ಬಜೆಟ್‌ ಹಲ್ವಾ ಬಗ್ಗೆ ರಾಹುಲ್‌ ಗಾಂಧಿ ವ್ಯಾಖ್ಯಾನ ; ಹಣೆಹಣೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್‌!

VK NEWS
By -
0

 


 ಕೇಂದ್ರ ಬಜೆಟ್‌ ಬಗ್ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಸೋಮವಾರ ಮಾತನಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು. ಹಲವು ಅಂಶಗಳನ್ನು ಪ್ರಸ್ತಾಪಿಸಿ ಕೇಂದ್ರಕ್ಕೆ ತಿವಿದ ರಾಹುಲ್‌ ಗಾಂಧಿ, ಬಜೆಟ್‌ ಹಲ್ವಾದ ವ್ಯಾಖ್ಯಾನ ಮಾಡಿದರು. ಬಜೆಟ್ ಹಲ್ವಾ ಬಗ್ಗೆ ರಾಹುಲ್ ಗಾಂಧಿ ವಾಖ್ಯಾನ ಮಾಡುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಣೆಹಣೆ ಚಚ್ಚಿಕೊಂಡ ಪ್ರಸಂಗ ಸದನದ ಗಮನ ಸೆಳೆಯಿತು.

ಕೇಂದ್ರ ಬಜೆಟ್‌ ಬಗ್ಗೆ ಮಾತನಾಡುತ್ತಿದ್ದಾಗ ಹಲ್ವಾ ಸಂಭ್ರಮದ ಫೋಟೋ ತೋರಿಸಿದ ರಾಹುಲ್‌ ಗಾಂಧಿ, ಈ ಫೋಟೋದಲ್ಲಿ ನನಗೆ ಓರ್ವ ಒಬಿಸಿ ಅಧಿಕಾರಿ ಕಾಣ್ತಿಲ್ಲ, ಓರ್ವ ಆದಿವಾಸಿ ಅಧಿಕಾರಿ ಕಾಣ್ತಿಲ್ಲ, ಓರ್ವ ಅಲ್ಪಸಂಖ್ಯಾತ ಅಧಿಕಾರಿ ಕಾಣ್ತಿಲ್ಲ, ಏನಾಗ್ತಿದೆ ಸರ್‌ ಎಂದು ಪ್ರಶ್ನಿಸಿದರು. ರಾಹುಲ್‌ ಗಾಂಧಿ ಪ್ರಶ್ನೆಗೆ ಅಚ್ಚರಿಗೆ ಒಳಗಾದ ನಿರ್ಮಲಾ ಸೀತಾರಾಮನ್‌ ತಲೆ ಚಚ್ಚಿಕೊಂಡರು. ಬಜೆಟ್‌ ತಯಾರಿಕೆಯಲ್ಲಿ 20 ಅಧಿಕಾರಿಗಳು ಇದ್ದರು. ಅವರ ಹೆಸರು ನನ್ನತ್ತಿರ ಇವೆ. ಅದರಲ್ಲಿ ಒಬ್ಬರು ಒಬಿಸಿ, ಒಬ್ಬರು ಅಲ್ಪಸಂಖ್ಯಾತರು ಇದ್ದಾರೆ. ಆದರೆ, ಫೋಟೋದಲ್ಲಿ ಅವರಿಬ್ಬರೂ ಕಾಣೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರು. ರಾಹುಲ್ ಗಾಂಧಿ ಮಾತು ಕೇಳಿ ಅವರ ಹಿಂದೆ ಕುಳಿತಿದ್ದ ಅವರ ಒಕ್ಕೂಟದ ಸಂಸದರೇ ಮುಸಿ ಮುಸಿ ನಗುತ್ತಿದ್ದರು.

Post a Comment

0Comments

Post a Comment (0)