜಲಸಂಪನ್ಮೂಲ ಇಲಾಖೆಯ ಮುಖ್ಯಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ.
ತುಂಗಾಭದ್ರಾ ಡ್ಯಾಂ ನ ಅಧಿಕಾರಿಗಳೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ.ಈಗಾಗಲೇ *ಹೈದ್ರಾಬಾದ್ ನ ಗೇಟ್ ತಜ್ಞರಾದ ಕನ್ನಯ್ಯ ನಾಯ್ಡು ರವರಿಂದ ಗೇಟ್ (Design) ವಿನ್ಯಾಸ ವನ್ನು* ತರಿಸಿಕೊಳ್ಳಲಾಗಿದೆ.
ಜೊತೆಗೆ ಹೊಸಪೇಟೆಯ *ಹಿಂದುಸ್ತಾನ್ ಇಂಜಿನಿಯರಿಂಗ್, ನಾರಾಯಣ ಇಂಜಿನಿಯರಿಂಗ್ ಕಂಪನಿ* ಗಳಿಗೆ ಗೇಟ್ ಸಿದ್ದಪಡಿಸುವ ಕಾರ್ಯ ನೀಡಲಾಗಿದೆ.ಇನ್ನೂ ಮೂರು ನಾಲ್ಕು ದಿನಗಳಲ್ಲಿ ಗೇಟ್ ನ್ನು ಸಿದ್ದಪಡಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಒತ್ತಡವನ್ನು ತಡೆಯಲು 20 ಗೇಟ್ ಗಳಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು.ಲೋಕಸಭಾ ಬಡ್ಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಾನ್ಯ ಸಂಸದರು ಇಂದು ಸಂಜೆ ಬೆಂಗಳೂರಿನಿಂದ ಆಗಮಿಸಿ ಡ್ಯಾಂ ಗೆ ಭೇಟಿ ನೀಡಲಿದ್ದಾರೆ.