ಬೆಂಗಳೂರು, ಜು, 6; ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕರನ್ನು ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಷನ್ ನಿಂದ ಸನ್ಮಾನಿಸಲಾಯಿತು.
ನಗರದ ಮಲ್ಲೇಶ್ವರಂನ ಭೂಮಿಕ ಸಭಾಂಗಣದಲ್ಲಿ ರಿಯಾಲಿಟಿ ಬುಕ್ ಆಫ್ ನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಕನ್ನಡ ಚಲನಚಿತ್ರರಂಗದ ನಿರ್ಮಾಪಕರಾದ ಡಾಕ್ಟರ್ ಕೆ ಮಂಜು, ಗಂಡಸಿ ಸದಾನಂದ ಸ್ವಾಮಿ, ಡಾಕ್ಟರ್ ಕೆ ಎಸ್ ಕುಮಾರ್ ಜಯಕುಮಾರ್ ಹಾಗೂ ಡಿ ಕೆ ಡಿ ಸ್ಪರ್ಧಾಳು ಸಹನ ವಿಶ್ವ ದಾಖಲೆಗೆ ಸೇರ್ಪಡೆಯಾದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಕರಾಟೆ ಶ್ರೀನಾಥ್, ಮಹಿಳಾ ಅಧ್ಯಕ್ಷೆ ಗೀತಾ ಚಂದ್ರಶೇಖರ್, ಕ್ರೀಡಾ ಕಾರ್ಯದರ್ಶಿ ಡಾ. ಬಿಕೆ ಪ್ರಕಾಶ್ ಭರದ್ವಾಜ್. ಸಂಗೀತ ಸಂಚಾಲಕ ಡಾ. ನಂದನ್, ಪಾರ್ಥ ಎಸ್ ರವರು ಹಾಗೂ ಡಾಕ್ಟರ್ ಪ್ರೇಮಾ ಮತ್ತಿತರರಿಗೆ ಕರ್ನಾಟಕ ಫಿಲಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.