ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್

VK NEWS
By -
0

 3ದಿನಗಳ ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಮೇಳ 




ಜುಲೈ 30ರಿಂದ 3 ದಿನಗಳ ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಜವಳಿ ಸಮಾವೇಶ* ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನಲ್ಲಿ ಜುಲೈ 30ರಿಂದ ಅಗಸ್ಟ್ 1ನೇ ತಾರೀಖವರಗೆ 3ದಿನಗಳ ಸಿದ್ಧ ಉಡುಪು ರಾಷ್ಟ್ರಮಟ್ಟದ ಸಮಾವೇಶ 29ನೇ ವೈವಿಧ್ಯಮ ವಿನ್ಯಾಸಗಳ 29ನೇ ನಾವೀನ್ಯತೆ ಪ್ಯಾಷನ್ ಉತ್ಸವ ; 150 ಕ್ಕೂ ಹೆಚ್ಚು ನವನೀನ ಬ್ರ್ಯಾಂಡ್ ಗಳು, ವಿನ್ಯಾಸಗಳು - ವ್ಯಾಪಾರಿ ವಲಯಕ್ಕೆ ಅತ್ಯುತ್ತಮ ವೇದಿಕೆ. ಬೆಂಗಳೂರು, ಜು, 28; ಐಟಿ-ಬಿಟಿ ನಂತರ ಜವಳಿ ವಲಯದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸುತ್ತಿರುವ ರಾಜ್ಯದಲ್ಲಿ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಸಿದ್ಧಉಡುಪು ಕ್ಷೇತ್ರದಲ್ಲಿ ವ್ಯಾಪಾರಿ ವಲಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜುಲೈ 30ರಿಂದ ಅಗಸ್ಟ್ 1ನೇ ವರಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗೇಟ್ ನಂಬ-9ಪ್ರಿನ್ಸೆಸ್ ಶ್ರೈನ್ 29ನೇ ವೈವಿಧ್ಯಮ ವಿನ್ಯಾಸಗಳ 29 ನೇ ನಾವೀನ್ಯತೆ ಪ್ಯಾಷನ್ ಉತ್ಸವ -2024 ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ಇದು ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಉತ್ಸವವಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳ 150 ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್ ಗಳು, ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ, ತೊಡುಗೆ, ಔಪಚಾರಿಕ, ಅನೌಪಚಾರಿಕ ವಸ್ತ್ರಗಳು, ಚಳಿಗಾಲದ ಉಡುಪುಗಳ ಪ್ರದರ್ಶನ ಇರಲಿದೆ. ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ ನಲ್ಲಿ ಗಣ್ಯರು ಉದ್ಘಾಟಿಸಲಿದ್ದಾರೆ. ಒಂದು ತಿಂಗಳ ಹಿಂದೆಯೇ 100 ಕ್ಕೂ ಹೆಚ್ಚು ಜವಳಿ ಉತ್ಪಾದಕರು ಜವಳಿ ಉತ್ಸವದಲ್ಲಿ ಪಾಲ್ಗೊಳ್ಳಲು ಮುಂಗಡ ಕಾಯ್ದಿರಿಸಿದ್ದು, ಸೂರತ್, ಜೈಪುರ, ದೆಹಲಿ, ಅಮಹದಾಬಾದ್, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳ ಜವಳಿ ಉತ್ಪಾದಕರು ಪಾಲ್ಗೊಳ್ಳುತ್ತಿದ್ದಾರೆ. ದೇಸೀಯ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು, ರಿಲಯನ್ಸ್ ರಿಟೈಲ್ ಪ್ಯಾಷನ್ ಬ್ರ್ಯಾಂಡ್, ಮುಂಬೈನ ಖ್ಯಾತ ಜೋಲಾ ಸೇರಿದಂತೆ ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳು ಭಾಗವಹಿಸುತ್ತಿವೆ.


 2,500 ಕ್ಕೂ ಹೆಚ್ಚು ಜವಳಿ ವ್ಯಾಪಾರಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 100 ಕೋಟಿ ಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಮಹಿಳಾ ಉದ್ಯಮ ವಲಯ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಸ್ತ್ರೀ ಸ್ವಸಹಾಯ ಸಂಘಗಳು ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲೂ ತೊಡಗಿಕೊಂಡಿವೆ. ಮಹಿಳಾ ವಲಯದ ವ್ಯಾಪಾರ ವಹಿವಾಟಿಗೆ ಈ ಮೇಳ ಅತ್ಯಂತ ಮಹತ್ವದ್ದಾಗಿದೆ. ಚಿಲ್ಲರೆ ಬಟ್ಟೆ ಅಂಗಡಿಗಳಿಗೆ ಉತ್ಕೃಷ್ಟ ಮತ್ತು ಅತ್ಯುನ್ನತ ಗುಣಮಟ್ಟದ ಬ್ರ್ಯಾಂಡ್ ಗಳನ್ನು ಪೂರೈಸಲಾಗುವುದು. 

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ ನರೇಶ್ ಲಕ್ನಪಾಲ್, ತೇಜಸ್ಮೆಹತ್ ಉಪಸ್ಥಿತರಿದ್ದರು.

Post a Comment

0Comments

Post a Comment (0)