ರಾಜಾಜಿನಗರ: ಅಬ್ದುಲ್ ಕಲಾಂ ಸಭಾಂಗಣದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ: ನಾಗರೀಕ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನಸ್ಪಂದನಾ ಸಭೆ ಆಯೋಜಿಸಲಾಗಿತ್ತು.
ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಬಿಬಿಎಂಪಿ ಕಂದಾಯ, ಇಂಜನಿಯರಿಂಗ್ ವಿಭಾಗ ಮತ್ತು ಪೊಲೀಸ್ ಇಲಾಖೆ, ಬೆಸ್ಕಾಂ ಮತ್ತು ಜಲಮಂಡಳಿ, ಅರಣ್ಯ ವಿಭಾಗ ಅಧಿಕಾರಿಗಳು ಭಾಗವಹಿಸಿದ್ದರು.
ಕಸ ವಿಲೇವಾರಿ, ಪುಟ್ ಪಾತ್ ನಲ್ಲಿ ಅನಧಿಕೃತ ಅಂಗಡಿಗಳ ತೆರವುಕಾರ್ಯ, ಹೋಟೆಲ್ ಸ್ವಚ್ಚತೆ ಕುರಿತು,ಖಾತೆ , ಓಂಟಿ ಮನೆ ನಿರ್ಮಾಣ, ಗಾಂಜಾ ಸೇದಿ ಪುಂಡರ ಹಾವಳಿ, ಬೋರ್ ವೆಲ್ ಸಮಸ್ಯೆ, ನೀರಿನ ಬಿಲ್ಲು ಹೆಚ್ಚು ಬರುತ್ತಿರುವ ಕುರಿತು, ಮರ ತೆರವು ಮೂಲಭೂತ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಸ್ಥಳದಲ್ಲಿ ಇದ್ದ ಅಧಿಕಾರಿಗಳು ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಂಡರು.
ಇದೇ ಸಂದರ್ಭದಲ್ಲಿ *ಎಸ್.ಸುರೇಶ್ ಕುಮಾರ್ ರವರು* ಮಾತನಾಡಿ ಬೆಂಗಳೂರುನಗರ ವೇಗವಾಗಿ ಬೆಳಯುತ್ತಿದೆ, ಸಮಸ್ಯೆಗಳು ನಿತ್ಯ ನಿರಂತರ ಕಾಲಕಾಲಕ್ಕೆ ಸಮಸ್ಯೆ ಪರಿಹಾರ ಒದಗಿಸಿ ಅಭಿವೃದ್ದಿಯತ್ತ ಸಾಗುವುದು.
ಶಾಶ್ವತ ಪರಿಹಾರ ಮಾಡುವುದು ನಮ್ಮ ಮೂಲಭೂತ ಉದ್ದೇಶ.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು ಸಕಾಲಕ್ಕೆ ಮಳೆ ಬರುತ್ತಿದೆ ನೀರಿನ ಸಮಸ್ಯೆ ಕಡಿಮೆಯಾಗಿದೆ, ಕುಡಿಯುವ ನೀರಿನ ಬಿಲ್ಲು ಹೆಚ್ಚಳವಾಗಿದೆ ನಮಗೆ ನೀರು ಬರುತಿಲ್ಲ ಹಲವಾರು ನಾಗರಿಕರು ಹೇಳುತ್ತಿದ್ದಾರೆ, ಸಮಸ್ಯೆ ಇರುವ ಕಡೆ ವಾಟರ್ ಮೀಟರ್ ಪರಿಶೀಲನೆ ಮಾಡಲಾಗುವುದು.
ಡೆಂಗ್ಯೂ ಕುರಿತು ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡ ಕಾರಣದಿಂದ ನಮ್ಮ ಕ್ಷೇತ್ರದಲ್ಲಿ 5ಡೆಂಗ್ಯೂ ಪ್ರಕರಣ ದಾಖಲಾಗಿದೆ.
ಡೆಂಗ್ಯೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಜನಸ್ಪಂದನಾ ಕಾರ್ಯಕ್ರಮಗಳಿಂದ ಜನರ ನೇರವಾಗಿ ಸಮಸ್ಯೆ ಹೇಳುತ್ತಾರೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳ ಪರಿಹಾರ ಒದಗಿಸಲಾಗುತ್ತಿದೆ.
*5 ವರ್ಷದ ಮಗುವಿಗೆ ಕಿವಿ ಅಪರೇಷನ್ ಕ್ಲಾಕ್ ಕೀಯ್ಲರ್ ಇನ್ ಪ್ಲಾಂಟ್ ಅಪರೇಷನ್ ಗಾಗಿ 10ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಮನವಿ ಸಲ್ಲಿಸಿದರು, ಕೊಡಲೆ ಎಸ್.ಸುರೇಶ್ ಕುಮಾರ್ ರವರು ಇಂದಿರಾಗಾಂಧಿ ಆಸ್ಪತ್ರೆ ಗುರುವಾರದಂದು ಖುದ್ದಾಗಿ ಬಂದು ವೈದ್ಯರ ಬಳಿ ಮಾತನಾಡುತ್ತೇನೆ ಎಂದು ಹೇಳಿದರು*
ಮಜಿ ಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ರಾಜಣ್ಣ , ಹೆಚ್.ವಿಜಯಕುಮಾರ್, ಹೆಚ್.ಆರ್.ಕೃಷ್ಣಪ್ಪ, ದೀಪ ನಾಗೇಶ್, ಪ್ರತಿಮಾ ಮತ್ತು ಕಾರ್ಯಪಾಲಕ ಅಭಿಯಂತರಾದ ಗಂಗಾಧರ್, ತೋಟಗಾರಿಕೆ ಅಧ್ಯಕ್ಷರಾದ ಮಹಮದ್ಮ ಅಲಿ, ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಸಹ ಕಂದಾಯಧಿಕಾರಿ ಬಸವರಾಜ್, ಆರೋಗ್ಯ ಇಲಾಖೆ ಡಾ.ರಾಮು, ಸುಬ್ರಮಣ್ಯ ಪದಕಿ, ಸಂಧ್ಯಾ, ಬಿಬಿಎಂಪಿ ವಿದ್ಯುತ್ ವಿಭಾಗ ಅಭಿಯಂತರಾದ ಆನಂದ್, ಪೊಲೀಸ್ ಇಲಾಖೆಯ ಸಂಚಾರಿ ವಿಭಾಗದ ಶ್ವೇತ, ಪೊಲೀಸ್ ಅಧಿಕಾರಿಗಳಾದ ಶಿವಾನಂದ್, ಮಂಜುನಾಥ್ ರವರು ಪಾಲ್ಗೊಂಡಿದ್ದರು.