ದೇಶದ ಆರ್ಥಿಕ ಪ್ರಗತಿಯಲ್ಲಿ ಕೈಜೋಡಿಸುವಂತೆ ಲೆಕ್ಕಪರಿಶೋಧಕರಿಗೆ ಉದ್ಯಮಿ ಟಿ.ವಿ.ಮೋಹನದಾಸ ಪೈ ಕರೆ

VK NEWS
By -
0

ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್  ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 9700 ಕ್ಕೂ ಅಧಿಕ ಮಂದಿ ಪದವೀಧರರಿಗೆ ಪದವಿ ಪ್ರಧಾನ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು.

ಪದವಿ ಪ್ರಧಾನ ಪ್ರಮುಖ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ದಹಲಿ, ಮುಂಬೈ, ಚನೈ ಸಹಿತ ದೇಶಾದ್ಯಂತ 13 ನಗರಗಳಲ್ಲಿ ಏಕಕಾಲಕ್ಕೆ ನಡೆದ  ಘಟಿಕೋತ್ಸವ ಕಾರ್ಯಕ್ರಮದಲ್ಲಿ

 9700 ಕ್ಕೂ ಅಧಿಕ ಮಂದಿ ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು. 

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೆಸರಾಂತ ಉದ್ಯಮಿ ಆರೀನ್ ಕ್ಯಾಪಿಟಲ್ ಹಾಗೂ ಮಣಿಪಾಲ ಗ್ಲೋಬಲ್ ಎಜುಕೇಷನ್ ಚೇರಮನ್ ಟಿ.ವಿ ಮೋಹನದಾಸ ಪೈ ಅವರು ಪದವಿ ಪ್ರಧಾನ ಮಾಡಿದರು.

ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 900 ಮಂದಿ ಸಿಎ ಪದವೀಧರರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪತ್ರ ಸ್ವೀಕರಿಸಿದರು.

ಸಿಎ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ಟಿ.ವಿ.ಮೋಹನದಾಸ ಪೈ ಭಾರತದ ಆರ್ಥಿಕ ಪ್ರಗತಿಯಲ್ಲಿ ಸಿಎ ಪದವೀಧರರ ಪಾತ್ರ ಮಹತ್ವಗಾಗಿದ್ದು ದೇಶದ ಆರ್ಥಿಕ ಪ್ರಗತಿಯಲ್ಲಿ ಕೈಜೋಡಿಸುವಂತೆ ಕರೆನೀಡಿದರು.

 ಭಾರತ ಮುಂದಿನ ಹತ್ತು ವರ್ಷದಲ್ಲಿ ದೊಡ್ಡ  ಪ್ರಮಾಣದ ಆರ್ಥಿಕ ಪ್ರಗತಿ ಸಾಧಿಸಲಿದ್ದು, ಜಾಗತಿಕ ಮಟ್ಟದಲ್ಲಿ ಬಲಿಷ್ಠ ಆರ್ಥಿಕ ಶಕ್ತಿಯಾಗಿಹೊರಹಮ್ಮಲಿದೆ ಎಂದರು.

ಪ್ರಾಮಾಣಿಕತೆ, ವೃತ್ತಿ ನಿಷ್ಠತೆ, ಪರಿಶ್ರಮ ಯಶಸ್ಸಿನ ಮೆಟ್ಟಿಲಾಗಿದೆ ಎಂದ ಅವರು 

ಜಾಗತಿಕ ಮಟ್ಟದಲ್ಲಿ ಭಾರತ ಲೆಕ್ಕ ಪರಿಶೋಧಕರಿಗೆ ವಿಫುಲ ಅವಕಾಶವಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಯುವ ಪದವೀಧರರಿಗೆ ಕಿವಿ ಮಾತು ಹೇಳಿದರು.

ಭಾರತೀಯ‌ ಲೆಕ್ಕ ಪರಿಶೋಧಕರ  ಸಂಸ್ಥೆಯ ಅಧ್ಯಕ್ಷ ಸಿಎ ರಂಜಿತ್ ಕುಮಾರ್ ಅಗವಾಲ ಮಾತನಾಡಿ ದೇಶಾದ್ಯಂತ 9700 ಕ್ಕೂ ಅಧಿಕ ಮಂದಿಗೆ ಪದವಿ ಪ್ರಧಾನ ಮಾಡಲಾಗಿದೆ.  ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಲೆಕ್ಕಪರಿಶೋಧಕರಿದ್ದು ಪ್ರತಿ ಒಬ್ಬರು ಮಹಿಳೆಯರಾಗಿರುವುದು ಹೆಮ್ಮೆಯ ವಿಷಯ ಎಂದರು.

ಲೆಕ್ಕಪರಿಶೋಧಕ ವೃತ್ತಿಯ ಗೌರವ ಕಾಪಾಡುವಂತೆ ನೂತನ‌ ಪದವಿದರರಿಗೆ ಕಿವಿಮಾತು ಹೇಳಿದರು.

ಬಾರತೀಯ ಲೆಕ್ಕಪರಿಶೋಧಕರ ಸಂಘದ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿಎ ಕೋಥಾಸ್ ಎಸ್ ಶ್ರೀನುವಾಸ್, ಸಿಎ ಪ್ರಸನ್ನ ಕುಮಾರ್. ಸಿಎ ಗೀತಾ ಎಬಿ ಹಾಗೂ ಬೆಂಗಳೂರು ಶಾಖೆಯ ಅಧ್ಯಕ್ಷಸಿಎ ಪ್ರಮೋದ್ ಆರ್‌ ಹೆಗಡೆ ಹಾಜರಿದ್ದರು.

Post a Comment

0Comments

Post a Comment (0)