ಬೆಂಗಳೂರು : ಯಾವುದೇ ರೀತಿಯ ಕಾರ್ಯಕ್ರಮ ಗಳನ್ನು ಮಾಡಲು ದಾನಿಗಳ ಸಹಕಾರದಿಂದ ಅವರು ನೀಡುವ ನೆರವಿನಿಂದ ಉತ್ತಮವಾದ ಕಾರ್ಯ ಮಾಡಲು ಸಾಧ್ಯ ಎಂದು ಅಕ್ಷಯ ವಿಪ್ರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಸುಧೀಂದ್ರರಾವ್ ಹೇಳಿದರು.
ಅಕ್ಷಯ ವಿಪ್ರ ಮಹಾಸಭಾದ 17ನೇ ಸಮಾವೇಶದಲ್ಲಿ ವಾರ್ಷಿಕ ವರಧಿಯನ್ನು ವಾಚಿಸಿದ ಅವರು ಸಂಘವು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿಪ್ರ ಸಮುದಾಯದ ಸಂಘಟನೆ ಜತೆಗೆ ಹಿರಿಯ ದಂಪತಿಗಳಿಗೆ ಸನ್ಮಾನ, ತೊಂಬತ್ತು ದಾಟಿದ ಹಿರಿಯರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನಿಸಿ ಆಶೀರ್ವಾದ ಪಡೆದು ಅವರ ಜೀವನದ ಸಾರ್ಥಕ ಬದುಕಿನ ಮಾರ್ಗದರ್ಶನವನ್ನು ಪಡೆದು ಇನ್ನು ಹೆಚ್ಚಿನ ಚಟುವಟಿಕೆ ನೆಡಸಲು ಸಹಕಾರಿಯಾಗಿದೆ ಎಂದರು, ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಕೆಲಸಕ್ಕೆ ಹೋಗುವ ಪರ ಊರಿನವರಿಗಾಗಿ ಹಾಸ್ಟೆಲ್ ಸವಲತ್ತು ಮಾಡಿದ್ದು 26ಕ್ಕೂ ಹೆಚ್ಚು ಜನರಿಗೆ ಅನಕೂಲವಾಗಿದೆ, ಪ್ರತಿ ವರ್ಷ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ನೆರವುನ್ನು ನೀಡಲಾಗುತ್ತಿದೆ, ವಧು ವರನೇಶ್ವನೇ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸುಧೀಂದ್ರ ರಾವ್ ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ರವರು ಸಮಾವೇಶದಲ್ಲಿ ಪಾಲ್ಗೊಂಡು ಶುಭ ಹಾರೈಸಿ ತಮ್ಮ ಕಡೆಯಿಂದ ಸಾಧ್ಯ ವಾಗುವ ಎಲ್ಲಾ ರೀತಿಯ ನೇರವನ್ನು ನೀಡುವುದಾಗಿ ತಿಳಿಸಿದರು,
ಸಮಾರಂಭದಲ್ಲಿ ಟ್ರಸ್ಟ್ ವೆಲ್ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತವಾಗಿ ಅರೋಗ್ಯ ತಪಾಸಣೆಯನ್ನು ಡಾ, ಕಿರಣ್ ಎಸ್ ಮೂರ್ತಿ ಯವರ ನೇತೃತ್ವದಲ್ಲಿ ನೆರವೇರಿಸಲಾಯಿತು, ಸಾಧಕರಿಗೆ ಸನ್ಮಾನವನ್ನು ಖ್ಯಾತ ಹಿನ್ನಲೆ ಗಾಯಕ ಶಶಿಧರ್ ಕೋಟೆ ಮಾಡಿ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು,
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ, ರಾಘವೇಂದ್ರ ರಾವ್ ವಹಿಸಿದ್ದರು, ಉಪಾಧ್ಯಕ್ಷರಾದ ಡಾ, ಕಿರಣ್ ಎಸ್ ಮೂರ್ತಿ, ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ಪ್ರಾಣೇಶ್ ರಾವ್, ಲಕ್ಷ್ಮೀಶ ಎಸ್, ಎಸ್. ಮಹೇಶ್ ಕುಮಾರ್, ಖಜಾಂಚಿ ಎನ್ ರಾಘವೇಂದ್ರ ರಾವ್, ಹಿರಿಯ ಸದಸ್ಯರಾದ ಡಾ, ರಘುನಾಥ್ ರಾವ್, ಎನ್.ಕೆ. ರಾಮಚಂದ್ರ ರಾವ್, ಟಿ. ಎನ್. ಶಾಂತ ಕುಮಾರ್ ಸೇರಿದಂತೆ ಐನೂರ್ ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.